ETV Bharat / bharat

ಭಾರತದ ಕೋವಿಡ್​ - 19 ನಿರ್ವಹಣೆ, ಲಸಿಕಾಕರಣ ಅದ್ಭುತ: ಮೆಲಿಂಡಾ ಗೇಟ್ಸ್​ ಶ್ಲಾಘನೆ

ಅತ್ಯಂತ ಕ್ರಿಪ್ರವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿ, ದೇಶದ ಬಹುತೇಕ ಜನಸಂಖ್ಯೆಗೆ ಕೋವಿಡ್​-19 ಲಸಿಕೆ ನೀಡಿದ ಭಾರತ ಸರ್ಕಾರವನ್ನು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್​ ಫೌಂಡೇಶನ್ ಸಹ-ಅಧ್ಯಕ್ಷೆ ಮೆಲಿಂಡಾ ಫ್ರೆಂಚ್ ಗೇಟ್ಸ್​ ಶ್ಲಾಘಿಸಿದ್ದಾರೆ.

melinda-gates-on-india-covid-management-and-vaccination-drive

author img

By

Published : Mar 9, 2023, 2:50 PM IST

ನವದೆಹಲಿ : ಕೋವಿಡ್​-19 ಲಸಿಕಾ ಅಭಿಯಾನವನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್​ ಫೌಂಡೇಶನ್ ಸಹ ಅಧ್ಯಕ್ಷೆ ಮೆಲಿಂಡಾ ಫ್ರೆಂಚ್ ಗೇಟ್ಸ್​ ಶ್ಲಾಘಿಸಿದ್ದು, ಕೋವಿಡ್​ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿದ ಮೆಲಿಂಡಾ ಗೇಟ್ಸ್​, ದೇಶದ ಯಶಸ್ವಿ ಕೋವಿಡ್ ಲಸಿಕೆ ಅಭಿಯಾನಕ್ಕಾಗಿ ಸಚಿವರನ್ನು ಅಭಿನಂದಿಸಿದರು.

ಡಾ. ಮನ್ಸುಖ್ ಮಾಂಡವಿಯಾ ಮತ್ತು ಮೆಲಿಂಡಾ ಗೇಟ್ಸ್ ಅವರು ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆಗಳು ಮತ್ತು ಹೊಸ ಅವಕಾಶಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ವಿಶೇಷವಾಗಿ ಆಯುಷ್ಮಾನ್ ಭಾರತ್ ಅಡಿ ಆರೋಗ್ಯ ಮೂಲಸೌಕರ್ಯ ಮತ್ತು ಡಿಜಿಟಲ್ ಆರೋಗ್ಯ ಮಿಷನ್ ಬಲಪಡಿಸಲು ಒತ್ತು ನೀಡಿದರು ಎಂದು ಪ್ರಕಟಣೆ ತಿಳಿಸಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಕಾರ್ಯಕ್ರಮ ಮತ್ತು ನೀತಿಗಳನ್ನು ಶ್ಲಾಘಿಸಿದ ಅವರು, ಮಹಿಳೆಯರು ಮತ್ತು ಯುವತಿಯರಿಗೆ ಈ ಹಿಂದೆಂದಿಗಿಂತಲೂ ಹೆಚ್ಚು ಅವಕಾಶಗಳನ್ನು ಆರೋಗ್ಯ ಸಚಿವಾಲಯ ಒದಗಿಸಿದೆ ಎಂದು ಹೇಳಿದರು.

ವಿಶೇಷವಾಗಿ ಭಾರತ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕಾಗಿ ಭಾರತೀಯ ಲಸಿಕೆ ತಯಾರಿಕೆ ಮತ್ತು ಡಿಜಿಟಲ್ ಸೌಲಭ್ಯಗಳನ್ನು ಬಳಸಿಕೊಳ್ಳುವ ಅವಕಾಶಗಳ ಬಗ್ಗೆ ಅವರು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಡಾ. ಮಾಂಡವಿಯಾ ಮತ್ತು ಮೆಲಿಂಡಾ ಗೇಟ್ಸ್, 'ಗ್ರಾಸ್‌ರೂಟ್ ಸೋಲ್ಜರ್ಸ್: ಭಾರತದಲ್ಲಿ COVID-19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ANM ಗಳ ಪಾತ್ರ' ಎಂಬ ಶೀರ್ಷಿಕೆಯ ವರದಿ ಅನಾವರಣಗೊಳಿಸಿದರು.

ಕೋವಿಡ್​ ಸಾಂಕ್ರಾಮಿಕದ ಸಮಯದಲ್ಲಿ ಆರೈಕೆ ಮಾಡುವ ಮತ್ತು ನಾಯಕತ್ವದ ಪಾತ್ರ ವಹಿಸಿದ ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರು ನಮ್ಮ ನಿಜವಾದ ಹೀರೊಗಳಾಗಿ ಹೊಹೊಮ್ಮಿದ್ದಾರೆ. ಅದ್ಭುತವಾದ ಸಮರ್ಪಣಾ ಭಾವ ಮತ್ತು ಬದ್ಧತೆಯೊಂದಿಗೆ ಅಂಥ ದೊಡ್ಡ ಬಿಕ್ಕಟ್ಟನ್ನು ಪರಿಹರಿಸುವ ಮತ್ತು ನಿರ್ವಹಿಸುವಲ್ಲಿ ಕೆಲಸ ಮಾಡಿದ ಅವರ ಕಥೆಯನ್ನು ದಾಖಲಿಸುವುದು ಮತ್ತು ಹಂಚಿಕೊಳ್ಳುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (NHSRC) ಮತ್ತು ಸ್ಪರ್ಧಾತ್ಮಕತೆ ಸಂಸ್ಥೆ (IFC)ಗಳ ಸಹಯೋಗದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ.

ಪ್ರಮುಖ ಆರೋಗ್ಯ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದ ಮೆಲಿಂಡಾ ಗೇಟ್ಸ್, ಇಷ್ಟು ಕಡಿಮೆ ಸಮಯದಲ್ಲಿ ಭಾರತವು ತನ್ನ ಜನಸಂಖ್ಯೆಯ ಶೇ 90 ಕ್ಕಿಂತ ಹೆಚ್ಚು ಜನರಿಗೆ ವ್ಯಾಕ್ಸಿನೇಷನ್ ನೀಡಿದ್ದು ಅದ್ಭುತವಾಗಿದೆ ಎಂದರು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಮತ್ತು ಅಂಥ ರೋಗದಿಂದ ಅತ್ಯಂತ ಹೆಚ್ಚು ಪ್ರಭಾವಿತರಾಗುವ ಜನರ ಮೇಲೆ ಅದರ ಪ್ರಭಾವವನ್ನು ಕಡಿಮೆ ಮಾಡುವ ಆವಿಷ್ಕಾರಗಳನ್ನು ಮಾಡುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿಶೇಷವಾಗಿ ತಾಯಿಯ ಮತ್ತು ಮಕ್ಕಳ ಆರೋಗ್ಯ ಸೂಚಕಗಳಲ್ಲಿ ಸ್ಥಿರವಾದ ಪ್ರಗತಿಯನ್ನು ಖಾತ್ರಿಪಡಿಸುವಲ್ಲಿ ಹಾಗೂ ಲಕ್ಷಾಂತರ ನಾಗರಿಕರ ಆರೋಗ್ಯ ಸುಧಾರಿಸುವಲ್ಲಿ ದೇಶವು ಕ್ಷಿಪ್ರ ದಾಪುಗಾಲು ಹಾಕಿದೆ ಎಂದು ಮೆಲಿಂಡಾ ಗೇಟ್ಸ್​ ತಿಳಿಸಿದರು.

ಇದನ್ನೂ ಓದಿ : ಬಿಲ್ ಗೇಟ್ಸ್​ ಕಂಪನಿ ಬಿಡುವ ಮುನ್ನ ಅವರ ವಿರುದ್ಧ ತನಿಖೆ ನಡೆಸಲಾಗಿತ್ತು; ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.