ETV Bharat / bharat

ಗಡಿರೇಖೆ ಬದಲಾಯಿಸುವ ಚೀನಾದ ಪ್ರಯತ್ನವನ್ನು ಭಾರತ ಒಪ್ಪದು: ಜೈಶಂಕರ್ - ಭಾರತ ಚೀನಾ ವಾಸ್ತವಿಕ ಗಡಿರೇಖೆ

ಭಾರತ ಹಾಗೂ ಚೀನಾ ನಡುವಿನ ವಾಸ್ತವಿಕ ಗಡಿರೇಖೆ (LAC) ಬದಲಾಯಿಸುವ ಏಕಪಕ್ಷೀಯ ಪ್ರಯತ್ನವನ್ನು ಭಾರತ ಅನುಮತಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.

ಜೈಶಂಕರ್
ಜೈಶಂಕರ್
author img

By

Published : Jun 19, 2022, 9:27 AM IST

ನವದೆಹಲಿ: ಭಾರತ-ಚೀನಾದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಎರಡೂ ರಾಷ್ಟ್ರಗಳ ಗಡಿಯಲ್ಲಿ ಸೇನಾ ಪಡೆಗಳು ಶಸ್ತ್ರಸಜ್ಜಿತವಾಗಿ ಅಣಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, "ವಾಸ್ತವಿಕ ಗಡಿರೇಖೆಯನ್ನು ಬದಲಾಯಿಸುವ ಚೀನಾದ ಪ್ರಯತ್ನವನ್ನು ಭಾರತ ಒಪ್ಪುವುದಿಲ್ಲ" ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪ್ರಸ್ತುತ ಇರುವ ಗಡಿರೇಖೆ ಬದಲಾಯಿಸುವ ಯಾವುದೇ ಏಕಪಕ್ಷೀಯ ಪ್ರಯತ್ನವನ್ನು ಭಾರತ ಅನುಮತಿಸುವುದಿಲ್ಲ. ಪೂರ್ವ ಲಡಾಖ್‌ನಲ್ಲಿ ನಮ್ಮ ಸೈನಿಕರು ಚೀನಿಯರ ದಾಳಿಯನ್ನು ಎದುರಿಸುತ್ತಿದ್ದಾರೆ. ಗಡಿ ವಿಚಾರವಾಗಿ ನೆರೆ ದೇಶ ಈ ಹಿಂದೆಯೂ ಕೂಡ ಆಕ್ರಮಣಕಾರಿ ನಿಲುವು ಪ್ರದರ್ಶಿಸಿತ್ತು ಎಂದರು.

ಚೀನಾದೊಂದಿಗಿನ ದ್ವಿಪಕ್ಷೀಯ ಮಾತುಕತೆಗಳು ಕೊನೆಗೊಂಡಿಲ್ಲ. ಗಡಿರೇಖೆ ಬದಲಾವಣೆಗೆ ಸಮಯ ತೆಗೆದುಕೊಳ್ಳುತ್ತದೆ. ಮಾತುಕತೆಯ ಮೂಲಕ ಗಡಿ ವಿವಾದ ಬಗೆಹರಿಸಲು ನಾವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಯುವಕರು ದುಃಖದಲ್ಲಿದ್ದಾರೆ, ನನ್ನ ಬರ್ತ್​ಡೇ ಆಚರಿಸಬೇಡಿ: ರಾಹುಲ್ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.