ನವದೆಹಲಿ: ಕಳೆದ ಹದಿನೈದು ವರ್ಷಗಳಲ್ಲಿ ಹದಿನಾರು ಚೀನಿಯರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ್ ರೈ ಮಾಹಿತಿ ನೀಡಿದ್ದು, ಉಳಿದಂತೆ 10 ಚೀನಿ ಪ್ರಜೆಗಳ ಅರ್ಜಿಗಳು ಇತ್ಯರ್ಥವಾಗಿಲ್ಲ ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಕೇಳಲಾಗಿರುವ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಸಚಿವರು, 2007ರಿಂದಲೂ ಇಲ್ಲಿಯವರೆಗೆ 16 ಚೀನಾ ದೇಶದ ಪ್ರಜೆಗಳಿಗೆ ಭಾರತದ ಪೌರತ್ವ ನೀಡಿರುವುದಾಗಿ ತಿಳಿಸಿದರು. ಇದೇ ವೇಳೆ 1967ರ ನಿರಾಶ್ರಿತರ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ 1951ರ ವಿಶ್ವಸಂಸ್ಥೆ ನಿರ್ಧಾರಕ್ಕೆ ಭಾರತ ಒಪ್ಪಿಗೆ ನೀಡಿಲ್ಲ ಎಂದರು.
ಇದನ್ನೂ ಓದಿ: ಹಿಜಾಬ್ ತೀರ್ಪಿನ ಮೇಲ್ಮನವಿ ತುರ್ತು ವಿಚಾರಣೆ ಇಲ್ಲ: ಸುಪ್ರೀಂಕೋರ್ಟ್ ಸ್ಪಷ್ಟನೆ
ಭಾರತದಲ್ಲಿ ಆಶ್ರಯ ಪಡೆದುಕೊಳ್ಳುವ ವಿದೇಶಿ ಪ್ರಜೆಗಳ ವಿದೇಶಿ ಕಾಯ್ದೆ 1946, ವಿದೇಶಿಯರ ನೋಂದಣಿ ಕಾಯ್ದೆ 1939, ಪಾಸ್ಪೋರ್ಟ್ ಕಾಯ್ದೆ 1920 ಮತ್ತು ಪೌರತ್ವ ಕಾಯ್ದೆ 1955ರ ನಿಬಂಧನೆಗಳನ್ವಯ ವಿದೇಶಿ ಪ್ರಜೆಗಳು ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ ಎಂದು ಇದೇ ವೇಳೆ ಸಚಿವ ರೈ ವಿವರಿಸಿದರು.