ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಏಪ್ರಿಲ್ 2, 1997 ಮತ್ತು ಏಪ್ರಿಲ್ 1, 2004ರ ನಡುವೆ ಜನಿಸಿರಬೇಕು.
ಹುದ್ದೆಗಳ ವಿವರ: ಎಸ್ಎಸ್ಸಿ (ತಾಂತ್ರಿಕ)- 62 ಪುರುಷ: 175 ಹುದ್ದೆಗಳು, ಎಸ್ಎಸ್ಸಿ (ತಾಂತ್ರಿಕ- 33 ಮಹಿಳೆ: 19 ಹುದ್ದೆಗಳು, ಎಸ್ಎಸ್ಸಿಡಬ್ಲ್ಯೂ (ತಾಂತ್ರಿಕೇತರ) ರಕ್ಷಣಾ ಸಿಬ್ಬಂದಿಯ ವಿಧವಾ ಅಭ್ಯರ್ಥಿ: 2
ವಿದ್ಯಾರ್ಹತೆ: ಎಸ್ಎಸ್ಸಿ (ತಾಂತ್ರಿಕ) ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಇಂಜಿನಿಯರ್, ಮೆಕಾನಿಕಲ್ ಇಂಜಿನಿಯರ್, ಮಿಸ್ಕ್ ಇಂಜಿನಿಯರಿಂಗ್ನಲ್ಲಿ ಬಿಇ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು. ಎಸ್ಎಸ್ಸಿಡಬ್ಲ್ಯೂ (ತಾಂತ್ರಿಕೇತರ) ಹುದ್ದೆಗೆ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಎಸ್ಎಸ್ಸಿ (ತಾಂತ್ರಿಕ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಠ 20ರಿಂದ ಗರಿಷ್ಠ 27 ವರ್ಷದ ವಯೋಮಿತಿಯೊಳಗೆ ಇರಬೇಕು. ಎಸ್ಎಸ್ಸಿಡಬ್ಲ್ಯೂ (ತಾಂತ್ರಿಕೇತರ) ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ.
ಆಯ್ಕೆ ವಿಧಾನ: ಎಸ್ಎಸ್ಬಿ ಸಂದರ್ಶನ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ವೇತನ ಎಷ್ಟು?: ಈ ಮೇಲಿನ ಹುದ್ದೆಗಳಿಗೆ ಆರಂಭದ ತರಬೇತಿಯಲ್ಲಿ ನಿಗದಿತ ವೇತನ 56,100 ರೂ ಇರಲಿದೆ. ತರಬೇತಿ ಬಳಿಕ ಹುದ್ದೆಗೆ ಅನುಸಾರವಾಗಿ ವೇತನ ನಿಗದಿಯಾಗಲಿದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಭರ್ತಿಗೆ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಮತ್ತು ನಿಬಂಧನೆಗಳನ್ನು ಸರಿಯಾಗಿ ಓದಿ, ಪರಿಶೀಲಿಸಿ, ಮುಂದುವರಿಯಬೇಕಿದೆ. www.joinindianarmy.nic.in ಜಾಲತಾಣಕ್ಕೆ ಭೇಟಿ ನೀಡಿ, ಆಫೀಸರ್ ಎಂಟ್ರಿ ಅಪ್ಲಿಕೇಷನ್/ ಲಾಗಿನ್ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಇಲ್ಲಿ ಅಭ್ಯರ್ಥಿಗಳು ತಮ್ಮ ಅಗತ್ಯ ಮಾಹಿತಿ ಮತ್ತು ಸಂಪೂರ್ಣ ವಿವರ ತುಂಬಿ ಸಬ್ಮಿಟ್ ಮಾಡಬೇಕಿದೆ. ಜೂನ್ 20ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ. ಜುಲೈ 19 ಕಡೇ ದಿನಾಂಕ. ಯಾವುದೇ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ತುಂಬುವಂತಿಲ್ಲ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಈ ಜಾಲತಾಣಕ್ಕೆ joinindianarmy.nic.in ಅಭ್ಯರ್ಥಿಗಳು ಭೇಟಿ ನೀಡಿ.