ಕೊಚ್ಚಿ(ಕೇರಳ): ನೌಕಾ ನೆಲೆ, ನೌಕಾ ಘಟಕಗಳು ಮತ್ತು ನೌಕಾ ಸ್ವತ್ತುಗಳ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಲ್ಲದ ವೈಮಾನಿಕ ವಸ್ತುಗಳನ್ನು(Drone) ಹಾರಿಸುವಂತಿಲ್ಲ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಈ ನಿಷೇಧ ಉಲ್ಲಂಘಿಸಿದ ಆರ್‌ಪಿಎಗಳು (Remote Pilot Aircraft System) ಸೇರಿದಂತೆ ಯಾವುದೇ ಸಾಂಪ್ರದಾಯಿಕವಲ್ಲದ ವೈಮಾನಿಕ ವಸ್ತುವನ್ನು ನಾಶಪಡಿಸಲಾಗುತ್ತದೆ ಅಥವಾ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಐಪಿಸಿ ಸೆಕ್ಷನ್121, 121 ಎ, 287, 336, 337 ಮತ್ತು 338 ರ ಅಡಿಯಲ್ಲಿ ಆಪರೇಟರ್ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಛತ್ತಿಸ್ಗಢದ ನಕ್ಸಲರಿಂದ ಡ್ರೋನ್ ಬಳಕೆ: ತೀವ್ರ ಕಟ್ಟೆಚ್ಚರ
ಕಳೆದ ತಿಂಗಳು ಜಮ್ಮುವಿನ ಭಾರತೀಯ ವಾಯುಪಡೆಯ ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿದ ಹಿನ್ನೆಲೆ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದರು. ಭಯೋತ್ಪಾದಕ ದಾಳಿ ನಡೆಸಲು ಡ್ರೋನ್ ಬಳಸುವುದು ದೇಶಕ್ಕೆ ಹೊಸ ಭದ್ರತಾ ಬೆದರಿಕೆಗೆ ನಾಂದಿ ಹಾಡಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.