ETV Bharat / bharat

ಭಾರತೀಯ ನೌಕಾ ದಿನ: ಹುತಾತ್ಮರಿಗೆ ಗೌರವ ನಮನ, ಶುಭ ಕೋರಿದ ಪ್ರಧಾನಿ - ಭಾರತೀಯ ನೌಕಾಪಡೆಯ ದಿನದ ಇತಿಹಾಸ

ಪಾಕಿಸ್ತಾನ ವಿರುದ್ಧ 'ಆಪರೇಷನ್ ಟ್ರೈಡೆಂಟ್' ಪ್ರಾರಂಭಿಸಿದ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್‌ 4 ರಂದು ಭಾರತೀಯ ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತದೆ.

Navy Day
ಭಾರತೀಯ ನೌಕಾ ದಿನ: ಹುತಾತ್ಮರಿಗೆ ಗೌರವ
author img

By

Published : Dec 4, 2022, 10:41 AM IST

Updated : Dec 4, 2022, 11:19 AM IST

ನವ ದೆಹಲಿ: ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಗೌರವದಿಂದ ಆಚರಿಸಲಾಗುತ್ತದೆ. 1971ರಲ್ಲಿ ಭಾರತೀಯ ನೌಕಾಪಡೆ 'ಆಪರೇಷನ್ ಟ್ರೈಡೆಂಟ್' ಅಡಿಯಲ್ಲಿ ಪಾಕಿಸ್ತಾನಿ ನೌಕಾಪಡೆಯನ್ನು ಸೆದೆಬಡಿದಿತ್ತು. ಅಂದಿನಿಂದ ಇಲ್ಲಿಯವರೆಗೆ ನೌಕಾ ಪಡೆಗಳ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಭಾರತೀಯ ನೌಕಾ ದಿನಾಚರಣೆ ನಡೆಯುತ್ತದೆ.

ಹುತಾತ್ಮರಿಗೆ ಗೌರವ: ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಂದು ನೌಕಾಪಡೆಯ ಮುಖ್ಯಸ್ಥ ಆರ್.ಹರಿಕುಮಾರ್, ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಮತ್ತು ಲೆಫ್ಟಿನೆಂಟ್ ಜನರಲ್ ಬಿ.ಎಸ್ ರಾಜು ಹುತಾತ್ಮರಿಗೆ ಗೌರವ ಸಲ್ಲಿಸಿದರು.

  • Best wishes on Navy Day to all navy personnel and their families. We in India are proud of our rich maritime history. The Indian Navy has steadfastly protected our nation and has distinguished itself with its humanitarian spirit during challenging times. pic.twitter.com/nGxoWxVLaz

    — Narendra Modi (@narendramodi) December 4, 2022 " class="align-text-top noRightClick twitterSection" data=" ">

ಶುಭ ಕೋರಿದ ಪ್ರಧಾನಿ: ಈ ಕುರಿತು ವಿಡಿಯೋ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, 'ನಮ್ಮ ನೌಕಾಪಡೆಯ ಧೈರ್ಯಶಾಲಿ ಸಿಬ್ಬಂದಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಂರಕ್ಷಿಸಲು ಬದ್ಧರಾಗಿದ್ದಾರೆ. ಧೀರ ಯೋಧರ ತ್ಯಾಗಗಳಿಗೆ ನಾವು ಗೌರವ ಮತ್ತು ಕೃತಜ್ಞತೆ ಸಲ್ಲಿಸುತ್ತೇವೆ' ಎಂದಿದ್ದಾರೆ.

ಶ್ರೀಮಂತ ಕಡಲ ಇತಿಹಾಸದ ಬಗ್ಗೆ ಹೆಮ್ಮೆ: ಎಲ್ಲಾ ನೌಕಾ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ನೌಕಾಪಡೆಯ ದಿನದ ಶುಭಾಶಯಗಳು. ನಮ್ಮ ಶ್ರೀಮಂತ ಕಡಲ ಇತಿಹಾಸದ ಬಗ್ಗೆ ಹೆಮ್ಮೆಪಡುತ್ತೇವೆ. ಭಾರತೀಯ ನೌಕಾಪಡೆಯು ನಮ್ಮ ರಾಷ್ಟ್ರವನ್ನು ದೃಢವಾಗಿ ರಕ್ಷಿಸಿದೆ ಮತ್ತು ಸವಾಲಿನ ಸಮಯದಲ್ಲಿ ತನ್ನ ಮಾನವೀಯ ಮನೋಭಾವದಿಂದ ತನ್ನನ್ನು ತಾನು ಗುರುತಿಸಿಕೊಂಡಿದೆ ಎಂದು ನೌಕಾಪಡೆಯ ಮುಖ್ಯಸ್ಥ ಆರ್.ಹರಿ ಕುಮಾರ್ ಹೇಳಿದ್ದಾರೆ.

ಆಪರೇಷನ್ ಟ್ರೈಡೆಂಟ್ ಇತಿಹಾಸ: ಡಿ.3, 1971 ರ ಭಾರತದ ಗಡಿ ಪ್ರದೇಶ ಮತ್ತು ವಾಯುಪ್ರದೇಶದಲ್ಲಿ ಪಾಕಿಸ್ತಾನ ಸೇನೆ ದಾಳಿ ನಡೆಸಿದಾಗ ಭಾರತೀಯ ಸೇನೆಯು ಪ್ರತೀಕಾರವಾಗಿ ಆಪರೇಷನ್ ಟ್ರೈಡೆಂಟ್ ಪ್ರಾರಂಭಿಸಿತ್ತು. ಪಾಕಿಸ್ತಾನದ ವಾಣಿಜ್ಯ ರಾಜಧಾನಿಯಾಗಿದ್ದ ಕರಾಚಿ ಮೇಲೆ ಭಾರತದ ನೌಕಾ ಸೇನೆ ದಾಳಿ ಮಾಡಿತ್ತು. ಐಎನ್ಎಸ್ ನಿಪತ್, ಐಎನ್ಎಸ್ ನೀರ್ಘಾಟ್ ಮತ್ತು ಐಎನ್ಎಸ್ ವೀರ್ ಪಾಕಿಸ್ತಾನದ ಬಂದರುಗಳ ಮೇಲೆ ದಾಳಿ ಮಾಡಿದ್ದವು. ಕಮಾಂಡರ್ ಬಿ. ಬಿ ಯಾದವ್ ನೇತೃದ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು.

ಭಾರತೀಯ ನೌಕಾಪಡೆಯ ದಿನದ ಇತಿಹಾಸ: ಭಾರತೀಯ ನೌಕಾಪಡೆಯನ್ನು 1612 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. ಸ್ವಾತಂತ್ರ್ಯಕ್ಕೂ ಮೊದಲು ಭಾರತೀಯ ನೌಕಾಪಡೆಯನ್ನು 'ರಾಯಲ್ ಇಂಡಿಯನ್ ನೇವಿ' ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಅದರ ಹೆಸರನ್ನು ಭಾರತೀಯ ನೌಕಾಪಡೆ ಎಂದು ಬದಲಾಯಿಸಲಾಗಿದೆ. ಮರಾಠ ಚಕ್ರವರ್ತಿ 'ಛತ್ರಪತಿ ಶಿವಾಜಿ ಭೋಸ್ಲೆ' ಅವರನ್ನು 'ಭಾರತೀಯ ನೌಕಾಪಡೆಯ ಪಿತಾಮಹ' ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ದೇಶದ ಮೊದಲ ಸ್ವದೇಶಿ ವಿಮಾನ ವಾಹಕ 'INS Vikrant' ಲೋಕಾರ್ಪಣೆಗೊಳಿಸಿದ ಮೋದಿ

3 ಕಮಾಂಡ್‌ಗಳು: ಭಾರತೀಯ ನೌಕಾಪಡೆಯು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ನೌಕಾಪಡೆಯು ಮೂರು ಕಮಾಂಡ್‌ಗಳನ್ನು ಹೊಂದಿದೆ. ಪ್ರತಿಯೊಂದೂ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್‌ನ ನಿಯಂತ್ರಣದಲ್ಲಿದೆ.

  • ಪಶ್ಚಿಮ ನೌಕಾ ಕಮಾಂಡ್ (ಮುಂಬೈನಲ್ಲಿ ಪ್ರಧಾನ ಕಛೇರಿ)
  • ಪೂರ್ವ ನೌಕಾ ಕಮಾಂಡ್ (ವಿಶಾಖಪಟ್ಟಣಂನಲ್ಲಿ ಪ್ರಧಾನ ಕಛೇರಿ)
  • ದಕ್ಷಿಣ ನೌಕಾ ಕಮಾಂಡ್ (ಕೊಚ್ಚಿಯಲ್ಲಿ ಪ್ರಧಾನ ಕಛೇರಿ) ಹೊಂದಿದೆ.

5ನೇಯ ಅತಿ ದೊಡ್ಡ ನೌಕಾಪಡೆ: ಭಾರತೀಯ ನೌಕಾಪಡೆ ಇಂದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಡೆಯಾಗಿದೆ. ಇದರಲ್ಲಿ ಸುಮಾರು 80 ಸಾವಿರ ಜನರು ಕಾರ್ಯನಿರತರಾಗಿದ್ದಾರೆ. ಐಎನ್​​ಎಸ್ ವಿರಾಟ್ ಎಂಬ ವಾಯುಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದೂ ಒಂದು. ಬಲಿಷ್ಠವಾದ ಸೇನಾ ಸಾಮರ್ಥ್ಯ ಹೊಂದಿರುವ ಭಾರತ 2030ರ ವೇಳೆಗೆ ವಿಶ್ವದ ಅತ್ಯಂತ ಶಕ್ತಿಶಾಲಿ ನೌಕಾ ಸೇನೆ ಹೊಂದಿರುವ 3ನೇ ರಾಷ್ಟ್ರ ಎಂದು ಗುರುತಿಸಿಕೊಳ್ಳುವ ಗುರಿ ಹೊಂದಿದೆ.

ಭಾರತೀಯ ನೌಕಾಪಡೆಯ ದಿನದ ಥೀಮ್ 2022: ಪ್ರತಿವರ್ಷ ವಿಭಿನ್ನ ಥೀಮ್ ಇಟ್ಟುಕೊಂಡು ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ 2022ರ ಥೀಮ್ 'ಸ್ವರ್ಣಿಂ ವಿಜಯ ವರ್ಷ' ಅಂದರೆ 50 ನೇ ವಿಜಯೋತ್ಸವ. ಇದು 1971ರಲ್ಲಿ ಇಂಡೋ-ಪಾಕಿಸ್ತಾನ್ ಯುದ್ಧದಲ್ಲಿ ಭಾರತದ ವಿಜಯವು 50 ವರ್ಷಗಳನ್ನು ತಲುಪಿದೆ. ಕಳೆದ ವರ್ಷ, ಅಂದರೆ 2021ರಲ್ಲಿ ಭಾರತೀಯ ನೌಕಾಪಡೆಯ 'ಯುದ್ಧ ಸಿದ್ಧ, ವಿಶ್ವಾಸಾರ್ಹ ಮತ್ತು ಒಗ್ಗೂಡುವಿಕೆ' ಎಂಬ ವಿಷಯವನ್ನು ಹೊಂದಿತ್ತು.

ಭಾರತೀಯ ನೌಕಾಪಡೆಯ ದಿನ 2022ರ ಪ್ರಮುಖ ಧ್ಯೇಯಗಳು ಹೀಗಿವೆ..

  • ರಾಷ್ಟ್ರದ ಮೇಲಿನ ಪ್ರೀತಿಯಿಂದ ಕಾವಲು ಕಾಯುವ ವೀರರಿದ್ದರೆ ದೇಶ ಸ್ವತಂತ್ರವಾಗಬಹುದು-ಭಾರತೀಯ ನೌಕಾಪಡೆಯ ದಿನದ ಶುಭಾಶಯಗಳು.
  • ಮನಸ್ಸಿನಲ್ಲಿ ಮತ್ತು ಪದಗಳಲ್ಲಿ ಸ್ವಾತಂತ್ರ್ಯ, ನಮ್ಮ ಹೃದಯದಲ್ಲಿ ಹೆಮ್ಮೆ, ನಮ್ಮ ಆತ್ಮಗಳಲ್ಲಿ ನೆನಪುಗಳು-ನೌಕಾಪಡೆಯ ದಿನದಂದು ರಾಷ್ಟ್ರಕ್ಕೆ ನಮಸ್ಕರಿಸೋಣ.
  • ನಾವು ಸುರಕ್ಷಿತವಾಗಿರುತ್ತೇವೆ ಏಕೆಂದರೆ, ನಮ್ಮ ನೌಕಾಪಡೆಯು ಪ್ರತಿ ಕ್ಷಣವೂ ನಮ್ಮನ್ನು ರಕ್ಷಿಸುತ್ತಿದೆ. ನಮ್ಮ ನೌಕಾಪಡೆಗೆ ಸೆಲ್ಯೂಟ್.
  • ಭಾರತೀಯ ನೌಕಾಪಡೆಯ ದಿನದಂದು ಎಲ್ಲಾ ವೀರರಿಗೆ ನಮಸ್ಕರಿಸೋಣ.

ಇದನ್ನೂ ಓದಿ: 262 ಮೀ​ ಉದ್ದ, 62 ಮೀ ಅಗಲದ ಸ್ವದೇಶಿ ಯುದ್ಧನೌಕೆ ವಿಕ್ರಾಂತ್‌.. 15 ಸಾವಿರ ಉದ್ಯೋಗ

Last Updated : Dec 4, 2022, 11:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.