ಟೋಕಿಯೋ: ಜಾವಲಿನ್ ಥ್ರೋವರ್ ಶಿವಪಾಲ್ ಸಿಂಗ್ 2020ರ ಟೋಕಿಯೋ ಒಲಿಂಪಿಕ್ ಪುರುಷರ ಲಾಂಗ್ ಥ್ರೋನ್ ಕ್ವಾಲಿಫಿಕೇಷನ್ ವಿಭಾಗದಲ್ಲಿ ಸೋಲು ಕಂಡರು. ತಮ್ಮ ಮೂರು ಪ್ರಯತ್ನಗಳಲ್ಲಿ ಸಿಂಗ್ 76.40 ಮೀ, 74.80 ಮೀ ಮತ್ತು 74.81 ಮೀ ದೂರದವರೆಗೆ ಜಾವಲಿನ್ ಎಸೆದರು. ಆದರೆ 83.50 ಮೀ ಅರ್ಹತೆಯ ಗುರಿಯಾಗಿತ್ತು.
ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸ್ಥಳೀಯ ಅಥ್ಲೆಟಿಕ್ಸ್ ಕೂಟದಲ್ಲಿ ಶಿವಪಾಲ್ ಸಿಂಗ್ 85.47 ಮೀಟರ್ ದೂರ ಜಾವಲಿನ್ ಎಸೆದಿದ್ದರು. ಈ ಮೂಲಕ ಒಲಿಂಪಿಕ್ಸ್ನಲ್ಲಿ ಅರ್ಹತೆ ಪಡೆದಿದ್ದರು. ಅಷ್ಟೇ ಅಲ್ಲದೆ, ಟೋಕಿಯೋ ಒಲಿಂಪಿಕ್‌ಗೆ ಅರ್ಹತೆ ಪಡೆದ ಭಾರತದ 41ನೇ ಅಥ್ಲೀಟ್ ಎನ್ನುವ ಗೌರವಕ್ಕೆ ಶಿವಪಾಲ್ ಸಿಂಗ್ ಪಾತ್ರರಾಗಿದ್ದಾರೆ. ಜೊತೆಗೆ ಜಾವಲಿನ್‌ನಲ್ಲಿ ಅರ್ಹತೆ ಪಡೆದ ಭಾರತದ ಎರಡನೇ ಥ್ರೋವರ್ ಶಿವಪಾಲ್.
ಇದನ್ನೂ ಓದಿ: Tokyo Olympics Javelin: ಮೊದಲ ಪ್ರಯತ್ನದಲ್ಲಿ ಫೈನಲ್ಗೇರಿದ ನೀರಜ್ ಚೋಪ್ರಾ!
ಭಾರತದ 23 ವರ್ಷದ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. 15ನೇ ಪೊಸಿಷನ್ನಲ್ಲಿ ಲಾಂಗ್ ಥ್ರೋನ್ ಮಾಡಿದ ಅವರು ಸುಮಾರು 86.65 ಮೀಟರ್ ಜಾವೆಲಿನ್ ಥ್ರೋ ಮಾಡುವ ಮೂಲಕ ನೇರವಾಗಿ ಅವರು ಫೈನಲ್ಗೆ ಲಗ್ಗೆ ಇಟ್ಟರು.