ETV Bharat / bharat

ಇಂದೋರ್​​ಗೆ​ ಸತತ ಆರನೇ ಬಾರಿಗೆ ದೇಶದ ಸ್ವಚ್ಛ ನಗರಿ ಪಟ್ಟ: ಕರ್ನಾಟಕದ ಯಾವುದಾದರೂ ನಗರ ಇದೆಯಾ? - ಸ್ವಚ್ಛ ನಗರ ವಿಭಾಗ

ಸ್ವಚ್ಛ ನಗರ ವಿಭಾಗದಲ್ಲಿ ಇಂದೋರ್ ಹಾಗೂ ಸೂರತ್ ತನ್ನ ಅಗ್ರ ಸ್ಥಾನಗಳನ್ನು ಉಳಿಸಿಕೊಂಡಿವೆ

indias-cleanest-city-indore-and-surat-retained-their-top-positions-this-year
ಇಂದೋರ್​​ಗೆ​ ಸತತ ಆರನೇ ಬಾರಿಗೆ ದೇಶದ ಸ್ವಚ್ಛ ನಗರಿ ಪಟ್ಟ: ಕುಣಿದು ಕುಪ್ಪಳಿಸಿ ಜನ
author img

By

Published : Oct 1, 2022, 8:13 PM IST

ನವದೆಹಲಿ: ಮಧ್ಯ ಪ್ರದೇಶದ ಇಂದೋರ್​ ಸತತ ಆರನೇ ಬಾರಿಗೆ ದೇಶದ ಸ್ವಚ್ಛ ನಗರಿ ಎಂಬ ಪಟ್ಟ ಅಲಂಕರಿಸಿದೆ. ಗುಜರಾತ್​ನ ಸೂರತ್ ಮತ್ತು ಮಹಾರಾಷ್ಟ್ರ ನವಿ ಮುಂಬೈ ನಂತರದ ಎರಡು ಸ್ಥಾನಗಳಲ್ಲಿ ಪಡೆದಿದೆ. ಇತ್ತ, ಆರನೇ ಸಲ ಸ್ವಚ್ಛ ನಗರಿ ಪ್ರಶಸ್ತಿ ಬಂದಿರುವುದಕ್ಕೆ ಇಂದೋರ್ ಜನ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ 2022ರನ್ನು ಪ್ರಕಟಿಸಲಾಗಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ವಿತರಿಸಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರಿದೀಪ್ ಸಿಂಗ್ ಪುರಿ ಮತ್ತು ಇತರರು ಭಾಗವಹಿಸಿದ್ದರು.

ಅತ್ಯುತ್ತಮ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡರೆ, ಛತ್ತೀಸ್​ಗಢ ಎರಡನೇ ಮತ್ತು ಮಹಾರಾಷ್ಟ್ರ ಮೂರನೇ ಸ್ಥಾನ ಪಡೆದಿವೆ. ಸ್ವಚ್ಛ ನಗರ ವಿಭಾಗದಲ್ಲಿ ಇಂದೋರ್ ಹಾಗೂ ಸೂರತ್ ತನ್ನ ಅಗ್ರ ಸ್ಥಾನಗಳನ್ನು ಉಳಿಸಿಕೊಂಡಿವೆ. ಕಳೆದ ಬಾರಿ ಮೂರನೇ ಸ್ಥಾನ ಪಡೆದಿದ್ದ ವಿಜಯವಾಡ ಈ ವರ್ಷ ಆ ಸ್ಥಾನವನ್ನು ಕಳೆದುಕೊಂಡು ನವಿ ಮುಂಬೈಗೆ ಬಿಟ್ಟುಕೊಟ್ಟಿದೆ.

100ಕ್ಕಿಂತ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ತ್ರಿಪುರಾ ಸ್ವಚ್ಛತೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ಪಂಚಗಣಿ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸ್‌ಗಢದ ಪಟಾನ್ ಮತ್ತು ಮಹಾರಾಷ್ಟ್ರದ ಕರ್ಹಾದ್ ನಂತರದ ಸ್ಥಾನದಲ್ಲಿದೆ.

  • #WATCH | People celebrate in Madhya Pradesh's Indore as the city bagged the cleanest city award for the 6th consecutive time in Swachh Survekshan Awards pic.twitter.com/hTnyWrYVJD

    — ANI MP/CG/Rajasthan (@ANI_MP_CG_RJ) October 1, 2022 " class="align-text-top noRightClick twitterSection" data=" ">

ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ವಿಭಾಗದಲ್ಲಿ ಉತ್ತರಾಖಂಡನ ಹರಿದ್ವಾರವನ್ನು ಸ್ವಚ್ಛ ಗಂಗಾ ಪಟ್ಟಣವೆಂದು ಪರಿಗಣಿಸಲಾಗಿದ್ದು, ನಂತರದಲ್ಲಿ ಉತ್ತರ ಪ್ರದೇಶದ ವಾರಾಣಸಿ ಮತ್ತು ಉತ್ತರಾಖಂಡನ ಋಷಿಕೇಶ್ ಸ್ಥಾನ ಪಡೆದಿವೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಗಂಗಾ ಪಟ್ಟಣಗಳಲ್ಲಿ ಬಿಜ್ನೋರ್ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದ ದಿಯೋಲಾಲಿ ದೇಶದ ಸ್ವಚ್ಛ ಕಂಟೋನ್ಮೆಂಟ್ ಬೋರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ... ಇನ್ಮುಂದೆ ಆನಂದಿಸಿ ವೇಗದ ಇಂಟರ್​ನೆಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.