ETV Bharat / bharat

ಭಾರತೀಯ ವಾಯುಸೇನೆಗೆ 91ನೇ ವರ್ಷಾಚರಣೆ: 2ನೇ ಮಹಾ ಯುದ್ಧದಲ್ಲಿ ಭಾಗಿಯಾಗಿದ್ದ ವಿಶ್ವದ 4ನೇ ದೊಡ್ಡ ಪಡೆ - ಭಾರತೀಯ ವಾಯುಪಡೆ

ಇಂದು ಭಾರತೀಯ ವಾಯುಪಡೆಯ 91ನೇ ಸಂಸ್ಥಾಪನಾ ದಿನ. ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಸೇನೆಯು ವಿಶ್ವದ ನಾಲ್ಕನೇ ದೊಡ್ಡ ವಾಯುಪಡೆಯಾಗಿದೆ.

ಭಾರತೀಯ ವಾಯುಸೇನೆಗೆ 91ನೇ ವರ್ಷಾಚರಣೆ
ಭಾರತೀಯ ವಾಯುಸೇನೆಗೆ 91ನೇ ವರ್ಷಾಚರಣೆ
author img

By ETV Bharat Karnataka Team

Published : Oct 8, 2023, 5:52 PM IST

ಹೈದರಾಬಾದ್: ಭಾರತದ ವಾಯುಪಡೆಯು ವಿಶ್ವದ ನಾಲ್ಕನೇ ದೊಡ್ಡ ಸೇನೆಯಾಗಿದೆ. ಎರಡನೇ ಮಹಾಯುದ್ಧ ಸೇರಿದಂತೆ ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ವಾಯುಸೇನೆಯನ್ನು 1932 ರ ಅಕ್ಟೋಬರ್​ 8 ರಂದು ಸ್ಥಾಪನೆ ಮಾಡಲಾಯಿತು. ಇಂದು 91 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸೈನಿಕರು ಹಲವೆಡೆ ಪಥಸಂಚಲನ, ಯುದ್ಧ ವಿಮಾನಗಳನ್ನು ಹಾರಾಟ ನಡೆಸಿ ಸಾಹಸ ಪ್ರದರ್ಶನ ನಡೆಸಿದರು.

ವಾಯುಸೇನೆಯ ಹಿನ್ನೆಲೆ: ಭಾರತೀಯ ವಾಯುಪಡೆ ರಚನೆಯಾಗಿ ಇಂದಿಗೆ 91 ವರ್ಷ ಕಳೆದಿದೆ. ದೇಶವನ್ನಾಳಿದ ಬ್ರಿಟಿಷ್ ಸರ್ಕಾರವು 1932 ರಲ್ಲಿ ಭಾರತೀಯ ವಾಯುಪಡೆಯನ್ನು ಸ್ಥಾಪಿಸಿತು. ಇದನ್ನು ಮೊದಲು ಯುನೈಟೆಡ್ ಕಿಂಗ್‌ಡಮ್​ನ ರಾಯಲ್ ಏರ್​ಫೋರ್ಸ್‌ಗೆ ಸಹಾಯಕ ಪಡೆಯಾಗಿ ರೂಪಿಸಲಾಯಿತು. ಎರಡನೇ ವಿಶ್ವ ಸಮರದಲ್ಲಿ ಭಾರತೀಯ ವಾಯುಪಡೆಯ ಫ್ಲೈಟ್ ಮತ್ತು ಸ್ಕ್ವಾಡ್ರನ್ ಪಡೆಗಳು ಹೋರಾಡಿದ್ದವು. ಇದರ ನಂತರ ಇಂಡಿಯನ್ ಏರ್ ಫೋರ್ಸ್ ಅನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಮರುನಾಮಕರಣ ಮಾಡಲಾಯಿತು.

  • Best wishes to all air warriors and their families on Air Force Day. India is proud of the valour, commitment and dedication of the Indian Air Force. Their great service and sacrifice ensure our skies are safe. pic.twitter.com/HJ5coUq2eP

    — Narendra Modi (@narendramodi) October 8, 2023 " class="align-text-top noRightClick twitterSection" data=" ">

ವಾಯುಪಡೆಗೆ ಮೊಟ್ಟ ಮೊದಲ ಬಾರಿಗೆ 1933 ರಲ್ಲಿ ವಿಮಾನವೊಂದನ್ನು ನೀಡಲಾಯಿತು. ಇದು ಭಾರತದ ಸ್ವಾತಂತ್ರ್ಯ ಮತ್ತು ವಿಭಜನೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. 1950 ರಲ್ಲಿ ಭಾರತವನ್ನು ಗಣರಾಜ್ಯವೆಂದು ಘೋಷಿಸಿದಾಗ, ರಾಯಲ್ ಇಂಡಿಯನ್​ ಏರ್ ಫೋರ್ಸ್ ಅನ್ನು ಸಶಸ್ತ್ರ ಪಡೆಗಳಿಂದ ತೆಗೆದುಹಾಕಿ, ಭಾರತೀಯ ವಾಯುಪಡೆ ಎಂದು ಮರುನಾಮಕರಣ ಮಾಡಲಾಯಿತು. ಏರ್​ ಮಾರ್ಷಲ್​ ಸುಬ್ರೊತೋ ಮುಖರ್ಜಿ ಅವರು ಭಾರತೀಯ ವಾಯುಪಡೆಯನ್ನು ರೂಪಿಸಿದರು. ಸ್ವಾತಂತ್ರ್ಯ ನಂತರದ ಭಾರತೀಯ ವಾಯುಪಡೆಯ ಮೊದಲ ಮುಖ್ಯಸ್ಥರಾಗಿ ಅವರು ಕಾರ್ಯ ನಿರ್ವಹಿಸಿದರು.

  • Greetings to the Air Force personnel on #IndianAirForceDay.

    With its wings of steel and the heart of courage, the Indian Air Force has fervently secured the nation's interests during war and peace. On this auspicious occasion, I commemorate the invaluable service and the… pic.twitter.com/icMzc6Uec2

    — Amit Shah (@AmitShah) October 8, 2023 " class="align-text-top noRightClick twitterSection" data=" ">

ಭಾರತೀಯ ವಾಯುಪಡೆಯ ಸಾಮರ್ಥ್ಯ: ಭಾರತೀಯ ವಾಯುಪಡೆಯು ಅಮೆರಿಕ, ಚೀನಾ ಮತ್ತು ರಷ್ಯಾ ನಂತರ ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆಯಾಗಿದೆ. ಸೇನೆಯು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲೂ ಭಾಗಿಯಾಗಿದೆ. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ವಾಯುಪಡೆಯು ನಡೆಸುವ ಪರಿಹಾರ ಕಾರ್ಯಾಚರಣೆಗಳು ಬಹಳ ಸಹಾಯಕವಾಗಿವೆ. ಏರ್ ಫೋರ್ಸ್ ಅನ್ನು ಐದು ಕಾರ್ಯಾಚರಣೆಯ ಮತ್ತು ಎರಡು ಕ್ರಿಯಾತ್ಮಕ ಕಾರ್ಯಗಳ ಪಡೆಗಳನ್ನಾಗಿ ವಿಂಗಡಿಸಲಾಗಿದೆ. ಆಜ್ಞಾ ಪಾಲಕ ಪಡೆಗಳನ್ನು ಏರ್ ಮಾರ್ಷಲ್ ಶ್ರೇಣಿಯ ಕಮಾಂಡಿಂಗ್ ಇನ್ ಚೀಫ್ ಮೇಲ್ವಿಚಾರಣೆ ಮಾಡುತ್ತಾರೆ. ಭಾರತೀಯ ವಾಯುಪಡೆಯ 91 ನೇ ವರ್ಷಾಚರಣೆಯನ್ನು ಈ ಬಾರಿ 'ಏರ್‌ಪವರ್ ಬಿಯಾಂಡ್ ಬೌಂಡರೀಸ್' ಎಂಬ ಥೀಮ್​ನಡಿ ಆಚರಿಸಲಾಗುತ್ತಿದೆ.

ಗ್ರೂಪ್​ ಕ್ಯಾಪ್ಟನ್​ ಸಚಿನ್​ ಶುಭಾಶಯ: ಕ್ರಿಕೆಟ್​ ದಂತಕಥೆ ಮತ್ತು ಗೌರವಾನ್ವಿತ ಗ್ರೂಪ್ ಕ್ಯಾಪ್ಟನ್ ಆಗಿರುವ ಸಚಿನ್ ತೆಂಡೂಲ್ಕರ್ ಅವರು ವಾಯುಪಡೆಯ 91ನೇ ವರ್ಷಾಚರಣೆಯ ಶುಭಾಶಯ ಕೋರಿದ್ದಾರೆ. ವಿಡಿಯೋವೊಂದನ್ನು ಹಂಚಿಕೊಂಡಿರುವ ಲಿಟಲ್​ ಮಾಸ್ಟರ್​, ಐಎಎಫ್‌ನ ಎಲ್ಲಾ ಸಿಬ್ಬಂದಿ ಮತ್ತು ಕುಟುಂಬಗಳಿಗೆ 91 ನೇ ವಾರ್ಷಿಕೋತ್ಸವದ ಶುಭಾಶಯಗಳು. ನೀಲಿ ಅಂಗಿ (ಸೇನಾ ಸಮವಸ್ತ್ರ) ಧರಿಸಲು ಅವಕಾಶ ನೀಡಿದ ಭಾರತೀಯ ವಾಯುಪಡೆಗೆ ಧನ್ಯವಾದ. ಈ ಸಮವಸ್ತ್ರ ಧರಿಸಿದಾಗ ಹೆಮ್ಮೆ ಮತ್ತು ಧನ್ಯತಾ ಭಾವ ಮೂಡುತ್ತದೆ. ವಾಯುಪಡೆಯ ಭಾಗವಾಗಿರುವುದನ್ನು ನಾನು ಪ್ರೀತಿಸುತ್ತೇನೆ. ಭಾರತ ಕ್ರಿಕೆಟ್​ಗಾಗಿ ಆಡಿದಾಗ ನಾನು ನೀಲಿ ವಸ್ತ್ರ ಧರಿಸಿದ್ದೆ. ಅಂಥಹದ್ದೇ ಭಾವನೆ ಈಗಲೂ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾತಿಗಣತಿ ಬಗ್ಗೆ ಪ್ರಧಾನಿ ಮೌನವೇಕೆ?, ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಸಮೀಕ್ಷೆ ನಡೆಸಿ: ಕಾಂಗ್ರೆಸ್​ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.