ETV Bharat / bharat

ರೆಮ್ಡಿಸಿವಿರ್​ ಉತ್ಪಾದನಾ ಸಾಮರ್ಥ್ಯ ಜೂನ್‌ನಲ್ಲಿ 122.49 ಲಕ್ಷ ವಯಲ್ಸ್​ಗೆ ಹೆಚ್ಚಳ : ಕೇಂದ್ರ ಸರ್ಕಾರ - ಭಾರತದ ರೆಮ್ಡಿಸಿವಿರ್​ ಉತ್ಪಾದನಾ ಸಾಮರ್ಥ್ಯ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 29 ಲಕ್ಷ ರೆಮ್ಡಿಸಿವಿರ್​ ಬಾಟಲುಗಳನ್ನು ಡಿಒಪಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಉಚಿತವಾಗಿ ಪೂರೈಸಿದೆ. ಸದ್ಯ ಬೇಡಿಕೆಗಿಂತ ರೆಮ್ಡಿಸಿವಿರ್​ ಪೂರೈಕೆ ಹೆಚ್ಚಳವಾಗಿದೆ..

Remdesivir
122.49 ಲಕ್ಷ ವಯಲ್ಸ್​ಗೆ ಹೆಚ್ಚಾಗಿದೆ
author img

By

Published : Aug 3, 2021, 8:12 PM IST

ನವದೆಹಲಿ : ಭಾರತದ ರೆಮ್ಡಿಸಿವಿರ್​ ಉತ್ಪಾದನಾ ಸಾಮರ್ಥ್ಯವು ಏಪ್ರಿಲ್ ಮಧ್ಯದಲ್ಲಿ ತಿಂಗಳಿಗೆ 38.8 ಲಕ್ಷ ಬಾಟಲಿಗಳಿಂದ ಜೂನ್ 2021ರಲ್ಲಿ 122.49 ಲಕ್ಷ ಬಾಟಲುಗಳಿಗೆ ಏರಿದೆ ಮತ್ತು ಈವರೆಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಆಂಟಿವೈರಲ್ ಔಷಧದ ಕೊರತೆಯಿಲ್ಲ ಇಂದು ರಾಜ್ಯಸಭೆಗೆ ತಿಳಿಸಲಾಗಿದೆ.

ಏಪ್ರಿಲ್ ಮತ್ತು ಮೇ 2021ರಲ್ಲಿ ಕೋವಿಡ್-19 ರೋಗಿಗಳ ನಿರ್ವಹಣೆಗೆ ಇದ್ದಕ್ಕಿದ್ದಂತೆ ರೆಮ್ಡಿಸಿವಿರ್​ ಬೇಡಿಕೆ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದಿನ ಕೊರತೆಯಾದ್ದು ಗಮನಕ್ಕೆ ಬಂತು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.

ರೆಮ್ಡಿಸಿವಿರ್​ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಸಲುವಾಗಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಔಷಧದ ಪರವಾನಿಗೆ ಪಡೆದ ತಯಾರಕರ 40 ಹೊಸ ಉತ್ಪಾದನಾ ಸ್ಥಳಗಳಿಗೆ ತ್ವರಿತ ಅನುಮೋದನೆಯನ್ನು ನೀಡಿದೆ ಎಂದು ಅವರು ಹೇಳಿದರು.

"ಇದು ರೆಮ್ಡೆಸಿವಿರ್ ಉತ್ಪಾದನಾ ಸ್ಥಳಗಳ ಸಂಖ್ಯೆಯನ್ನು ಏಪ್ರಿಲ್ 2021ರ ಮಧ್ಯದಲ್ಲಿ 22ರಿಂದ ಪ್ರಸ್ತುತ 62ಕ್ಕೆ ಹೆಚ್ಚಿಸಲು ಕಾರಣವಾಯಿತು. ರೆಮ್ಡೆಸಿವಿರ್​ನ ದೇಶೀಯ ಉತ್ಪಾದನಾ ಸಾಮರ್ಥ್ಯವು ಏಪ್ರಿಲ್ ಮಧ್ಯದಲ್ಲಿ ತಿಂಗಳಿಗೆ 38.8 ಲಕ್ಷ ವಯಲ್ಸ್​​ನಿಂದ ಜೂನ್ ತಿಂಗಳಲ್ಲಿ 122.49 ಲಕ್ಷ ವಯಲ್ಸ್​ಗಳಿಗೆ ಏರಿಕೆಯಾಗಿದೆ " ಎಂದು ಸಚಿವರು ಹೇಳಿದರು.

ಇದಲ್ಲದೆ, ದೇಶದಲ್ಲಿ ತಯಾರಾದ ರೆಮ್ಡಿಸಿವಿರ್ ಲಭ್ಯತೆಗೆ ಪೂರಕವಾಗಿ, ರೆಮ್ಡಿಸಿವಿರ್ ಇಂಜೆಕ್ಷನ್ ಮತ್ತು ರೆಮ್ಡಿಸಿವಿರ್ ಎಪಿಐ (ಆಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರೆಡಿಯಂಟ್) ರಫ್ತು ಮಾಡುವುದನ್ನು ಏಪ್ರಿಲ್ 11, 2021ರಿಂದ ನಿಷೇಧಿಸಲಾಗಿದೆ.

ಡಿಒಪಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoH & FW) ಜಂಟಿಯಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಿರುವ ರೆಮ್ಡಿಸಿವಿರ್​ ಸ್ಟಾಕ್‌ಗಳ ಹಂಚಿಕೆಗಾಗಿ ಕೊರತೆ ನೀಗಿಸಲು ಮತ್ತು ನ್ಯಾಯಯುತ ಮತ್ತು ಸಮನಾದ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳಲು ಕ್ರಮಕೈಗೊಂಡಿವೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 29 ಲಕ್ಷ ರೆಮ್ಡಿಸಿವಿರ್​ ಬಾಟಲುಗಳನ್ನು ಡಿಒಪಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಉಚಿತವಾಗಿ ಪೂರೈಸಿದೆ. ಸದ್ಯ ಬೇಡಿಕೆಗಿಂತ ರೆಮ್ಡಿಸಿವಿರ್​ ಪೂರೈಕೆ ಹೆಚ್ಚಳವಾಗಿದೆ ಎಂದು ಮಾಂಡವೀಯ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.