ನವದೆಹಲಿ: ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಆಗಸದಲ್ಲಿ ಉಡಾಯಿಸಬಹುದಾದ ಆವೃತ್ತಿಯನ್ನು ಒಡಿಶಾ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಸೂಪರ್‌ಸಾನಿಕ್ ಯುದ್ಧ ವಿಮಾನ ಸುಖೋಯ್ 30 MK-I ಮೂಲಕ ಬುಧವಾರ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಈ ಯುದ್ಧ ವಿಮಾನದಿಂದ ಉಡಾವಣೆಯಾದ ಕ್ಷಿಪಣಿಯು ಯೋಜನೆಯ ಉದ್ದೇಶಗಳನ್ನು ಪೂರೈಸಿದೆ ಎಂದು ರಕ್ಷಣಾ ಸಚಿವಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಕ್ಷಿಪಣಿಯನ್ನು ಯಶಸ್ವಿಯಾಗಿಸಿದ್ದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಭಾರತೀಯ ವಾಯುಪಡೆಯನ್ನು ಶ್ಲಾಘಿಸಿದ್ದಾರೆ.
-
Air version of BrahMos supersonic cruise missile successfully test-fired from Sukhoi 30 MK-I https://t.co/ZhDVGdgGuJ pic.twitter.com/LFrhOICs0B
— DRDO (@DRDO_India) December 8, 2021 " class="align-text-top noRightClick twitterSection" data="
">Air version of BrahMos supersonic cruise missile successfully test-fired from Sukhoi 30 MK-I https://t.co/ZhDVGdgGuJ pic.twitter.com/LFrhOICs0B
— DRDO (@DRDO_India) December 8, 2021Air version of BrahMos supersonic cruise missile successfully test-fired from Sukhoi 30 MK-I https://t.co/ZhDVGdgGuJ pic.twitter.com/LFrhOICs0B
— DRDO (@DRDO_India) December 8, 2021
ರಕ್ಷಣಾ ಸಚಿವಾಲಯದ ಪ್ರಕಾರ, ಈ ಪರೀಕ್ಷೆಯು ಬ್ರಹ್ಮೋಸ್ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲು. ಈ ಕ್ಷಿಪಣಿ ಪರೀಕ್ಷೆಯ ಯಶಸ್ಸಿನಿಂದಾಗಿ ದೇಶದಲ್ಲಿ ಆಕಾಶದಲ್ಲಿ ಉಡಾಯಿಸಬಹುದಾದ ಬ್ರಹ್ಮೋಸ್ ಕ್ಷಿಪಣಿಗಳ ಉತ್ಪಾದನೆ ಮಾಡಿ, ರಫ್ತು ಮಾಡಬಹುದಾಗಿದೆ. ಇದರ ಜೊತೆಗೆ, ದೇಶದ ರಕ್ಷಣೆಯಲ್ಲೂ ಇದು ಪ್ರಮುಖ ಪಾತ್ರ ವಹಿಸಲಿದೆ.
ಈ ಕ್ಷಿಪಣಿಗೆ ರ್ಯಾಮ್ಜೆಟ್ ಅಳವಡಿಕೆ ಮಾಡಲಾಗಿದ್ದು, ಇದಕ್ಕೆ ಬಳಸಲಾಗುವ ಏರ್‌ಫ್ರೇಮ್ ಅಸೆಂಬ್ಲಿಗಳನ್ನು ಭಾರತೀಯ ಕೈಗಾರಿಕೆಗಳಿಂದಲೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಮೇಕ್ ಇನ್ ಇಂಡಿಯಾಗೂ ಉತ್ತೇಜನ ದೊರಕಿದಂತಾಗುತ್ತದೆ.
ಇನ್ನು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದ್ದು, ಅಭಿವೃದ್ಧಿ, ಉತ್ಪಾದನೆ ಮಾಡಿ, ರಕ್ಷಣೆಗೆ ಬಳಸಿಕೊಳ್ಳುವುದು ಮಾತ್ರವಲ್ಲದೇ ವಿವಿಧ ದೇಶಗಳಿಗೆ ರಫ್ತು ಮಾಡಿ ಜಾಗತಿಕ ರಕ್ಷಣಾ ವ್ಯಾಪಾರದಲ್ಲೂ ಭಾರತ ಮುಂಚೂಣಿ ಸಾಧಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: CDS Bipin Rawat: ತವರು ರಾಜ್ಯದಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿಯ ಕನಸು ಕಂಡಿದ್ದರು ಬಿಪಿನ್ ರಾವತ್