ಹೈದರಾಬಾದ್: ದೇಶಾದ್ಯಂತ ಕೊರೊನಾ ಪ್ರರಕಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ, ಛತ್ತೀಸ್ಗಢ, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಶೇ. 85 ರಷ್ಟು ಹೊಸ ಕೋವಿಡ್ ಕೇಸ್ಗಳು ದಾಖಲಾಗಿವೆ.
ಪ್ರಸ್ತುತ ಭಾರತದಲ್ಲಿ ಒಟ್ಟು 5,84,055 ಸಕ್ರಿಯ ಪ್ರಕರಣಳಿವೆ. ಇದರಲ್ಲಿ ಮಹಾರಾಷ್ಟ್ರದಲ್ಲೇ ಅತೀ ಹೆಚ್ಚಿನ ಸಂಖ್ಯೆಯ ಕೇಸ್ಗಳು ವರದಿಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಪೈಕಿ ಶೇ. 61 ಕ್ಕಿಂತ ಹೆಚ್ಚಿನ ಪಾಲು ಮಹಾರಾಷ್ಟ್ರದ್ದೇ ಆಗಿದೆ. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಛತ್ತೀಸ್ಗಢ ಮತ್ತು ಪಂಜಾಬ್ ರಾಜ್ಯಗಳ ಪಾಲು ಶೇ. 78.9 ರಷ್ಟಿದೆ.
ಆರು ರಾಜ್ಯಗಳಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣವು ಶೇ.83.01ರಷ್ಟಿದ್ದು, ಮಹಾರಾಷ್ಟ್ರದಲ್ಲಿ 227 ಮತ್ತು ಪಂಜಾಬ್ 55 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹದಿನೈದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಕೊರೊನಾ ಸಾವಿನ ಪ್ರಕರಣಗಳು ಸಂಭವಿಸಿಲ್ಲ.
ರಾಜ್ಯವಾರು ವ್ಯಾಕ್ಸಿನೇಷನ್ ವಿವರ:
ರಾಷ್ಟ್ರೀಯ ಕೊರೊನಾ ಚೇತರಿಕೆ ದರವು ಶೇ.93.89 ನಷ್ಟಿದ್ದು, ಭಾರತದಲ್ಲಿ ಗುರುವಾರ ಸುಮಾರು ಕೋವಿಡ್ನಿಂದ 1,14,74,683 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಏಪ್ರಿಲ್ ಮೊದಲ ದಿನ ಒಟ್ಟು 6,51,17,896 ಜನರಿಗೆ ವ್ಯಾಕ್ಸಿನೇಷನ್ ಹಾಕಲಾಗಿದೆ.
ಮಹಾರಾಷ್ಟ್ರ (62,09,337), ರಾಜಸ್ಥಾನ್ (57,21,312), ಗುಜರಾತ್ (57,00,174), ಉತ್ತರ ಪ್ರದೇಶ (53,98,684), ಪಶ್ಚಿಮ ಬಂಗಾಳ (52,30,166), ಕರ್ನಾಟಕ (38,11,007), ಕೇರಳ (34,01,918) , ಮಧ್ಯಪ್ರದೇಶ (33,56,666), ತಮಿಳುನಾಡು (30,31,631), ಬಿಹಾರ (28,34,138), ಆಂಧ್ರಪ್ರದೇಶ (26,05,169), ಒಡಿಶಾ (24,11,021), is ತ್ತೀಸ್‌ಗ h (19,42,105), ತೆಲಂಗಾಣ (12, 95,814) ಮತ್ತು ಪಂಜಾಬ್ (8,42,448).
ಓದಿ: 24 ಗಂಟೆಗಳಲ್ಲಿ 81 ಸಾವಿರ ಕೇಸ್ ದಾಖಲು.. ದೇಶದಲ್ಲಿ ಈವರೆಗೆ 6.87 ಕೋಟಿ ಮಂದಿಗೆ ವ್ಯಾಕ್ಸಿನ್
ಆರ್ಟಿಪಿಸಿಆರ್ ಪರೀಕ್ಷೆಯನ್ನು ಕಡಿಮೆಗೊಳಿಸಿರುವ ರಾಜ್ಯಗಳು:
ತೆಲಂಗಾಣ, ಬಿಹಾರ, ಒಡಿಶಾ, ಗುಜರಾತ್, ಅರುಣಾಚಲ ಪ್ರದೇಶ, ಮೇಘಾಲಯ, ಅಸ್ಸೋಂ, ಛತ್ತೀಸ್ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ, ಜಾರ್ಖಂಡ್, ಮಣಿಪುರ, ತ್ರಿಪುರ, ಮಿಜೋರಾಂ, ಉತ್ತರ ಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ನಡೆಸುವ ಪ್ರಮಾಣವು ಶೇ. 50 ರಷ್ಟಿದೆ.
ಆರೋಗ್ಯ ಮತ್ತು ಕುಟುಂಬ ಇಲಾಖೆ ದತ್ತಾಂಶ ಪ್ರಕಾರ:
ಏ.01 ರಿಂದ ಮೂರನೇ ಹಂತದಲ್ಲಿ 45 ರಿಂದ 60 ವರ್ಷದೊಳಗಿನ ಜನರಿಗೆ ಕೊರೊನಾ ಲಸಿಕೆಯನ್ನು ನೀಡಲು ಅನುವು ಮಾಡಿಕೊಡಲಾಗಿದೆ. ಈ ಸಂಬಂಧ ಗುರುವಾರ 10,86,241 ಸೆಷನ್‌ಗಳ ಮೂಲಕ ಸುಮಾರು 6.5 ಕೋಟಿ (6,51,17,896) ಜನರಿಗೆ ವ್ಯಾಕ್ಸಿನ್ ಅನ್ನು ನೀಡಲಾಗಿದ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಆಗಬಹುದಾದ ಕೊರೊನಾ ಹಾಟ್‌ಸ್ಪಾಟ್‌ಗಳು:
ಹರಿದ್ವಾರದಲ್ಲಿ ಕುಂಭಮೇಳ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ತೆರಳುತ್ತಿದ್ದಾರೆ. ಇದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜೊತೆಗೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ಅಸ್ಸೋಂ ಈ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇದು ಕೊರೊನಾ ಉಲ್ಬಣಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.