ETV Bharat / bharat

ದಿನಸಿ ಖರೀದಿಗೆ ಕ್ಯೂನಲ್ಲಿ ನಿಂತಾಗ ರಷ್ಯಾ ಶೆಲ್‌ ದಾಳಿ: ಖಾರ್ಕಿವ್‌ನಲ್ಲಿ ಹಾವೇರಿಯ ವಿದ್ಯಾರ್ಥಿ ಸಾವು - Russian military assault

ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಭೀಕರ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

Indian student lost his life in shelling in Ukraine

author img

By

Published : Mar 1, 2022, 3:14 PM IST

Updated : Mar 1, 2022, 5:45 PM IST

ಕೀವ್​(ಉಕ್ರೇನ್​): ಉಕ್ರೇನ್​ನ ಖಾರ್ಕಿವ್​ ನಗರದ ಮೇಲೆ ಇಂದು ಬೆಳಗ್ಗೆ ರಷ್ಯಾ ಸೇನೆ ನಡೆಸಿರುವ ವೈಮಾನಿಕ ಶೆಲ್​ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಮೃತಪಟ್ಟಿರುವ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ ನಿವಾಸಿ ನವೀನ್ ಶೇಖರಪ್ಪ ಗ್ಯಾನಗೌಡರ್‌(21)​ ಎಂದು ಗುರುತಿಸಲಾಗಿದೆ.

  • Ministry of External Affairs says that an Indian student lost his life in shelling in Kharkiv, Ukraine this morning. The Ministry is in touch with his family. pic.twitter.com/EZpyc7mtL7

    — ANI (@ANI) March 1, 2022 " class="align-text-top noRightClick twitterSection" data=" ">
ಖಾರ್ಕಿವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವು

ವಿದ್ಯಾರ್ಥಿ ಖಾರ್ಕಿವ್​ನಲ್ಲಿ ನವೀನ್‌ ವೈದ್ಯಕೀಯ ವಿಜ್ಞಾನದಲ್ಲಿ 4 ನೇ ವರ್ಷದ ವ್ಯಾಸಂಗ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಮನೆಗೆ ಅಗತ್ಯ ಸಾಮಗ್ರಿ ತರಲು ಹೊರಗಡೆ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ಶೆಲ್‌ ಬಂದಪ್ಪಳಿಸಿತು. ಪರಿಣಾಮ, ನವೀನ್ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ನವೀನ್‌ ಪ್ರತಿ ದಿನ 3-4 ಬಾರಿ ಮನೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ನವೀನ್ ಸಹಪಾಠಿಯ ಪೋಷಕರ ಪ್ರತಿಕ್ರಿಯೆ

ಈ ವಿಚಾರವನ್ನು ಭಾರತೀಯ ವಿದೇಶಾಂಗ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. 'ಉಕ್ರೇನ್​ನ​​ ಖಾರ್ಕಿವ್​​ನಲ್ಲಿ ಬೆಳಗ್ಗೆ ನಡೆದ ಶೆಲ್ ದಾಳಿಯ ವೇಳೆ ಭಾರತೀಯ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವುದು ಅತ್ಯಂತ ದುಃಖದ ವಿಚಾರ. ವಿದ್ಯಾರ್ಥಿಯ ಪೋಷಕರ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ' ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್​ ಬಗ್ಚಿ ಮಾಹಿತಿ ನೀಡಿದ್ದಾರೆ.

Last Updated : Mar 1, 2022, 5:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.