ETV Bharat / bharat

ರಕ್ತಹೀನತೆ ಸಮಸ್ಯೆ ನಿರ್ಮೂಲನೆಗೆ ಬಜೆಟ್​ನಲ್ಲಿ ಕ್ರಮ: ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಐಎಂಎ

ಮನುಷ್ಯರ ಕೆಂಪು ರಕ್ತ ಕಣಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಿಕಲ್ ಸೆಲ್ ಅನಿಮಿಯಾ ರೋಗ ನಿರ್ಮೂಲನೆ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ರೋಗದ ಬಗ್ಗೆ ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್‌ನಲ್ಲಿ ಗಮನ ಹರಿಸಲಾಗಿದೆ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್‌ಕುಮಾರ್ ಜೆ.ನಾಯಕ್ ಹೇಳಿದರು.

author img

By

Published : Feb 1, 2023, 5:44 PM IST

indias-health-sector-hails-union-budget-2023-24
ರಕ್ತಹೀನತೆ ಸಮಸ್ಯೆ ನಿರ್ಮೂಲನೆ ಬಗ್ಗೆ ಬಜೆಟ್​ನಲ್ಲಿ ಘೋಷಣೆ: ಸರ್ಕಾರವನ್ನು ಶ್ಲಾಘಿಸಿದ ಐಎಂಎ

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಪ್ರಮುಖವಾಗಿ, 2047ರ ವೇಳೆಗೆ ನಾಗರಿಕರಲ್ಲಿನ ರಕ್ತಹೀನತೆ ಸಮಸ್ಯೆಯನ್ನು ತೊಡೆದುಹಾಕಲು ಯೋಜನೆ ಘೋಷಿಸಲಾಗಿದೆ. ಸರ್ಕಾರದ ಮಹತ್ವದ ಕ್ರಮವನ್ನು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬಜೆಟ್‌ನ ಒಟ್ಟು ಗಾತ್ರ ಗೊತ್ತೇ?: ದೇಶದ ವಿತ್ತೀಯ ಕೊರತೆಯೇನು? ಯಾವುದಕ್ಕೆ ಎಷ್ಟು ಖರ್ಚು?

ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ 2047ರ ವೇಳೆಗೆ ರಕ್ತಹೀನತೆಗೆ ಸಂಬಂಧಿಸಿದ ಸಿಕಲ್ ಸೆಲ್ ಅನಿಮಿಯಾ (sickle cell anemia) ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಇದರ ಮೂಲಕ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಜೊತೆಗೆ, ರೋಗಪೀಡಿತ ಬುಡಕಟ್ಟು ಪ್ರದೇಶಗಳಲ್ಲಿ ಹುಟ್ಟಿದ ಮಗುವಿನಿಂದ ಹಿಡಿದು 40 ವರ್ಷ ವಯಸ್ಸಿನ ಏಳು ಕೋಟಿ ಜನರ ಸಾರ್ವತ್ರಿಕ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ನಡೆಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತ್‌ ಜೊತೆ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್‌ಕುಮಾರ್ ಜೆ. ನಾಯಕ್, "ಇದು ನಿಜವಾಗಿಯೂ ಉತ್ತಮ ಬಜೆಟ್. ಈ ಬಜೆಟ್​ನಲ್ಲಿ ಸಿಕಲ್ ಸೆಲ್ ಅನಿಮಿಯಾವನ್ನು ಎದುರಿಸಲು ಪ್ರಾಮುಖ್ಯತೆ ನೀಡಲಾಗಿದೆ. ರಕ್ತಹೀನತೆಯು ದೇಶದ ಬುಡಕಟ್ಟು ಸಮುದಾಯಗಳ ಜನರ ಆರೋಗ್ಯ ಸಮಸ್ಯೆಗಳಲ್ಲೇ ಪ್ರಮುಖ ಸಮಸ್ಯೆ" ಎಂದು ತಿಳಿಸಿದರು.

ಮೊದಲ ಬಾರಿಗೆ ಕ್ರಮ: ಗುಜರಾತ್‌ನಲ್ಲಿ ಈ ರೋಗಬಾಧೆ ಹೆಚ್ಚಿದ್ದು ಬಹುತೇಕ ಎಲ್ಲ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿನ ಜನರು ಸಿಕಲ್ ಸೆಲ್ ಅನಿಮಿಯಾದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್‌ನಲ್ಲಿ ಗಮನ ಕೇಂದ್ರೀಕರಿಸಲಾಗಿದೆ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಇದೇ ವೇಳೆ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಇತರ ಪ್ರಮುಖ ಅಂಶಗಳನ್ನೂ ಉಲ್ಲೇಖಿಸಿ ಬಜೆಟ್​ ಅನ್ನು ಅವರು ಶ್ಲಾಘಿಸಿದರು.

ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಅಧ್ಯಾಪಕರಿಗೆ ಸಂಶೋಧನಾ ಉದ್ದೇಶಗಳಿಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಲಭ್ಯವಾಗುವಂತೆ ಮಾಡಿರುವುದು ಶ್ಲಾಘನೀಯ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್​ ಡಿ)ಗೆ ಹೆಚ್ಚಿನ ಉತ್ತೇಜನ ನೀಡುತ್ತದೆ ಎಂದು ಡಾ.ನಾಯಕ್ ಹೇಳಿದರು.

157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ: ಕೇಂದ್ರದ ಬಜೆಟ್​ನಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ತೆರೆಯುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಹೊಸ ನರ್ಸಿಂಗ್​ ಕಾಲೇಜುಗಳಿಂದ ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಿದಂತಾಗಲಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಅಗತ್ಯವಿರುವಾಗಲೆಲ್ಲ ಸರ್ಕಾರವು ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡಲು ಇನ್ನೂ ಕೆಲವು ಪ್ಯಾಕೇಜ್‌ಗಳನ್ನು ಖಂಡಿತವಾಗಿಯೂ ಘೋಷಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

2014ರಲ್ಲಿ ಸ್ಥಾಪಿಸಲಾದ 157 ವೈದ್ಯಕೀಯ ಕಾಲೇಜುಗಳೊಂದಿಗೆ ಲಭ್ಯ ಸ್ಥಳಗಳಲ್ಲೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಇಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಬಜೆಟ್​ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ನಮ್ಮ ಸರ್ಕಾರವು ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸಲು ಹಾಗೂ ಜೀವನವನ್ನು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ: ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.