ETV Bharat / bharat

ಅಮೆರಿಕ ವಾಯುಪಡೆಯಲ್ಲಿ ಭಾರತೀಯ: ಸಮವಸ್ತ್ರದಲ್ಲಿದ್ದಾಗ ಹಣೆಗೆ 'ತಿಲಕ'ವಿಡಲು ಅನುಮತಿ - ಸಮವಸ್ತ್ರದಲ್ಲಿದ್ದಾಗ ಹಣೆಗೆ ತಿಲಕ

ಕಳೆದ 20 ವರ್ಷಗಳಿಂದ ಅಮೆರಿಕ ಏರ್​​ಪೋರ್ಸ್​​​ನಲ್ಲಿ ಏರ್​ಮ್ಯಾನ್​ ಆಗಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಸಿಬ್ಬಂದಿಗೆ ಹಣೆಗೆ ತಿಲಕ ಹಚ್ಚಿಕೊಳ್ಳಲು ಅವಕಾಶ ನೀಡಲಾಗಿದೆ.

Indian man in US Air Force
Indian man in US Air Force
author img

By

Published : Mar 22, 2022, 7:37 PM IST

ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ-ಪುರುಷರು ಹಣೆಗೆ ತಿಲಕ ಹಚ್ಚಿಕೊಳ್ಳುವುದು ಸಾಮಾನ್ಯ. ಬೇರೆ ದೇಶಗಳಲ್ಲಿ ಈ ಸಂಪ್ರದಾಯ ಕಂಡು ಬರುವುದಿಲ್ಲ. ಆದರೆ, ಭಾರತೀಯ ಮೂಲದ ವ್ಯಕ್ತಿಯೋರ್ವ ಅಮೆರಿಕ ಏರ್​​​​ಪೋರ್ಸ್​​​ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮವಸ್ತ್ರ ಹಾಕಿಕೊಳ್ಳುವ ಸಂದರ್ಭದಲ್ಲೂ ಆತನಿಗೆ ಹಣೆೆಗೆ ತಿಲಕವಿಡಲು ಅನುಮತಿಸಲಾಗಿದೆ.

ಅಮೆರಿಕ ಏರ್‌ಫೋರ್ಸ್​ ಸೇರಿದಾಗಿನಿಂದಲೂ ಈ ಯುವಕ, ಹಣೆಗೆ ತಿಲಕ ಹಚ್ಚಿಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ದರ್ಶನ್ ಶಾ ಎಂಬ ಏರ್​ಮ್ಯಾನ್​, ವ್ಯೋಮಿಂಗ್​​ನ ವಾರೆನ್​ ಏರ್​​ಪೋರ್ಸ್ ಬೇಸ್​​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸಮವಸ್ತ್ರ ಧರಿಸುವ ಸಂದರ್ಭದಲ್ಲಿ ತಿಲಕ​ ಹಚ್ಚಿಕೊಳ್ಳಲು ಇವರಿಗೆ ಅವಕಾಶ ನೀಡಲಾಗಿದೆ.

ಭಾರತೀಯ ಸಂಪ್ರದಾಯ ಪಾಲಿಸುವ ದರ್ಶನ್​​ ಇದೀಗ ಕರ್ತವ್ಯದಲ್ಲಿರುವಾಗಲೇ ಹಣೆಗೆ ತಿಲಕ ಹಚ್ಚಿಕೊಳ್ಳುತ್ತಾರೆ. ಇವರಿಗೆ ಮಿಲಿಟರಿ ಅನುಮತಿ ನೀಡುತ್ತಿದ್ದಂತೆ ಟೆಕ್ಸಾಸ್​, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್​​ನಲ್ಲಿರುವ ತನ್ನ ಸ್ನೇಹಿತರಿಗೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಹಿಂದೂ ದೇಗುಲ ನಿರ್ಮಾಣ: ಮುಸ್ಲಿಂ ಕುಟುಂಬದಿಂದ ₹2.5 ಕೋಟಿ ಮೌಲ್ಯದ ಭೂದಾನ

ದರ್ಶನ್ ಶಾ ಮೂಲತಃ ಭಾರತೀಯ ಮೂಲದ ಹಿಂದೂ ಧರ್ಮೀಯ. ಕಳೆದ 20 ವರ್ಷಗಳಿಂದ ಏರ್​​ಪೋರ್ಸ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ತಿಲಕ ಧರಿಸುವುದು ನನಗೆ ವಿಶೇಷ ಅನುಭವ ನೀಡುತ್ತದೆ. ಕಷ್ಟದ ಸಮಯದಿಂದ ಹೊರಬರಲು ನನಗಿದೊಂದು ಮಾರ್ಗ. ಅಮೆರಿಕದ ಮಿಲಿಟರಿಗೆ ಧನ್ಯವಾದ' ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.