ETV Bharat / bharat

ಮಧ್ಯಪ್ರದೇಶದಲ್ಲಿ ಸುಖೋಯ್​-30, ಮಿರಾಜ್​-2000 ಯುದ್ಧ ವಿಮಾನಗಳು ಪತನ.. ಒಬ್ಬ ಪೈಲಟ್​ ಸಾವು

ಮಧ್ಯಪ್ರದೇಶದಲ್ಲಿ ಸುಖೋಯ್​-30, ಮಿರಾಜ್​-2000 ಪತನ - ತರಬೇತಿ ಸಮಯದಲ್ಲಿ ಅವಘಡ - ಅಪಘಾತದ ವಿವರಗಳನ್ನು ಕಲೆಹಾಕುತ್ತಿರುವ ಅಧಿಕಾರಿಗಳು

Bharatpur  IAF Fighter Jet Crash  Fighter Jet Crash in Bharatpur  IAF Plane Crash  Chartered Aircraft Crash In Bharatpur  MIRAJ FIGHTER JET FELL  MIRAJ FIGHTER JET FELL IN PAHARGAR  ದರೆಗುರುಳಿ ಬಿದ್ದ ಯುದ್ಧ ವಿಮಾನ  ರಾಜಸ್ಥಾನದಲ್ಲಿ ದರೆಗುರುಳಿ ಬಿದ್ದ ಯುದ್ಧ ವಿಮಾನ  ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಭೀಕರ ದುರಂತ  ಎರಡು ಯುದ್ಧ ವಿಮಾನಗಳು ಪತನ  ಭಾರತೀಯ ವಾಯುಪಡೆಯ ಮಿಗ್ ವಿಮಾನ  ಪೊಲೀಸರು ಮತ್ತು ಆಡಳಿತ ಮಂಡಳಿ
ಮಧ್ಯಪ್ರದೇಶ-ರಾಜಸ್ಥಾನದಲ್ಲಿ ದರೆಗುರುಳಿ ಬಿದ್ದ ಮೂರು ಯುದ್ಧ ವಿಮಾನಗಳು
author img

By

Published : Jan 28, 2023, 11:57 AM IST

Updated : Jan 28, 2023, 4:42 PM IST

ಯುದ್ಧ ವಿಮಾನಗಳು ಪತನ

ಮೊರೆನಾ(ಮಧ್ಯಪ್ರದೇಶ): ದೇಶದಲ್ಲಿಂದು ಒಂದೇ ದಿನ ವಾಯಪಡೆಯು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡಿವೆ. ವಿಮಾನಗಳು ಧರೆಗುರುಳುತ್ತಿದ್ದಂತೆ ಹೊತ್ತಿ ಉರಿದಿವೆ. ಈ ವೇಳೆ ಒಬ್ಬ ಪೈಲಟ್​ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮತ್ತಿಬ್ಬರು ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

  • The IAF deeply regrets to inform that Wg Cdr Hanumanth Rao Sarathi suffered fatal injuries during the accident. All air warriors and the fraternity stand strongly with the bereaved family.

    — Indian Air Force (@IAF_MCC) January 28, 2023 " class="align-text-top noRightClick twitterSection" data=" ">

ಮೊರೆನಾದಲ್ಲಿ ಯುದ್ಧ ಮಿಮಾನಗಳು ಪತನ: ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿವೆ. ಜಿಲ್ಲೆಯ ಪಹಾರ್‌ಗಢ ಅರಣ್ಯದಲ್ಲಿ ಫೈಟರ್ ಜೆಟ್ ಬಿದ್ದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ಕೂಡಲೇ ಪೊಲೀಸ್ ಪಡೆ ಪಹಾರ್‌ಗಢ ಅರಣ್ಯಕ್ಕೆ ದೌಡಾಯಿಸಿತು. ಈ ಎರಡೂ ಯುದ್ಧ ವಿಮಾನಗಳು ಗ್ವಾಲಿಯರ್‌ನ ಐಎಎಫ್ ವಾಯುನೆಲೆಯಿಂದ ಇಂದು ಬೆಳಗ್ಗೆ ಟೇಕಾಫ್ ಆಗಿದ್ದವು. ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಸುಖೋಯ್ -30 ಮತ್ತು ಮಿರಾಜ್ 2000 ಸೇರಿದಂತೆ ಈ ಎರಡೂ ಯುದ್ಧ ವಿಮಾನಗಳು ಮೊರೆನಾ ಬಳಿ ಪತನಗೊಂಡಿವೆ. ಈ ವಿಮಾನಗಳ ಅಪಘಾತದ ನಂತರ ಮಾಹಿತಿ ಪಡೆದ ತಕ್ಷಣ ಪರಿಹಾರ ತಂಡವು ಸ್ಥಳಕ್ಕೆ ತಲುಪಿತು.

  • #WATCH | Wreckage seen. A Sukhoi-30 and Mirage 2000 aircraft crashed near Morena, Madhya Pradesh. Search and rescue operations launched. The two aircraft had taken off from the Gwalior air base where an exercise was going on. pic.twitter.com/xqCJ2autOe

    — ANI (@ANI) January 28, 2023 " class="align-text-top noRightClick twitterSection" data=" ">

ಮೊರೆನಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಫ್ರೆಂಚ್ ನಿರ್ಮಿತ ಮಿರಾಜ್ 2000 ಮತ್ತು ರಷ್ಯಾದ ನಿರ್ಮಿತ ಸುಖೋಯ್-30 ಸೇರಿವೆ. ಆಗಸದಲ್ಲಿ ಇನ್ನು ಸುಖೋಯ್​ ಮತ್ತು ಮಿರಾಜ್​ ಮಧ್ಯೆ ಡಿಕ್ಕಿ ಸಂಭವಿಸಿದೆಯಾ ಅಥವಾ ಇನ್ನೇನಾದರೂ ಸಮಸ್ಯೆ ಎದುರಾಯಿತಾ ಎಂಬುದು ತನಿಖೆ ಮೂಲಕ ತಿಳಿದು ಬರಬೇಕಿದೆ. ಅಪಘಾತದ ಸಮಯದಲ್ಲಿ ಸುಖೋಯ್ 30 ವಿಮಾನಗಳಲ್ಲಿ ಇಬ್ಬರು ಪೈಲಟ್‌ಗಳು ಇದ್ದರು. ಮಿರಾಜ್ 2000ದಲ್ಲಿ ಒಬ್ಬ ಪೈಲಟ್ ಇದ್ದರು. ಆರಂಭಿಕ ವರದಿಗಳ ಪ್ರಕಾರ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ.

  • Rajasthan | A chartered aircraft crashed in Bharatpur. Police and administration have been sent to the spot. More details are awaited: District Collector Alok Ranjan pic.twitter.com/wfbofbKA3I

    — ANI MP/CG/Rajasthan (@ANI_MP_CG_RJ) January 28, 2023 " class="align-text-top noRightClick twitterSection" data=" ">

ರಾಜಸ್ಥಾನದಲ್ಲೂ ವಿಮಾನ ಪತನ: ಭಾರತೀಯ ವಾಯುಪಡೆಯ ಮಿಗ್ ವಿಮಾನವು ಜಿಲ್ಲೆಯ ಉಚೈನ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಪತನಗೊಂಡಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಆಡಳಿತ ಮಂಡಳಿ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಇದಾದ ಬಳಿಕ ವಾಯುಪಡೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಉತ್ತರ ಪ್ರದೇಶದ ಆಗ್ರಾ ಏರ್ ಫೋರ್ಸ್ ಸ್ಟೇಷನ್​ನಿಂದ ಈ ವಿಮಾನ ಟೇಕ್ ಆಫ್ ಆಗಿರುವ ಸಾಧ್ಯತೆ ಇದೆ. ಪ್ರಸ್ತುತ ವಾಯುಪಡೆಯು ಅಪಘಾತದ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

  • Sukhoi-30 and Mirage 2000 aircraft crash near Morena, Madhya Pradesh | Defence Minister Rajnath Singh is in touch with CDS Gen Anil Chauhan and IAF chief Air Chief Marshal VR Chaudhari. He is gathering details on the crash from them: Defence Sources pic.twitter.com/slTtIjntYx

ಇಂದು ಬೆಳಗ್ಗೆ 10.30ರ ಸುಮಾರಿಗೆ ಆಕಾಶದಿಂದ ಹಾರುತ್ತಿದ್ದ ಫೈಟರ್ ವಿಮಾನವೊಂದು ಹಠಾತ್ತನೆ ಗ್ರಾಮದ ಹೊರವಲಯದ ಹೊಲಗಳಲ್ಲಿ ಬಿದ್ದಿದೆ ಎಂದು ನಾಗಲಾ ಬಿಜ್ಜಾ ಗ್ರಾಮಸ್ಥರು ತಿಳಿಸಿದ್ದಾರೆ. ವಿಮಾನ ಪತನದ ಸದ್ದಿಗೆ ಇಡೀ ಗ್ರಾಮವೇ ಕಂಪಿಸಿತು. ಗ್ರಾಮದ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಗ್ರಾಮದ ಹೊರಗೆ ಎಲ್ಲೆಂದರಲ್ಲಿ ವಿಮಾನದ ತುಣುಕುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ವಿಮಾನ ಅಪಘಾತದ ಅವಶೇಷಗಳಲ್ಲಿ ಪೈಲಟ್ ಅಥವಾ ಇತರ ಗಾಯಾಳುಗಳು ಎಲ್ಲಿಯೂ ಕಂಡುಬಂದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಬಂದಿರಬೇಕು ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಸಂಪೂರ್ಣ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಅಥವಾ ವಾಯುಪಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವಿಮಾನ ಪತನಗೊಂಡಿರುವುದರ ಬಗ್ಗೆ ವರದಿಯಾಗಿದೆ. ಆದರೆ ಯಾವ ವಿಮಾನ ಪತನಗೊಂಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ವಾಯುಪಡೆಯಿಂದ ಮಾಹಿತಿ ಪಡೆದ ನಂತರವಷ್ಟೇ ಖಚಿತಪಡಿಸಲಾಗುವುದು ಎಂದು ರಕ್ಷಣಾ ಪಿಆರ್‌ಒ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿರುವ ರಕ್ಷಣಾ ಸಚಿವ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತದ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.

ಓದಿ: ಆಸ್ಪತ್ರೆಯಲ್ಲಿ ಬೆಂಕಿ: ದಟ್ಟ ಹೊಗೆಗೆ ಉಸಿರುಗಟ್ಟಿ ವೈದ್ಯ ದಂಪತಿ ಸೇರಿ ಐವರ ಸಾವು

Last Updated : Jan 28, 2023, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.