ETV Bharat / bharat

Commonwealth Games 2022: ಬಾಕ್ಸರ್​ ಅಮಿತ್ ಪಂಗಲ್​ಗೆ ಚಿನ್ನ - ಮೆಕ್‌ಡೊನಾಲ್ಡ್ ಕೀರನ್

Commonwealth Games 2022 ನಲ್ಲಿ ಭಾರತದ ಬಾಕ್ಸರ್ ಅಮಿತ್ ಪಂಗಲ್ ಚಿನ್ನದ ಪದಕ ಗೆದ್ದಿದ್ದಾರೆ.

Indian Boxer Amit Panghal
Indian Boxer Amit Panghal
author img

By

Published : Aug 7, 2022, 4:19 PM IST

Updated : Aug 7, 2022, 5:34 PM IST

ನವದೆಹಲಿ : ಭಾರತದ ಬಾಕ್ಸರ್ ಅಮಿತ್ ಪಂಗಲ್ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಫ್ಲೈವೇಟ್ (48-51 ಕೆಜಿ) ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಮೆಕ್‌ಡೊನಾಲ್ಡ್ ಕೀರನ್ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಪಂಗಲ್ ಅವರು ಈ ಸಾಧನೆ ಮಾಡಿದ್ದಾರೆ.

2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದ ಪಂಗಲ್, ಅಂತಿಮವಾಗಿ ಈ ಬಾರಿ 51 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಪಂಗಲ್​ ಅವರು ಈ ಪದಕ ಪಡೆದ ನಂತರ ಭಾರತಕ್ಕೆ 15ನೇ ಚಿನ್ನವಾಗಿದೆ.

ಎಲ್ಲಾ ಮೂರು ಸುತ್ತುಗಳಲ್ಲಿ ಪಂಗಲ್ ಅವರು ಪ್ರತಿರೋಧ ತೋರುವ ಬಾಕ್ಸರ್‌ಗೆ ಮತ್ತೆ ಮರಳುವ ಅವಕಾಶವನ್ನೇ ನೀಡಲಿಲ್ಲ. ಮೊದಲ ಸುತ್ತಿನಲ್ಲಿ ಐವರು ತೀರ್ಪುಗಾರರು ಪಂಗಲ್‌ಗೆ 10-10 ಅಂಕಗಳನ್ನು ನೀಡಿದರು. ಎರಡನೇ ಸುತ್ತಿನಲ್ಲಿ ಪಂಗಲ್ 5 ರಲ್ಲಿ ನಾಲ್ವರು ತೀರ್ಪುಗಾರರಿಂದ 10 ಅಂಕಗಳನ್ನು ಪಡೆದರೆ, ಮೂರನೇ ಸುತ್ತಿನಲ್ಲಿಯೂ ಪಂಗಲ್ ಅವರಿಗೆ ನಾಲ್ವರು ತೀರ್ಪುಗಾರರು 10 ಅಂಕಗಳನ್ನು ನೀಡಿದರು ಮತ್ತು ಈ ಮೂಲಕ ಭಾರತದ ಬಾಕ್ಸರ್ 5-0 ಅಂತರದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

  • Weekend Medal Rush !

    Amit Panghal has established himself as one of India’s premier boxers by winning the Men’s 51kg Boxing Gold medal in the CWG22.

    Congratulations! We’re extremely proud of you! pic.twitter.com/Paz8aTiUhr

    — Anurag Thakur (@ianuragthakur) August 7, 2022 " class="align-text-top noRightClick twitterSection" data=" ">

ಪಂಗಲ್ ಜಿಂಬಾಬ್ವೆಯ ಪ್ಯಾಟ್ರಿಕ್ ಚೈನಾಂಬಾ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಪಂಗಲ್ ಪ್ರಾಥಮಿಕ ಸುತ್ತಿನಲ್ಲಿ ಹಿಂದುಳಿದಿದ್ದರು. ಆರಂಭದಿಂದಲೂ ಎದುರಾಳಿ ಆಟಗಾರ ಅವರ ಮೇಲೆ ಪಂಚ್‌ ನೀಡುತ್ತಲೇ ಇದ್ದರು. ಇದಾದ ನಂತರ ಬಲವಾದ ಪುನರಾಗಮನವನ್ನು ಮಾಡಿದರು.

ಫೈನಲ್‌ನಲ್ಲಿ ಸೆಮಿಫೈನಲ್​ನಲ್ಲಿ ಮಾಡಿದ ತಪ್ಪನ್ನು ಪುನರಾವರ್ತಿಸಲಿಲ್ಲ. ಅವರು ರಿಂಗ್‌ಗೆ ಪ್ರವೇಶಿಸಿದ ತಕ್ಷಣವೇ ಎದುರಾಳಿ ಬಾಕ್ಸರ್‌ನ ಉತ್ಸಾಹವನ್ನು ಅವರ ಪಂಚ್‌ಗಳಿಂದ ಹತ್ತಿಕ್ಕಿದರು. ಇದು ಎದುರಾಳಿಯ ಮೇಲೆ ಒತ್ತಡ ಹೇರಲು ಅವರಿಗೆ ಸುಲಭವಾಯಿತು. ಮೊದಲ ಸುತ್ತಿನಿಂದಲೇ ತೀರ್ಪುಗಾರರ ನಿರ್ಧಾರ ಅಮಿತ್ ಪಂಗಲ್ ಪರವಾಗಿತ್ತು.

ಪಂಗಲ್ ಅವರ ಪಂಚ್‌ಗಳು ಎದುರಾಳಿ ಬಾಕ್ಸರ್‌ ಕೀರನ್ ಮೆಕ್‌ಡೊನಾಲ್ಡ್ ಅವರಿಗೆ ಗಾಯ ಉಂಟುಮಾಡಿದವು. ಪರಿಣಾಮ ಮುಖದಿಂದ ರಕ್ತವೂ ಬರುತ್ತಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರಿ ಸೋಲನ್ನು ಅನುಭವಿಸಿದ ನಂತರ ಇಲ್ಲಿ ಪಂಗಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ : ಕಾಮನ್‌ವೆಲ್ತ್ ಗೇಮ್ಸ್ 2022: ಬಾಕ್ಸರ್ ನೀತು ಗಂಗಾಸ್ ಮುಡಿಗೆ ಚಿನ್ನ

Last Updated : Aug 7, 2022, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.