ETV Bharat / bharat

ಮುಂದಿನ ಹಣಕಾಸು ವರ್ಷದಲ್ಲಿ ಅಣುಸ್ಥಾವರಗಳಿಗಾಗಿ 100 ಟನ್ ಯುರೇನಿಯಂ ಆಮದು - ಭಾರತದಲ್ಲಿ ನೈಸರ್ಗಿಕ ಯುರೇನಿಯಂ

ಭಾರತವು ಮುಂದಿನ ಹಣಕಾಸು ವರ್ಷದಲ್ಲಿ 100 ಟನ್ ನೈಸರ್ಗಿಕ ಯುರೇನಿಯಂ ಮತ್ತು 133 ಇಂಧನ ಜೋಡಣಾ ಯುನಿಟ್​ಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

India to import 100 tonne of uranium to power nuclear power plants in FY23
ಮುಂದಿನ ಹಣಕಾಸು ವರ್ಷದಲ್ಲಿ ಅಣುಸ್ಥಾವರಗಳಿಗಾಗಿ 100 ಟನ್ ಯುರೇನಿಯಂ ಆಮದು
author img

By

Published : Mar 31, 2022, 1:37 PM IST

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಭಾರತವು 100 ಟನ್ ನೈಸರ್ಗಿಕ ಯುರೇನಿಯಂ ಮತ್ತು 133 ಇಂಧನ ಜೋಡಣಾ ಯುನಿಟ್​ಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ 2022-23ರ ಅವಧಿಯಲ್ಲಿ 100 ಟನ್ ನೈಸರ್ಗಿಕ ಯುರೇನಿಯಂ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಇದರ ಜೊತೆಗೆ 133 ಇಂಧನ ಜೋಡಣಾ ಯುನಿಟ್​​ಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕೂಡಂಕುಳಂನಲ್ಲಿರುವ ರಷ್ಯಾದ ರಿಯಾಕ್ಟರ್‌ಗಳಿಗೆ ಇಂಧನ ಪೂರೈಕೆಗಾಗಿ ಭಾರತ ಸರ್ಕಾರವು ರಷ್ಯಾದ ಒಕ್ಕೂಟದ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಷ್ಯಾ ಜೊತೆಗೆ ಕೆನಡಾ, ಕಜಕಿಸ್ತಾನ್, ರಷ್ಯಾ ಮತ್ತು ಉಜ್ಬೇಕಿಸ್ತಾನ್‌ನೊಂದಿಗೆ ಯುರೇನಿಯಂ ಖರೀದಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಭಾರತವು ಈಗಾಗಲೇ ಸಾಕಷ್ಟು ಯುರೇನಿಯಂ ಅನ್ನು ಆಮದು ಮಾಡಿಕೊಂಡಿದೆ. ಭಾರತದ ಪರಮಾಣು ಇಂಧನ ಸಂಕೀರ್ಣದಲ್ಲಿ (NFC) ಈಗಾಗಲೇ ಸಾಕಷ್ಟು ಯುರೇನಿಯಂ ಲಭ್ಯವಿದೆ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ನಿಯಮಗಳ ಅಡಿ ವಿವಿಧ ಅಣುಸ್ಥಾವರಗಳಿಗೆ ಯುರೇನಿಯಂ ಒದಗಿಸಲಾಗುತ್ತಿದೆ. 2021-22ರ ಆರ್ಥಿಕ ವರ್ಷದಲ್ಲಿ ಭಾರತವು ಯಾವುದೇ ಪರಮಾಣು ಇಂಧನವನ್ನು ಆಮದು ಮಾಡಿಕೊಂಡಿರಲಿಲ್ಲ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

2021ರ ಹಣಕಾಸು ವರ್ಷದಲ್ಲಿ 999.82 ಟನ್ ನೈಸರ್ಗಿಕ ಯುರೇನಿಯಂ ಅದಿರನ್ನು 572.44 ಕೋಟಿ ರೂಪಾಯಿಗಳಿಗೆ ಕಜಕಿಸ್ತಾನದಿಂದ ಆಮದು ಮಾಡಿಕೊಳ್ಳಲಾಗಿದೆ. 1,000.479 ಟನ್ ಯುರೇನಿಯಂ ಅನ್ನು ಕೆನಡಾದಿಂದ 618.95 ಕೋಟಿ ರೂಪಾಯಿಗೆ ಆಮದು ಮಾಡಿಕೊಳ್ಳಲಾಗಿದೆ ಎಂದು ಜಿತೇಂದ್ರ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ವಿದೇಶಿ ಉಪಗ್ರಹಗಳ ಉಡಾವಣೆ: 349 ಕೋಟಿ ರೂಪಾಯಿ ಆದಾಯ ಗಳಿಸಿದ ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.