ಬಾರಾಮುಲ್ಲಾ, ಜಮ್ಮು ಕಾಶ್ಮೀರ: ಸೈನಿಕರ ತ್ಯಾಗಕ್ಕೆ ಮತ್ತು ಶಕ್ತಿಗೆ ತಲೆದೂಗದವರೇ ಇಲ್ಲ. ಜಮ್ಮು ಕಾಶ್ಮೀರದಲ್ಲಿ ಕೊರೆಯುವ ಚಳಿ ಮತ್ತು ಹಿಮಪಾತದ ನಡುವೆ ಅವರು ಕಾರ್ಯ ನಿರ್ವಹಿಸುವ ರೀತಿ ನಿಜಕ್ಕೂ ಅಚ್ಚರಿಗೊಳಿಸುತ್ತದೆ.
ಕೆಲವು ದಿನಗಳ ಹಿಂದೆ ಭಾರಿ ಹಿಮಪಾತದ ನಡುವೆ ಸೈನಿಕನೋರ್ವ ಗಡಿ ರಕ್ಷಣೆಯಲ್ಲಿ ತೊಡಗಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ಭಾರತೀಯ ಸೇನೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮೊಣಕಾಲಿನ ಮಟ್ಟಕ್ಕೆ ಇರುವ ಹಿಮದಲ್ಲೇ ನಡೆದು ಸೈನಿಕರು ಗಸ್ತು ತಿರುಗುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದಿಂದ ಯುವಕನನ್ನು ಚೀನಾ ಸೇನೆ ಅಪಹರಿಸಿದೆ : ಸಂಸದ ತಾಪಿರ್ ಗಾವೋ