ETV Bharat / bharat

2021ರ ಅಂತ್ಯದ ವೇಳೆ ಬಹುಪಾಲು ವಯಸ್ಕರಿಗೆ ವ್ಯಾಕ್ಸಿನೇಷನ್: ಕೇಂದ್ರ ಆರೋಗ್ಯ ಸಚಿವ

author img

By

Published : May 22, 2021, 1:04 AM IST

ಛತ್ತೀಸ್​​ಗಢ, ಗೋವಾ, ಹಿಮಾಚಲ ಪ್ರದೇಶ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ದಾದ್ರಾ- ನಗರ ಹವೇಲಿ ಮತ್ತು ದಮನ್- ಡಿಯು, ಲಡಾಖ್ ಮತ್ತು ಲಕ್ಷದ್ವೀಪಗಳಲ್ಲಿ ವ್ಯಾಕ್ಸಿನೇಷನ್​​ ಪ್ರಗತಿಯನ್ನು ಕೇಂದ್ರ ಆರೋಗ್ಯ ಸಚಿವರು ಪರಿಶೀಲನೆ ನಡೆಸಿದರು.

India will be in a position to vaccinate its adult population by end of 2021: Harsh Vardhan
2021ರ ಅಂತ್ಯದ ವೇಳೆ ಬಹುಪಾಲು ವಯಸ್ಕರಿಗೆ ವ್ಯಾಕ್ಸಿನೇಷನ್: ಕೇಂದ್ರ ಆರೋಗ್ಯ ಸಚಿವ

ನವದೆಹಲಿ: ಭಾರತದಲ್ಲಿ 2021ರ ಅಂತ್ಯದ ವೇಳೆಗೆ 18ರಿಂದ 45 ವರ್ಷ ವಯಸ್ಸಿನೊಳಗಿನ ಬಹುಪಾಲು ಮಂದಿಗೆ ಕೊರೊನಾ ವ್ಯಾಕ್ಸಿನೇಷನ್ ಮಾಡಿರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ಹೇಳಿದ್ದಾರೆ.

ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಾಂಕ್ರಾಮಿಕ ರೋಗ ಪರಿಸ್ಥಿತಿಯನ್ನು ಪರಿಶೀಲಿಸುವ ಸಭೆಯಲ್ಲಿ ಮಾತನಾಡಿದ ಅವರು ಆಗಸ್ಟ್ ಮತ್ತು ಡಿಸೆಂಬರ್ 2021ರ ನಡುವೆ ಭಾರತವು 216 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಹ ಮಾಡಲಿದೆ. ಈ ವರ್ಷದ ಜುಲೈ ವೇಳೆಗೆ 51 ಕೋಟಿ ಡೋಸ್​ ಸಂಗ್ರಹವಾಗಲಿದೆ ಎಂದಿದ್ದಾರೆ.

ಸಣ್ಣ ರಾಜ್ಯಗಳಲ್ಲೂ ಜಾಗ್ರತೆ ಅತ್ಯಗತ್ಯ

ಭವಿಷ್ಯದಲ್ಲಿ ವೈರಸ್ ರೂಪಾಂತರಗೊಳ್ಳಬಹುದು ಮತ್ತು ಮಕ್ಕಳಿಗೆ ಅಪಾಯವಾಗಬಹುದು ಎಂಬ ಊಹಾಪೋಹಗಳ ಬಗ್ಗೆ ಮಾತನಾಡಿದ ಹರ್ಷವರ್ಧನ್ ಅಂತಹ ಯಾವುದೇ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಸೌಲಭ್ಯಗಳನ್ನು ನವೀಕರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಭಾರತದಲ್ಲಿ ಕೋವಿಡ್​​ ವೈರಸ್ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು ಸಣ್ಣ ರಾಜ್ಯಗಳಲ್ಲೂ ಕೋವಿಡ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಎಲ್ಲರೂ ಅತ್ಯಂತ ಜಾಗರೂಕರಾಗಿರಬೇಕು ಎಂದು ಸೂಚನೆ ನೀಡಿದರು.

ವ್ಯಾಕ್ಸಿನ್ ವ್ಯರ್ಥ ಬೇಡ..

ಕೊರೊನಾ ವಿರುದ್ಧ ಹೋರಾಡಲು ಪರೀಕ್ಷೆ, ಚಿಕಿತ್ಸೆ ಮತ್ತು ಮತ್ತು ಲಸಿಕೆ ನೀಡುವುದು ಮಾತ್ರವಲ್ಲದೇ ಕೋವಿಡ್ ಮಾರ್ಗಸೂಚಿಗಳನ್ನೂ ಪಾಲಿಸಬೇಕು. ವ್ಯಾಕ್ಸಿನೇಷನ್ ಪ್ರಮಾಣವನ್ನು ಹೆಚ್ಚಿಸಬೇಕು. ಕೊರೊನಾ ಲಸಿಕೆಯನ್ನು ವ್ಯರ್ಥ ಮಾಡಬಾರದು. ಈ ಕುರಿತು ಜಾಗರೂಕರಾಗಿರಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹರ್ಷವರ್ಧನ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಜನರ ನಿಲ್ಲದ ಕಣ್ಣೀರು ಪ್ರಧಾನಿ ಕಣ್ಣೀರಿಗಿಂತ ಮುಖ್ಯವಾಗಿದೆ: ಕಾಂಗ್ರೆಸ್

ಛತ್ತೀಸ್​​ಗಢ, ಗೋವಾ, ಹಿಮಾಚಲ ಪ್ರದೇಶ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ದಾದ್ರಾ- ನಗರ ಹವೇಲಿ ಮತ್ತು ದಮನ್- ಡಿಯು, ಲಡಾಖ್ ಮತ್ತು ಲಕ್ಷದ್ವೀಪಗಳಲ್ಲಿ ವ್ಯಾಕ್ಸಿನೇಷನ್​​ ಪ್ರಗತಿಯನ್ನು ಹರ್ಷವರ್ಧನ್ ಪರಿಶೀಲನೆ ನಡೆಸಿದರು. ಕಪ್ಪು ಶಿಲೀಂಧ್ರ ರೋಗವನ್ನು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಯಿತು.

ಲಸಿಕೆ ತಯಾರಕ ಕಂಪನಿಗಳಿಗೆ ಬೆಂಬಲ

ಮಧುಮೇಹ ನಿಯಂತ್ರಣ ಮತ್ತು ಸ್ಟಿರಾಯ್ಡ್‌ಗಳ ನಿರ್ಬಂಧಿತ ಬಳಕೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿ ಮತ್ತು ಮಾರ್ಗಸೂಚಿಗಳನ್ನು ರಾಜ್ಯಗಳಿಗೆ ಒದಗಿಸಲಾಗಿದೆ ಎಂದ ಅವರು ದಿನವೊಂದಕ್ಕೆ ಕೋವಿಡ್​ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ, ಹೊಸ ಪ್ರಕರಣಗಳಿಗಿಂತ ಕಡಿಮೆ ಇದೆ ಎಂದು ಉಲ್ಲೇಖಿಸಿದರು.

ಈವರೆಗೆ ದೇಶದಲ್ಲಿ ಒಟ್ಟು 19,18,89,503 ಡೋಸ್​ ಲಸಿಕೆ ನೀಡಲಾಗಿದೆ. ಲಸಿಕೆ ತಯಾರಕ ಕಂಪನಿಗಳಿಗೆ ಸರ್ಕಾರ ಬೆಂಬಲ ನೀಡಲಿದೆ. ಮುಂದಿನ ದಿನಗಳಲ್ಲಿ ಲಸಿಕೆ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬ ಭರವಸೆಯನ್ನು ಹರ್ಷವರ್ಧನ್ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.