ನವದೆಹಲಿ: 2016 ರಲ್ಲಿ, ಭಾರತೀಯ ಮಹಿಳೆ ತನ್ನ ಕೂದಲಿನಿಂದ ಅತ್ಯಂತ ಭಾರವಾದ ವಾಹನವನ್ನು ಎಳೆಯುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬರೆದಿದ್ದಾರೆ. ಆ ಸಾಧನೆ ಮಾಡಿದ ಆಶಾ ರಾಣಿಗೆ 'ಐರನ್ ಕ್ವೀನ್' ಎಂಬ ಬಿರುದು ಸಹ ಬಂದಿದೆ.
- " class="align-text-top noRightClick twitterSection" data="
">
ಇಟಲಿಯ ಮಿಲನ್‌ನಲ್ಲಿ 'ಲೋ ಶೋ ಡೀ ರೆಕಾರ್ಡ್' ಸೆಟ್‌ನಲ್ಲಿ ಆಶಾ ರಾಣಿ ಡಬಲ್ ಡೆಕ್ಕರ್ ಬಸ್ ಅನ್ನು ಎಳೆದರು. ಆರು ವರ್ಷಗಳ ನಂತರದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನ ನೆನಪುಗಳನ್ನು ಇತ್ತೀಚೆಗೆ ತನ್ನ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪ್ರಯತ್ನದ ಥ್ರೋಬ್ಯಾಕ್ ವಿಡಿಯೋವೊಂದನ್ನು ಹಂಚಿಕೊಂಡ ನಂತರ ಆಶಾ ರಾಣಿಯ ಸಾಧನೆಯು ಟ್ರೆಂಡಿಂಗ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೀಘ್ರದಲ್ಲೇ ವೈರಲ್ ಆಯ್ತು. ಇದವರೆಗೆ 3.6 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ ಮತ್ತು ಅನೇಕ ಅಭಿಮಾನಿಗಳು ಕಾಮೆಂಟ್ ಮಾಡಿ ಅವರ ಸಾಧನೆಯನ್ನು ಮೆಚ್ಚಿದ್ದಾರೆ.
ಬೆರಗಾದ ನೆಟ್ಟಿಜನ್ಸ್
ವಿಡಿಯೋದಲ್ಲಿ ಆಶಾ ಅವರ ಜಡೆಗಳನ್ನು ಬಸ್‌ಗೆ ಬಿಗಿಯಾಗಿ ಕಟ್ಟಲಾಯಿತು. ಬಳಿಕ ಆಶಾ ಹಿಮ್ಮುಖವಾಗಿ ನಡೆದುಕೊಂಡು ಹೋಗುವ ಮೂಲಕ ಬಸ್ ಎಳೆಯತೊಡಗಿದರು. ಕೆಲ ಸೆಕೆಂಡುಗಳ ನಂತರ ಬಸ್ ನಿಧಾನವಾಗಿ ಮುಂದಕ್ಕೆ ಚಲಿಸಿತು. ಇದನ್ನು ನೋಡಿದ ಪ್ರೇಕ್ಷಕರು ಅವಳ ಅದ್ಭುತ ಸಾಧನೆಯನ್ನು ಜೋರಾಗಿ ಹರ್ಷೋದ್ಗಾರಗಳೊಂದಿಗೆ ಬೆಂಬಲಿಸಿದರು. ಬಳಿಕ ಆಶಾ ಗಿನ್ನಿಸ್ ವಿಶ್ವ ದಾಖಲೆಗೆ ಸೇರಿದರು.
ಸಾಮಾನ್ಯವಾಗಿ ಖಾಲಿ ಬಸ್ 5 - 6 ಟನ್ ತೂಕವಿರುತ್ತೆ. ಆಶಾ ತನ್ನ ಕೂದಲಿಂದ ಎಳೆದಿದ್ದ ಬಸ್ನ ತೂಕ ಬರೋಬ್ಬರಿ 12,216 ಕೆಜಿ. ಏಕೆಂದ್ರೆ ಈ ಬಸ್ ತುಂಬ ಜನರು ಕುಳಿತುಕೊಂಡಿದ್ದರು. ಮಹಿಳೆಯ ಸಾಮರ್ಥ್ಯ ಮತ್ತು ಶಕ್ತಿಗೆ ನೆಟಿಜನ್‌ಗಳು ಬೆರಗಾಗಿದ್ದಾರೆ.
ಏಳು ರೆಕಾರ್ಡ್ಸ್ಗಳ ಸರದಾರೆ
ಪಂಜಾಬ್‌ನ ನಿವಾಸಿಯಾಗಿರುವ ಆಶಾ ವೇಟ್‌ಲಿಫ್ಟಿಂಗ್ ಸೇರಿದಂತೆ ಪ್ರಸ್ತುತ ಏಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಆಶಾ ರಾಣಿ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. 2014ರಲ್ಲಿ Eye Socketನಿಂದ 15.15 ಕೆಜಿ ತೂಕವನ್ನು ಎತ್ತಿ ಗಿನ್ನಿಸ್ ರೆಕಾರ್ಡ್ ಮಾಡಿದ್ದರು. 2 ವರ್ಷಗಳ ಹಿಂದೆ ತನ್ನ ಕಿವಿಗಳನ್ನು ಬಳಸಿ 1,700 ಕೆಜಿ ತೂಕದ ವ್ಯಾನ್ ಎಳೆದಿದ್ದರು. ಹಲ್ಲುಗಳ ಸಹಾಯದಿಂದ ವಾಹನವನ್ನು ಕೇವಲ 22.16 ಸೆಕೆಂಡ್‍ಗಳಲ್ಲಿ 25 ಮೀಟರ್ ಎಳೆದುಕೊಂಡು ಹೋಗುವ ಮೂಲವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
2013 ರಲ್ಲಿ, ಆಶಾ ಯುಕೆಯ ಲೀಸೆಸ್ಟರ್‌ಶೈರ್‌ನಲ್ಲಿ 1,700-ಕೆಜಿ (3,745-ಪೌಂಡ್) ವ್ಯಾನ್ ಅನ್ನು ಎಳೆಯಲು ಎರಡೂ ಕಿವಿಗಳನ್ನು ಬಳಸಿದ್ದರು. ಈ ಮೂಲಕ ಅವರು ಮತ್ತೊಂದು ದಾಖಲೆಯನ್ನು ಪುಡಿಗಟ್ಟಿದ್ದರು.