ETV Bharat / bharat

ಉಕ್ರೇನ್​ನಿಂದ ತಾಯ್ನಾಡಿಗೆ ಮರಳಿದ ಮತ್ತಷ್ಟು ಭಾರತೀಯರು

ಉಕ್ರೇನ್​ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ನಾವು ಅಲ್ಲಿಂದ ಹೊರಡಲು ಸಿದ್ಧವಾದೆವು. ಅದರಂತೆ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಮಾನದ ವ್ಯವಸ್ಥೆ ಬಗ್ಗೆ ತಿಳಿದುಕೊಂಡು, ಇದೀಗ ತಾಯ್ನಾಡಿಗೆ ವಾಪಸ್​ ಬಂದಿದ್ದೇವೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

indians-returning
ಭಾರತೀಯರು
author img

By

Published : Feb 24, 2022, 10:38 AM IST

Updated : Feb 24, 2022, 1:09 PM IST

ನವದೆಹಲಿ: ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ, ಉಕ್ರೇನ್​ನಲ್ಲಿ ನೆಲೆಸಿದ್ದ ಭಾರತೀಯರಿದ್ದ ಏರ್​ ಇಂಡಿಯಾ ವಿಮಾನ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಭಾರತ ಸರ್ಕಾರ ಉಕ್ರೇನ್​ನಲ್ಲಿ ನೆಲೆಸಿರುವ ಭಾರತೀಯರು ದೇಶ ತೊರೆಯುವಂತೆ ಮನವಿ ಮಾಡಿ, ವಿಶೇಷ ವಿಮಾನ ವ್ಯವಸ್ಥೆ ಮಾಡಿತ್ತು. ಅದರಂತೆ ಮೊದಲ ವಿಮಾನ 2 ದಿನಗಳ ಹಿಂದೆಯೇ 241 ಜನರನ್ನು ದೇಶಕ್ಕೆ ತಂದಿಳಿಸಿತ್ತು. ಅದರಂತೆ ನಿನ್ನೆ ರಾತ್ರಿಯೇ ಉಕ್ರೇನ್​ನಿಂದ 2 ನೇ ವಿಶೇಷ ವಿಮಾನ ಮತ್ತಷ್ಟು ಭಾರತೀಯರನ್ನು ಹೊತ್ತು ಇಂದು ಬೆಳಗ್ಗೆ ದೆಹಲಿ ನಿಲ್ದಾಣಕ್ಕೆ ಬಂದಿಳಿದಿದೆ.

ಉಕ್ರೇನ್​ನಿಂದ ತಾಯ್ನಾಡಿಗೆ ಮರಳಿದ ಮತ್ತಷ್ಟು ಭಾರತೀಯರು

'ಉಕ್ರೇನ್​ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ನಾವು ಅಲ್ಲಿಂದ ಹೊರಡಲು ಸಿದ್ಧವಾದೆವು. ಅದರಂತೆ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಮಾನದ ವ್ಯವಸ್ಥೆ ಬಗ್ಗೆ ತಿಳಿದುಕೊಂಡು, ಇದೀಗ ತಾಯ್ನಾಡಿಗೆ ವಾಪಸ್​ ಬಂದಿದ್ದೇವೆ' ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ನಾಗರಿಕ ವಿಮಾನಗಳಿಗೆ ನಿರ್ಬಂಧ: ರಷ್ಯಾ ತನ್ನ ದೇಶದ ಮೇಲೆ ಯುದ್ಧ ಘೋಷಿಸಿದ ಪರಿಣಾಮ ಉಕ್ರೇನ್​ ನಾಗರಿಕ ವಿಮಾನಯಾನಕ್ಕೆ ನಿರ್ಬಂಧ ಹೇರಿದೆ. ಅಲ್ಲದೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಉಕ್ರೇನ್​ಗೆ ಬರುವ ಮತ್ತು ಹೊರಡುವ ಎಲ್ಲ ವಿಮಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಅಲ್ಲಿನ ಸರ್ಕಾರ ಆದೇಶಿಸಿದೆ.

ವಾಪಸ್‌ ಆದ ಏರ್‌ ಇಂಡಿಯಾ ವಿಮಾನ: ಇನ್ನೊಂದೆಡೆ, ಅಪಾಯಕಾರಿ ಸನ್ನಿವೇಶವಿರುವ ಹಿನ್ನೆಲೆಯಲ್ಲಿ ತನ್ನ ವಾಯುಪ್ರದೇಶದಲ್ಲಿ ನಾಗರಿಕ ವಿಮಾನ ಹಾರಾಟವನ್ನು ಉಕ್ರೇನ್‌ ನಿರ್ಬಂಧಿಸಿದೆ. ಹೀಗಾಗಿ, ಕೀವ್‌ಗೆ ತೆರಳಿದ್ದ ಏರ್‌ ಇಂಡಿಯಾ ವಿಮಾನ AI1947 ಭಾರತೀಯರನ್ನು ಕರೆತರಲಾಗದೆ ನವದೆಹಲಿಗೆ ವಾಪಸ್ ಬರುತ್ತಿದೆ.

ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್!

Last Updated : Feb 24, 2022, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.