ನವದೆಹಲಿ: ಭಾರತೀಯ ರೈಲ್ವೆ 35,000 ಕ್ಕೂ ಹೆಚ್ಚು ಅರ್ಜಿದಾರರಿಗೆ ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಮಾರ್ಚ್ 2023 ರ ಅಂತ್ಯಕ್ಕೆ ಸಾಮೂಹಿಕ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ ಎಂದು ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ (I ಮತ್ತು P) ಅಮಿತಾಭ್ ಶರ್ಮಾ ಶುಕ್ರವಾರ ದೆಹಲಿಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 2023 ರ ವೇಳೆಗೆ, ಭಾರತೀಯ ರೈಲ್ವೇಯು ಎಲ್ಲ 35,281 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಈ ಎಲ್ಲ ನೇಮಕಾತಿಗಳು CEN (ಕೇಂದ್ರೀಕೃತ ಉದ್ಯೋಗ ಸೂಚನೆ) 2019 ಅನ್ನು ಆಧರಿಸಿವೆ ಎಂದು ಅಮಿತಾಭ್ ಶರ್ಮಾ ಹೇಳಿದರು.
ಹೆಚ್ಚಿನ ಆಕಾಂಕ್ಷಿಗಳಿಗೆ ಉದ್ಯೋಗಾವಕಾಶ ನೀಡುವ ದೃಷ್ಟಿಯಿಂದ ಎಲ್ಲ ಹಂತಗಳ ಫಲಿತಾಂಶಗಳನ್ನು ಪ್ರತ್ಯೇಕವಾಗಿ ತಯಾರಿಸಲು ರೈಲ್ವೆ ಸಿದ್ಧತೆ ನಡೆಸಿದೆ. ಒಂದೇ ಸಮಯದಲ್ಲಿ ಎಲ್ಲ ಹಂತದ ಫಲಿತಾಂಶಗಳನ್ನು ಬಿಡುಗಡೆ ಮಾಡದಿರುವ ಬಗ್ಗೆ ವಿವರಿಸಿದ ಅಮಿತಾಭ್ ಶರ್ಮಾ, ಫಲಿತಾಂಶಗಳ ಏಕಕಾಲಿಕ ಬಿಡುಗಡೆಯಿಂದಾಗಿ ಅನೇಕ ಅರ್ಹ ಅಭ್ಯರ್ಥಿಗಳು ಉದ್ಯೋಗದ ಕೆಲ ಸೌಲಭ್ಯಗಳಿಂದ ವಂಚಿತರಾಗಬಹುದು.
ಒಬ್ಬನೇ ಅರ್ಜಿದಾರ ಒಂದು ಪರೀಕ್ಷಾ ಫಲಿತಾಂಶದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹತೆ ಪಡೆಯುತ್ತಾರೆ. ಇದರಿಂದಾಗಿ ಅನೇಕ ಅರ್ಹ ಅಭ್ಯರ್ಥಿಗಳು ಉದ್ಯೋಗ ಲಾಭದಿಂದ ವಂಚಿತರಾಗುತ್ತಾರೆ ಎಂದರು.
ಹೆಚ್ಚೆಚ್ಚು ಉದ್ಯೋಗಾಕಾಂಕ್ಷಿಗಳು ಉದ್ಯೋಗ ಪಡೆಯುವ ಅವಕಾಶ ಪಡೆಯುವಂತೆ ರೈಲ್ವೆ ಎಲ್ಲ ಹಂತದ ಫಲಿತಾಂಶಗಳನ್ನು ಪ್ರತ್ಯೇಕವಾಗಿ ತಯಾರಿಸಲು ಸಿದ್ಧತೆ ನಡೆಸಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ರೈಲ್ವೇಯ ಪ್ರಯತ್ನಗಳನ್ನು ಒತ್ತಿ ಹೇಳಿದ ಶರ್ಮಾ, ಕೋವಿಡ್ ಹೊರತಾಗಿಯೂ ರೈಲ್ವೆ ಪರೀಕ್ಷೆ ಮತ್ತು ಫಲಿತಾಂಶಗಳಿಗೆ ತಯಾರಿ ನಡೆಸುತ್ತಿದೆ. ಮಾರ್ಚ್ 2023 ರ ವೇಳೆಗೆ, ರೈಲ್ವೆಯ ಎಲ್ಲ 35,281 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಶರ್ಮಾ ತಿಳಿಸಿದರು.
ಇದನ್ನೂ ಓದಿ: ಟ್ರಾವೆಲ್ ನೌ ಪೇ ಲೇಟರ್ ಸ್ಕೀಮ್ ಜಾರಿಗೆ ತಂದ ಇಂಡಿಯನ್ ರೈಲ್ವೆ: ಇದರ ವಿಶೇಷತೆ ಏನ್ ಗೊತ್ತಾ?