ETV Bharat / bharat

Army Recruitment: ​ಎನ್​ಸಿಸಿ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ವಿಶೇಷ ನೇಮಕಾತಿ

ಭಾರತೀಯ ಸೇನೆ ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ ಅಡಿ ಈ ಅಭ್ಯರ್ಥಿಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

author img

By

Published : Jul 6, 2023, 1:47 PM IST

Indian army Recruitment for NCC Special Entry Scheme

ಶಾಲೆ ಮತ್ತು ಕಾಲೇಜು ಹಂತದಲ್ಲಿ ಎನ್​ಸಿಸಿ (ನ್ಯಾಷನಲ್​ ಕ್ರೆಡಿಟ್​​ ಕಾರ್ಪ್​​) ಆದ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಮಾನ್ಯತೆ ನೀಡಲಾಗಿದೆ. ಈ ಅಭ್ಯರ್ಥಿಗಳು ಸೇನೆಯ ಕೆಲವು ಶಿಸ್ತುಗಳನ್ನು ಕಲಿತಿರುವ ಹಿನ್ನೆಲೆ ಭಾರತೀಯ ಸೇನಾ ನೇಮಕಾತಿಯಲ್ಲಿ ಇವರಿಗಾಗಿ ವಿಶೇಷ ನೇಮಕಾತಿಯನ್ನು ನಡೆಸಲಾಗುವುದು. ಅದರ ಅನುಸಾರ ಇದೀಗ ಭಾರತೀಯ ಸೇನೆ ಎನ್​ಸಿಸಿ ವಿಶೇಷ ಪ್ರವೇಶ ಯೋಜನೆ ಅಡಿ ಈ ಅಭ್ಯರ್ಥಿಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ: ಎನ್​ಸಿಸಿ ವಿಶೇಷ ಪ್ರವೇಶಾತಿ ಯೋಜನೆ ಅಡಿ ಭಾರತೀಯ ಸೇನೆಯಲ್ಲಿ ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಒಟ್ಟು 55 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಪುರುಷ ಅಭ್ಯರ್ಥಿಗಳಿಗೆ 50 ಸ್ಥಾನ ಮೀಸಲಿರಿಸಲಾಗಿದ್ದು, ಮಹಿಳಾ ಅಭ್ಯರ್ಥಿಗಳಿಗೆ 5 ಸ್ಥಾನ ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಈ ಅಭ್ಯರ್ಥಿಗಳು ಎನ್​ಸಿಸಿಯಲ್ಲಿ ಕನಿಷ್ಠ ಎರಡು ಅಥಭಾ ಮೂರು ವರ್ಷದ ಎನ್​ಸಿಸಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅಂತಿಮ ಪದವಿ ಹಂತದ ವಿದ್ಯಾರ್ಥಿಗಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 19ರಿಂದ ಜನವರಿ 1, 2024ಕ್ಕೆ ಅವರ ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯಿದ್ದು ಭಾರತೀಯ ಸೇನೆ ಇಲಾಖೆ ನಿಯಮದಂತೆ ನಡೆಸಲಾಗುವುದು.

ಅಧಿಸೂಚನೆ
ಅಧಿಸೂಚನೆ

ವೇತನ: ಈ ಹುದ್ದೆಗಳಿಗೆ ತರಬೇತಿ ವೇಳೆ ಮಾಸಿಕ 56,100 ರೂ. ಸ್ಟೈಫಂಡ್​ ಅನ್ನು ನೀಡಲಾಗುವುದು. ಚೆನ್ನೈನ ಆಫೀಸರ್​ ಟ್ರೈನಿಂಗ್​ ಅಕಾಡೆಮಿಯಲ್ಲಿ 49 ವಾರಗಳ ಕಾಲ ಈ ತರಬೇತಿ ನಡೆಯಲಿದೆ. ತರಬೇತಿ ಬಳಿಕ ಭಾರತೀಯ ಸೇನೆಯ ವಿವಿಧ ಹುದ್ದೆಗಳ ಸ್ತರಗಳಿಗೆ ಅನುಗುವಾಗಿ 56,100ರೂ. ನಿಂದ 2,50,000 ರೂ.ವರೆಗೆ ವೇತನ ನಿಗದಿ ಮಾಡಲಾಗಿದೆ.

ಈ ಹುದ್ದೆಗಳನ್ನು ಶಾರ್ಟ್​ ಸರ್ವೀಸ್​ ಕಮಿಷನ್​ ಅಡಿ 14 ವರ್ಷಗಳ ಅವಧಿಗೆ ನೇಮಕಾತಿ ನಡೆಸಲಾಗುವುದು. ಹುದ್ದೆಯ ಆರಂಭಿಕ ಅವಧಿ 10 ವರ್ಷ ಆಗಿದ್ದು, ಇದಾದ ಬಳಿಕ 4 ವರ್ಷ ವಿಸ್ತರಣೆ ನಡೆಸಲಾಗುವುದು. ಮೊದಲ ಆರು ತಿಂಗಳ ಸಮಯ ಪ್ರೊಬೆಷನರಿ ಆಗಿರಲಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಮೆಡಿಕಲ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಆರಂಭ ಜುಲೈ 5ರಿಂದ ಆಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 3 ಆಗಿದೆ.

ಈ ಹದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಈ https://www.joinindianarmy.nic.in/ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಆಫೀಸರ್​ ಎಂಟ್ರಿ ಅಪ್ಲಿಕೇಷನ್​/ಲಾಗಿನ್​ಗೆ ಭೇಟಿ ನೀಡಿ, ರಿಜಿಸ್ಟ್ರೇಷನ್​ ನಡೆಸಿ. ಬಳಿಕ ಅರ್ಜಿಯಲ್ಲಿ ಸರಿಯಾದ ದಾಖಲೆ, ವಿವರಗಳನ್ನು ನೀಡಿ ಭರ್ತಿ ಮಾಡಿ.

ಇದನ್ನೂ ಓದಿ: Bank Jobs: ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ 1000 ಮ್ಯಾನೇಜರ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ.. ಪದವೀಧರರಿಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.