ETV Bharat / bharat

2023-24ರಲ್ಲಿ ಭಾರತದ ಜಿಡಿಪಿ ಶೇ 6.3ರಷ್ಟು ಬೆಳವಣಿಗೆ; ಐಎಂಎಫ್ ಅಂದಾಜು - ರಿಸರ್ವ್ ಬ್ಯಾಂಕ್

ಭಾರತದ ಜಿಡಿಪಿ ಬೆಳವಣಿಗೆ ಶೇ 6.3ರಷ್ಟಿರಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ.

IMF projects 6.3% growth for India in 2023-24

author img

By ETV Bharat Karnataka Team

Published : Dec 19, 2023, 5:11 PM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷ 2023-24 ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು (ಜಿಡಿಪಿ) ಶೇಕಡಾ 6.3 ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ವರದಿಯಲ್ಲಿ ತಿಳಿಸಿದೆ. ದೇಶದ ಪ್ರಸ್ತುತ ಮತ್ತು ಮಧ್ಯಮಾವಧಿಯ ಆರ್ಥಿಕ ದೃಷ್ಟಿಕೋನವನ್ನು ಪರಿಶೀಲಿಸುವ ಐಎಂಎಫ್ ತನ್ನ ಆರ್ಟಿಕಲ್ 4 ಸಮಾಲೋಚನಾ ವರದಿ (Article IV consultation report) ಯಲ್ಲಿ, ಸ್ಥೂಲ ಆರ್ಥಿಕ ಮತ್ತು ಹಣಕಾಸು ಸ್ಥಿರತೆಯ ಬೆಂಬಲದೊಂದಿಗೆ ದೇಶದ ಬೆಳವಣಿಗೆ ದೃಢವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಹೇಳಿದೆ.

ಏತನ್ಮಧ್ಯೆ ಪ್ರಮುಖ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ತನ್ನ ಇತ್ತೀಚಿನ ಹಣಕಾಸು ನೀತಿ ಸಭೆಯಲ್ಲಿ, 2023-24ರ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು 50 ಬೇಸಿಸ್ ಪಾಯಿಂಟ್​ಗಳಿಂದ ಶೇಕಡಾ 7 ಕ್ಕೆ ಹೆಚ್ಚಿಸಿದೆ. ಅಕ್ಟೋಬರ್​ನಲ್ಲಿ ನಡೆದ ಸಭೆಯಲ್ಲಿ ಆರ್​ಬಿಐ 2023-24ರ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.5 ಕ್ಕೆ ಅಂದಾಜಿಸಿತ್ತು.

"ದೇಶದ ಮೂಲ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಬಲವಾದ ಸರ್ಕಾರಿ ಮೂಲಸೌಕರ್ಯ ವ್ಯವಸ್ಥೆಗಳ ಕಾರಣದಿಂದ ದೇಶದ ಬೆಳವಣಿಗೆ ದರವನ್ನು ಉಳಿಸಿಕೊಳ್ಳಲಿದೆ. ಕಾರ್ಮಿಕ ಮತ್ತು ಮಾನವ ಬಂಡವಾಳ ವಲಯದಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೆ ತಂದಿದ್ದೇ ಆದಲ್ಲಿ ಭಾರತವು ಇನ್ನೂ ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯ ಹೊಂದಿದೆ" ಎಂದು ಐಎಂಎಫ್ ವರದಿ ಹೇಳಿದೆ.

ವ್ಯಾಪಕ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ನಿರಂತರ ಹೂಡಿಕೆ, ಇನ್ನೂ ಬೆಳೆಯುತ್ತಿರುವ ಖಾಸಗಿ ಬಳಕೆ ಮತ್ತು ಡಿಜಿಟಲೀಕರಣ - ಚಾಲಿತ ಉತ್ಪಾದಕತೆಯ ಲಾಭಗಳಿಂದ ಮುಂದಿನ ಐದು ವರ್ಷಗಳಲ್ಲಿ ಭಾರತದ ಜಿಡಿಪಿ ಶೇಕಡಾ 6 ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಹಣದುಬ್ಬರಕ್ಕೆ ಸಂಬಂಧಿಸಿದಂತೆ - ಈ ಹಣಕಾಸು ವರ್ಷದಲ್ಲಿ ಶೇಕಡಾ 5.4 ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಶೇಕಡಾ 4.6 ರಷ್ಟು ಹಣದುಬ್ಬರ ಬೆಳವಣಿಗೆಯನ್ನು ಐಎಂಎಫ್ ತನ್ನ ವರದಿಯಲ್ಲಿ ಅಂದಾಜಿಸಿದೆ. ಆಹಾರ ಬೆಲೆಗಳಲ್ಲಿನ ಹೆಚ್ಚಳದಿಂದಾಗಿ ಹಣದುಬ್ಬರ ಅಸ್ಥಿರವಾಗಿದ್ದರೂ ಕ್ರಮೇಣ ನಿಗದಿತ ಗುರಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿದೆ.

"ಸ್ಥಳೀಯವಾಗಿ ಹವಾಮಾನ ಏರಿಳಿತಗಳು ಹಣದುಬ್ಬರವನ್ನು ಹೆಚ್ಚಿಸಬಹುದು ಮತ್ತು ಆಹಾರ ವಸ್ತುಗಳ ರಫ್ತಿನ ಮೇಲೆ ಸರ್ಕಾರ ಮತ್ತಷ್ಟು ನಿರ್ಬಂಧಗಳನ್ನು ಹೇರಬಹುದು. ತರಕಾರಿ ಬೆಲೆಗಳಿಂದ ಪ್ರೇರಿತವಾದ ಇತ್ತೀಚಿನ ಹಣದುಬ್ಬರ ಹೆಚ್ಚಳ ತಾತ್ಕಾಲಿಕವಾಗಿದೆ" ಎಂದು ವರದಿ ತಿಳಿಸಿದೆ. ಇದಲ್ಲದೇ ಸೇವಾವಲಯದ ರಫ್ತು ಹೆಚ್ಚಳ ಮತ್ತು ಸ್ವಲ್ಪ ಮಟ್ಟಿಗೆ ಕಡಿಮೆ ತೈಲ ಆಮದು ವೆಚ್ಚದ ಪರಿಣಾಮವಾಗಿ ಭಾರತದ ಚಾಲ್ತಿ ಖಾತೆ ಕೊರತೆ 2023-24ರಲ್ಲಿ ಜಿಡಿಪಿಯ ಶೇಕಡಾ 1.8 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿದೆ.

ಆರ್​ಬಿಐ ಕೂಡ 2023-24ರ ಭಾರತದ ಚಿಲ್ಲರೆ ಹಣದುಬ್ಬರದ ಮುನ್ಸೂಚನೆಯನ್ನು ಶೇಕಡಾ 5.4 ಕ್ಕೆ ಉಳಿಸಿಕೊಂಡಿದೆ. ಇದು ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 5.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.2 ರಷ್ಟಿದೆ. 2024-25ರ ಮೊದಲ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರವನ್ನು ಶೇಕಡಾ 5.2 ಕ್ಕೆ ಅಂದಾಜಿಸಲಾಗಿದೆ. ಸಿಪಿಐ ಹಣದುಬ್ಬರ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 4.0 ರಷ್ಟು ಮತ್ತು ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 4.7 ರಷ್ಟಿದೆ.

ಇದನ್ನೂ ಓದಿ : ವಿದೇಶಿ ಹಣ ಒಳಹರಿವಿನಲ್ಲಿ ಭಾರತ ಟಾಪ್; 2023ರಲ್ಲಿ ಬಂದಿದ್ದು $125 ಬಿಲಿಯನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.