ETV Bharat / bharat

ಚೀನಾ ವಿರುದ್ಧ ತಿರುಗಿಬಿದ್ದ ಭಾರತ: ಚೀನಾ ನಾಗರಿಕರ ಪ್ರವಾಸಿ ವೀಸಾ ಅಮಾನತು

ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಮರಳಿ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡದ ಚೀನಾದ ವಿರುದ್ಧ ಭಾರತ ಕಠಿಣ ನಿಲುವು ತಳೆದಿದೆ.

india-suspended
ವೀಸಾ ಅಮಾನತು
author img

By

Published : Apr 24, 2022, 9:45 PM IST

ನವದೆಹಲಿ: ಕೊರೊನಾ ವೇಳೆ ವಾಪಸ್ಸಾದ ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಮರಳಿ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಡದ ಕ್ರಮದ ವಿರುದ್ಧ ಭಾರತ ಸಿಡಿದೆದ್ದಿದೆ. ಇದಕ್ಕೆ ಪ್ರತ್ಯುತ್ತರವಾಗಿ ಚೀನಾದ ನಾಗರಿಕರಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಭಾರತ ಅಮಾನತು ಮಾಡಿದೆ. ಚೀನಾದ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಭಾರತ ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ​​(ಐಎಟಿಎ) ತಿಳಿಸಿದೆ.

ಚೀನಾದ ವಿಶ್ವವಿದ್ಯಾಲಯಗಳಲ್ಲಿ ಸುಮಾರು 22 ಸಾವಿರ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಕೊರೊನಾ ಉಲ್ಬಣಗೊಂಡ ಬಳಿಕ ದೇಶಕ್ಕೆ ವಾಪಸ್ಸಾಗಿದ್ದರು. ಇದೀಗ ಚೀನಾಕ್ಕೆ ಮರಳಲು ಆ ದೇಶ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿ ನೆರೆಯ ದೇಶಕ್ಕೆ ಪಾಠ ಕಲಿಸಲು ಭಾರತ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಏಪ್ರಿಲ್ 20 ರಂದು ಭಾರತ ಹೊರಡಿಸಲಾದ ಸುತ್ತೋಲೆಯಲ್ಲಿ ಚೀನಾ ಪ್ರಜೆಗಳಿಗೆ ನೀಡಲಾದ 10 ವರ್ಷಗಳ ಮಾನ್ಯತೆ ಹೊಂದಿರುವ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗುವುದಿಲ್ಲ. ಭೂತಾನ್, ಮಾಲ್ಡೀವ್ಸ್ ಮತ್ತು ನೇಪಾಳದ ಪ್ರಜೆಗಳು ಭಾರತ ನೀಡಿದ ನಿವಾಸ ಪರವಾನಿಗೆ ಹೊಂದಿರುವವರು ಮಾತ್ರ ಭಾರತಕ್ಕೆ ಬರಬಹುದಾಗಿದೆ ಎಂದು ಐಎಟಿಎ ತಿಳಿಸಿದೆ.

ಚೀನಾದ ಕಟ್ಟುನಿಟ್ಟಾದ ನಿರ್ಬಂಧಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನು ಅಪಾಯಕ್ಕೆ ಸಿಲುಕಿರುವುದರಿಂದ ಈ ವಿಷಯದಲ್ಲಿ ಸೌಹಾರ್ದಯುತ ನಿಲುವು ತಳೆಯುವಂತೆ ಆ ದೇಶಕ್ಕೆ ಭಾರತ ಮನವಿ ಮಾಡಿದೆ. ಆದರೆ, ಚೀನಾ ಈ ವಿಷಯದಲ್ಲಿ ರಾಜಿಯಾಗುತ್ತಿಲ್ಲ.

ಇದನ್ನೂ ಓದಿ: ಶಾಲೆಯಲ್ಲೇ ಶಿಕ್ಷಕಿಯೊಂದಿಗೆ ಸಂಭೋಗ ನಡೆಸಿದ ಪ್ರಾಂಶುಪಾಲ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.