ETV Bharat / bharat

ಉಕ್ರೇನ್‌ನಲ್ಲಿ ಭಾರತೀಯ ಚೆಸ್ ಆಟಗಾರ ಅನ್ವೇಶ್ ಉಪಾಧ್ಯಾಯ : ಪರಿಸ್ಥಿತಿ ಬಗ್ಗೆ ವಿವರಣೆ

ಈ ತೀವ್ರತೆಯನ್ನು ನಿರೀಕ್ಷಿಸಿರಲಿಲ್ಲ. ಇದು ಪೂರ್ಣ ಪ್ರಮಾಣದ ಮಿಲಿಟರಿ ಆಕ್ರಮಣವಾಗಿದೆ. ಇದನ್ನು ಎಂದಿಗೂ ಊಹಿಸಿರಲಿಲ್ಲ ಎಂದು 2017ರ ರಾಷ್ಟ್ರೀಯ ಕ್ಷಿಪ್ರ ಚೆಸ್ ಚಾಂಪಿಯನ್ ಕೀವ್‌ನಿಂದಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ..

ಉಕ್ರೇನ್‌ನಲ್ಲಿ ಭಾರತೀಯ ಚೆಸ್ ಆಟಗಾರ ಅನ್ವೇಶ್ ಉಪಾಧ್ಯಾಯ

author img

By

Published : Feb 25, 2022, 3:33 PM IST

ಚೆನ್ನೈ : ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿಯಾಗಿ ಸ್ವಲ್ಪ ಭಯಭೀತರಾಗಿರುವ ಭಾರತದ ಮಾಜಿ ರಾಷ್ಟ್ರೀಯ ಕ್ಷಿಪ್ರ ಚೆಸ್ ಚಾಂಪಿಯನ್ ಅನ್ವೇಶ್ ಉಪಾಧ್ಯಾಯ ಅವರು, ರಷ್ಯಾದ ಆಕ್ರಮಣದ ಮಧ್ಯೆ ಉಕ್ರೇನ್‌ನಲ್ಲಿ ಸಿಲುಕಿರುವ ಅವರ ಹಲವಾರು ದೇಶವಾಸಿಗಳಲ್ಲಿ ಒಬ್ಬರಾಗಿದ್ದಾರೆ.

ಕೀವ್ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಅಪ್ರೆಂಟಿಸ್‌ಶಿಪ್ ಮಾಡುತ್ತಿರುವ 30 ವರ್ಷ ವಯಸ್ಸಿನ ಇವರು, ಮಾರ್ಚ್‌ನಲ್ಲಿ ಭಾರತಕ್ಕೆ ಮರಳಲು ಯೋಜಿಸಿದ್ದರು. ಆದರೆ, ರಷ್ಯಾ ಗುರುವಾರ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರೊಂದಿಗೆ, ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮ ಅಲ್ಲೇ ಸಿಲುಕುವಂತಾಗಿದೆ.

ಈ ತೀವ್ರತೆಯನ್ನು ನಿರೀಕ್ಷಿಸಿರಲಿಲ್ಲ. ಇದು ಪೂರ್ಣ ಪ್ರಮಾಣದ ಮಿಲಿಟರಿ ಆಕ್ರಮಣವಾಗಿದೆ. ಇದನ್ನು ಎಂದಿಗೂ ಊಹಿಸಿರಲಿಲ್ಲ ಎಂದು 2017ರ ರಾಷ್ಟ್ರೀಯ ಕ್ಷಿಪ್ರ ಚೆಸ್ ಚಾಂಪಿಯನ್ ಕೀವ್‌ನಿಂದಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿ : ಮಕ್ಕಳಿಗೆ ಮುದ.. ಓದಲು ಆಹ್ಲಾದಕರ ವಾತಾವರಣ.. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಸ್ವಚ್ಛತೆ..

ಭಾರತದಲ್ಲಿರುವ ನನ್ನ ಪೋಷಕರು ಚಿಂತಿತರಾಗಿದ್ದಾರೆ ಮತ್ತು ಅದಕ್ಕಾಗಿಯೇ ನಾನು ಮಾರ್ಚ್ ಮೊದಲ ವಾರದಲ್ಲಿ ಹೊರಡಲು ಯೋಜಿಸಿದ್ದೆ ಎಂದು ಅವರು ಭುವನೇಶ್ವರದಲ್ಲಿ ನೆಲೆಸಿರುವ ಅವರ ಕುಟುಂಬದ ಬಗ್ಗೆ ಹೇಳಿದರು.

ಇದೀಗ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸೂಚನೆಗಳಿಗಾಗಿ ಕಾಯುತ್ತಿದ್ದೇನೆ. ಈ ಹುಚ್ಚುತನವು ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಹ ತಿಳಿಸಿದ್ದಾರೆ.

ವಿದ್ಯುತ್ ಮತ್ತು ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಈವರೆಗೆ ಎಲ್ಲವೂ ದೇವರ ದಯೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ಉಕ್ರೇನ್‌ನ ಪಶ್ಚಿಮ-ಮಧ್ಯ ಭಾಗದಲ್ಲಿರುವ ವಿನ್ನಿಟ್ಸಿಯಾ ನಗರದಲ್ಲಿ ಎರಡು ತಿಂಗಳ ಹಿಂದೆ ಅವರು ಕೊನೆಯ ಬಾರಿಗೆ ಓವರ್-ದಿ-ಬೋರ್ಡ್ ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು ಮತ್ತು ಅಗ್ರಸ್ಥಾನ ಪಡೆದಿದ್ದರು.

ಆದರೆ, 2352 ರ ELO ರೇಟಿಂಗ್ (ಚೆಸ್‌ನಲ್ಲಿ ಶ್ರೇಯಾಂಕದ ಅಂಕಗಳು) ಹೊಂದಿರುವ ವೈದ್ಯರು ಈಗ ಆಟಕ್ಕಿಂತ ಜೀವ ಉಳಿಸಿಕೊಳ್ಳುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಭಾರತಕ್ಕೆ ಹಿಂತಿರುಗಲು ಅವರು ಬಯಸುತ್ತಿದಾರೆ.

ಇದನ್ನೂ ಓದಿ: ಕೇಂದ್ರ ಕಾನೂನು ಕಾರ್ಯದರ್ಶಿಗೆ ಹೈಕೋರ್ಟ್​ ನ್ಯಾಯಮೂರ್ತಿಯಾಗಿ ಬಡ್ತಿ.. ಈ ಕ್ರಮ ಇದೇ ಮೊದಲು..

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಈ ಸಂಬಂಧ ನಿನ್ನೆ ಮಾತನಾಡಿದ್ದು, ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.

ಉಕ್ರೇನ್‌ನಲ್ಲಿ ಸುಮಾರು 20,000 ಭಾರತೀಯರಿದ್ದಾರೆ ಮತ್ತು ಅವರಲ್ಲಿ ಸುಮಾರು 4,000 ಕಳೆದ ಕೆಲವು ದಿನಗಳಲ್ಲಿ ಭಾರತಕ್ಕೆ ಮರಳಲಿದ್ದರು ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.