ETV Bharat / bharat

ಸಿಂಗಾಪುರದ ಮೂರು ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ ಭಾರತ - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ತನ್ನ ಪ್ರಕಟಣೆಯಲ್ಲಿ ಪೋಲಾರ್ ಉಪಗ್ರಹ ಉಡಾವಣಾ ವಾಹನವು ಬೆಳಗಿನ 8:30ರ ಸಮಯದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ ಎಂದು ತಿಳಿಸಿದೆ.

india-will-launch-three-satellites-of-singapore
ಸಿಂಗಾಪುರದ ಮೂರು ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ ಭಾರತ !
author img

By

Published : Jun 28, 2022, 5:57 PM IST

ಇದೇ ಬರುವ ಜೂನ್ 30 ರಂದು ಈ ವರ್ಷದ ಎರಡನೇ ಬಾಹ್ಯಾಕಾಶ ಉಡಾವಣೆಗೆ ಭಾರತ ಸಿದ್ಧತೆ ನಡೆಸುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೂನ್ 22ರ ತನ್ನ ಪ್ರಕಟಣೆಯಲ್ಲಿ ಪೋಲಾರ್ ಉಪಗ್ರಹ ಉಡಾವಣಾ ವಾಹನವು ಬೆಳಗಿನ 8:30ರ ಸಮಯದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ ಎಂದು ತಿಳಿಸಿದೆ.

ಈ ಉಡಾವಣಾ ವಾಹನವು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್) ಸಿಂಗಾಪುರದ ಮೂರು ಉಪಗ್ರಹಗಳನ್ನು ಜೋಡಿಸಲಿದೆ. ಲೋ ಅರ್ಥ್ ಆರ್ಬಿಟ್ (ಭೂಮಿಯ ಕೆಳಕಕ್ಷೆ) ಎನ್ನುವುದು ಭೂಮಿ ಕೇಂದ್ರಿತವಾದ ಕಕ್ಷೆ. ಇದು ಭೂಮಿಯಿಂದ 2,000 ಕಿ.ಮೀ. ಅಥವಾ ಅದಕ್ಕಿಂತ ಕಡಿಮೆ ಎತ್ತರದಲ್ಲಿದೆ. ಈ ಎತ್ತರದಲ್ಲಿ ಸ್ಯಾಟಲೈಟ್‌ ಭೂಮಿಯ ಕಕ್ಷೆಯನ್ನು 84 ರಿಂದ 127 ನಿಮಿಷಗಳಲ್ಲಿ ಸುತ್ತುತ್ತದೆ.

ಈ ಉಡಾವಣಾ ವಾಹನವು ಭಾರತದ ಆರ್ಬಿಟಲ್ ಪ್ಲಾಟ್‌ಫಾರ್ಮ್ (ಕಕ್ಷೆಯ ನಿಲ್ದಾಣ) ಅನ್ನೂ ಕೊಂಡೊಯ್ಯಲಿದೆ. ಈ ಆರ್ಬಿಟಲ್ ಭೂಮಿಯ ಕಕ್ಷೆಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳಲಿದೆ ಎಂದು ಇಸ್ರೋ ಹೇಳಿಕೆ ನೀಡಿದೆ. ಇಸ್ರೋ ತನ್ನ ಈ ವರ್ಷದ ಮೊದಲ ಉಡಾವಣೆಯನ್ನು ಫೆಬ್ರವರಿ ತಿಂಗಳಲ್ಲಿ ಕೈಗೊಂಡಿದ್ದು, ಮೂರು ಉಪಗ್ರಹಗಳನ್ನು ಹೊತ್ತೊಯ್ದ ಪಿಎಸ್‌ಎಲ್‌ವಿ - ಸಿ52 ರಾಕೆಟ್ ಅವುಗಳನ್ನು ಸನ್ - ಸಿನ್ಕ್ರೊನಸ್ ಧ್ರುವೀಯ ಕಕ್ಷೆಗೆ ಸೇರಿಸಿತ್ತು.

ಎರಡನೇ ವಾಣಿಜ್ಯ ಉದ್ದೇಶದ ಉಡಾವಣೆ : 25 ಗಂಟೆಗಳ ಉಡಾವಣಾ ಪೂರ್ವ ಕ್ಷಣಗಣನೆಯು ಜೂನ್ 29 ರಂದು ಬೆಳಗ್ಗೆ 7:30ಕ್ಕೆ ಆರಂಭವಾಗಲಿದೆ. ಇಸ್ರೋ ಈ ಉಡಾವಣೆಯು ತನ್ನ ವಾಣಿಜ್ಯಿಕ ಅಂಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಕೈಗೊಳ್ಳುತ್ತಿರುವ ಎರಡನೇ ವಾಣಿಜ್ಯ ಉದ್ದೇಶದ ಉಡಾವಣೆ ಎಂದು ತಿಳಿಸಿದೆ. ಈ ಸಂಸ್ಥೆಯನ್ನು ಮಾರ್ಚ್ 2019ರಲ್ಲಿ ಭಾರತೀಯ ಬಾಹ್ಯಾಕಾಶ ಯೋಜನೆಗಳಲ್ಲಿ ಸ್ಥಳೀಯ ಉದ್ಯಮಗಳೂ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಆರಂಭಿಸಲಾಯಿತು. ಇದರ ಮೊದಲ ವಾಣಿಜ್ಯ ಉದ್ದೇಶದ ಉಡಾವಣೆಯನ್ನು 2021ರ ಮಾರ್ಚ್ ನಲ್ಲಿ ಕೈಗೊಳ್ಳಲಾಯಿತು. ಆ ಉಡಾವಣೆಯಲ್ಲಿ ಪಿಎಸ್‌ಎಲ್‌ವಿ - ಸಿ51 ರಾಕೆಟ್ 19 ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಜೋಡಿಸಿತ್ತು.

ಇಸ್ರೋ ನೀಡಿರುವ ಹೇಳಿಕೆಯ ಪ್ರಕಾರ, ಜೂನ್ 30ರಂದು ಉಡಾವಣೆಗೊಳ್ಳಲಿರುವ ಉಪಗ್ರಹಗಳು ಡಿಎಸ್ - ಇಓ, ನ್ಯೂಸಾರ್, ಹಾಗೂ ಸ್ಕೂಬ್ - 1 ಉಪಗ್ರಹಗಳಾಗಿವೆ. ಅವುಗಳಲ್ಲಿ ಡಿಎಸ್ - ಇಓ 365 ಕೆಜಿ ತೂಕ ಹೊಂದಿದ್ದು, ಒಂದು ಭೂ ವೀಕ್ಷಣಾ ಉಪಗ್ರಹವಾಗಿದೆ. ಇದು ಒಂದು ಇಲೆಕ್ಟ್ರೋ - ಆಪ್ಟಿಕ್, ಮಲ್ಟಿ - ಸ್ಪೆಕ್ಟ್ರಲ್ ಪೇಲೋಡ್ ನೊಂದಿಗೆ 0.5 ಮೀಟರ್ ರೆಸೊಲ್ಯೂಷನ್ನಿನ ಇಮೇಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಉಪಗ್ರಹವು ಭೂಮಿಯ ವರ್ಗೀಕರಣ ಹಾಗೂ ವಿಪತ್ತು ಪರಿಹಾರ ಹಾಗೂ ಮಾನವೀಯ ಸಹಾಯಕದ ಕಾರ್ಯಗಳಲ್ಲಿ ಸಹಕಾರಿಯಾಗಲಿದೆ.

ನ್ಯೂಸಾರ್ ಉಪಗ್ರಹವು ಸಿಂಗಾಪುರದ ಪ್ರಥಮ ಸಣ್ಣ ಗಾತ್ರದ ವಾಣಿಜ್ಯ ಉಪಗ್ರಹವಾಗಿದ್ದು, ಇದರಲ್ಲಿ ಒಂದು ಸಿಂಥೆಟಿಕ್ ಅಪರ್ಚರ್ ರೇಡಾರ್ ವ್ಯವಸ್ಥೆಯೂ ಇರಲಿದೆ. ಈ ಉಪಗ್ರಹವು ಹಗಲು ರಾತ್ರಿ, ಎಂತಹಾ ವಾತಾವರಣದಲ್ಲೂ ಚಿತ್ರಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ‌.

ಈ ಎರಡೂ ಉಪಗ್ರಹಗಳನ್ನು ಸಿಂಗಾಪುರದ ಸರ್ಕಾರ ನಿರ್ವಹಿಸಲಿದ್ದು, ಇವುಗಳನ್ನು ದಕ್ಷಿಣ ಕೊರಿಯಾದ ಉಪಗ್ರಹ ನಿರ್ಮಾಣ ಸಂಸ್ಥೆಯಾದ ಸಾಟ್ರೆಕ್ ಇನಿಷಿಯೇಟಿವ್ ಕೊ. ಲಿಮಿಟೆಡ್ ನಿರ್ಮಿಸಿದೆ. ಮೂರನೆಯ ಉಪಗ್ರಹವಾದ ಸ್ಕೂಬ್ - 1 ಒಂದು ಸಂವಹನ ಉಪಗ್ರಹವಾಗಿದ್ದು, ಇದನ್ನು ಸಿಂಗಾಪುರದ ನಾನ್ಯಾಂಗ್ ಟೆಕ್ನಾಲಜಿಕಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.

- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.