ETV Bharat / bharat

ಭಾರತದ ಪಿಸಿ, ಟ್ಯಾಬ್ಲೆಟ್ ಮಾರುಕಟ್ಟೆ ಶೇ 5ರಷ್ಟು ಬೆಳವಣಿಗೆ: 1 ಕೋಟಿ 96 ಲಕ್ಷ ಯುನಿಟ್ ಮಾರಾಟ - ಕಳೆದ ವರ್ಷ ಪಿಸಿ ಮಾರಾಟ

ಭಾರತದ ಪಿಸಿ ಮತ್ತು ಟ್ಯಾಬ್ಲೆಟ್​ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಕಳೆದ ವರ್ಷದಲ್ಲಿ ಪಿಸಿಗಳ ಮಾರಾಟ ಶೇಕಡಾ 5 ರಷ್ಟು ಹೆಚ್ಚಾಗಿದೆ.

India's PC, tablet market grew 5% to reach 19.6 mn units in 2022

author img

By

Published : Mar 30, 2023, 3:28 PM IST

ನವದೆಹಲಿ : 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ತೀವ್ರ ಕುಸಿತದ ಹೊರತಾಗಿಯೂ, ಕಳೆದ ವರ್ಷ ಭಾರತೀಯ ಪಿಸಿ ಮಾರುಕಟ್ಟೆಗೆ (ಡೆಸ್ಕ್‌ಟಾಪ್‌ಗಳು, ನೋಟ್‌ಬುಕ್‌ಗಳು ಮತ್ತು ಟ್ಯಾಬ್ಲೆಟ್‌ಗಳು) ಲಾಭದಾಯಕ ವರ್ಷವಾಗಿತ್ತು. ಕಳೆದ ವರ್ಷ ಪಿಸಿ ಮಾರಾಟದಲ್ಲಿ ಶೇಕಡಾ 5 ರಷ್ಟು ಏರಿಕೆಯಾಗಿ 19.6 ಮಿಲಿಯನ್ ಯುನಿಟ್‌ಗಳಿಗೆ (1 ಕೋಟಿ 96 ಲಕ್ಷ) ತಲುಪಿದೆ. ಪಿಸಿ ನೋಟ್‌ಬುಕ್ ಮಾರಾಟ ಶೇಕಡಾ 7 ರಷ್ಟು ಕುಸಿದು 11 ಮಿಲಿಯನ್ ಯುನಿಟ್‌ಗಳಿಗೆ ತಲುಪಿದ್ದರೆ, ಡೆಸ್ಕ್‌ಟಾಪ್ ಮತ್ತು ಟ್ಯಾಬ್ಲೆಟ್ ಮಾರಾಟ 2022 ರಲ್ಲಿ 37 ಶೇಕಡಾ ಮತ್ತು 21 ಶೇಕಡಾದಿಂದ 3.2 ಮಿಲಿಯನ್ ಮತ್ತು 5.4 ಮಿಲಿಯನ್ ಯುನಿಟ್‌ಗಳಿಗೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ವರದಿ ಮಾಡಿದೆ.

ಭಾರತದ ಪಿಸಿ ಮಾರುಕಟ್ಟೆಯಲ್ಲಿ (ಟ್ಯಾಬ್ಲೆಟ್ ಹೊರತುಪಡಿಸಿ) ಎಚ್​ಪಿ ಪಾರಮ್ಯ ಮೆರೆದಿದೆ. 4ನೇ ತ್ರೈಮಾಸಿಕದಲ್ಲಿ ಹಾಗೂ ಇಡೀ ವರ್ಷದಲ್ಲಿ ಪಿಸಿಗಳು ಶೇ 30ರಷ್ಟು ಪಾಲು ಹೊಂದಿವೆ. ಲೆನೊವೊ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆದಾಗ್ಯೂ ಅದು 2022 ರ 4ನೇ ತ್ರೈಮಾಸಿಕದಲ್ಲಿ ಶೇ 31 ರಷ್ಟು ಮಾರಾಟ ಕುಸಿತ ಕಂಡಿದೆ. ಆದಾಗ್ಯೂ, ಲೆನೊವೊದ ಒಟ್ಟು 2022 ರ ಮಾರಾಟ 2021 ರಲ್ಲಿ ಶೇಕಡಾ 3 ರಷ್ಟು ಹೆಚ್ಚಾಗಿದೆ.

ಡೆಲ್ ಮತ್ತು ಏಸರ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿವೆ. ಆದರೆ ಆಪಲ್ 2022 ರ 4ನೇ ತ್ರೈಮಾಸಿಕದಲ್ಲಿ ಆಸುಸ್ ಅನ್ನು ಹಿಂದಿಕ್ಕಿ ಅಗ್ರ ಐದರಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತು. ಆಪಲ್ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು, 2022 ರ 4ನೇ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್​ ಅನ್ನು ಹಿಂದಿಕ್ಕಿದೆ ಎಂದು ವರದಿ ಹೇಳಿದೆ. ಭಾರತೀಯ ಗ್ರಾಹಕರು 2022 ರ ಮೊದಲಾರ್ಧದಲ್ಲಿ ಕಂಪ್ಯೂಟರ್ ಸಾಧನಗಳನ್ನು ಕೊಳ್ಳಲು ಖರ್ಚು ಮಾಡಿದರಾದರೂ, ಖರೀದಿಸುವಿಕೆಯು ಬಹು ಬೇಗನೆ ಕುಸಿಯಿತು. ಇದರಿಂದ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸಂಕಷ್ಟದ ಸಮಯ ತಂದೊಡ್ಡಿತು ಎಂದು ವಿಶ್ಲೇಷಕ ಅಶ್ವೀಜ್ ಐತಾಳ್ ಹೇಳಿದರು.

ಜಾಗತಿಕ ಆರ್ಥಿಕ ಹಿಂಜರಿತವು ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಬಹುದಾದರೂ, ವಿಶ್ವದ ಇತರ ಮಾರುಕಟ್ಟೆಗಳಿಗೆ ಹೋಲಿಸಿದರೆ ದೇಶದ ಒಟ್ಟಾರೆ ಜಿಡಿಪಿ ಬೆಳವಣಿಗೆಯ ನಿರೀಕ್ಷೆಗಳು ಧನಾತ್ಮಕವಾಗಿವೆ. ಶೈಕ್ಷಣಿಕ ವಲಯದ ಬೇಡಿಕೆಯ ಕಾರಣದಿಂದ ಈ ವರ್ಷ ಭಾರತದ ಪಿಸಿ ಮತ್ತು ಟ್ಯಾಬ್ಲೆಟ್​ ಮಾರುಕಟ್ಟೆ ಚೇತರಿಕೆ ಕಾಣಬಹುದು ಎಂದು ಐತಾಳ್ ತಿಳಿಸಿದರು.

ಲ್ಯಾಪ್‌ಟಾಪ್‌ಗಳನ್ನು ಪೋರ್ಟಬಲ್ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಪ್ರಯಾಣದಲ್ಲಿರುವಾಗಲೂ ಕೆಲಸಕ್ಕೆ ಉಪಯೋಗವಾಗುವಂತೆ ಇದರಲ್ಲಿ ಸಾಕಷ್ಟು ಶಕ್ತಿಶಾಲಿ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಮತ್ತೊಂದೆಡೆ, ಟ್ಯಾಬ್ಲೆಟ್ ಅನ್ನು ಸಾಮಾನ್ಯವಾಗಿ ಟ್ಯಾಬ್ಲೆಟ್ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ, ಇದು ಮೊಬೈಲ್ ಓಎಸ್ ಆಧರಿಸಿ ಕೆಲಸ ಮಾಡುವ ಸಾಧನವಾಗಿದೆ. ಲ್ಯಾಪ್‌ಟಾಪ್‌ನ ಬ್ಯಾಟರಿ ಬಾಳಿಕೆಗಿಂತ ಟ್ಯಾಬ್ಲೆಟ್‌ನ ಬ್ಯಾಟರಿ ಬಾಳಿಕೆ ಹೆಚ್ಚು. ಇದನ್ನು ಸುಲಭವಾಗಿ ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ : ವಾಟ್ಸ್​ಆ್ಯಪ್ ಹೊಸ ಸ್ಟಿಕ್ಕರ್ಸ್​ ಬಿಡುಗಡೆ: ವಿಡಿಯೋ ಕಾಲಿಂಗ್ ಸುಧಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.