ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಭಾರತದ ನೆರವು ಮುಂದುವರೆದಿದೆ. ತಮಿಳರ ಪ್ರಾಬಲ್ಯದ ಜಾಫ್ನಾದಲ್ಲಿರುವ 700 ಮೀನುಗಾರರು ಮತ್ತು ವಿದ್ಯುತ್ ಚಾಲಿತ ದೋಣಿಗಳಿಗೆ ಅನುಕೂಲವಾಗುವಂತೆ ಶನಿವಾರ 15 ಸಾವಿರ ಲೀಟರ್ ಸೀಮೆಎಣ್ಣೆಯನ್ನು ರವಾನಿಸಲಾಗಿದೆ.
ಕಳೆದ ತಿಂಗಳು 500 ಮಿಲಿಯನ್ ಡಾಲರ್ ಅನ್ನು ಭಾರತ ಸಾಲದ ರೂಪದಲ್ಲಿ ಹೆಚ್ಚುವರಿಯಾಗಿ ನೀಡಿತ್ತು. ಅಲ್ಲದೇ, ಕಳೆದ ತಿಂಗಳು 7 ಲಕ್ಷ ಡಾಲರ್ನಷ್ಟು ವೈದ್ಯಕೀಯ ಸಾಮಗ್ರಿ ಪೂರೈಕೆ ಮಾಡಿತ್ತು. ತಲಾ 40 ಸಾವಿರ ಮೆಟ್ರಿಕ್ ಟನ್ನಷ್ಟು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಈಗಾಗಲೇ ಭಾರತ ಸರಬರಾಜು ಮಾಡಿದೆ.
ಇದೀಗ ದ್ವೀಪ ರಾಷ್ಟ್ರದ ಡೆಲ್ಫ್ಟ್, ನೈನಾತೀವು, ಎಲುವೈತಿವು ಮತ್ತು ಅನಾಲಿತೀವು ಪ್ರದೇಶದಲ್ಲಿರುವ ಮೀನುಗಾರರಿಗಾಗಿ 15 ಸಾವಿರ ಲೀಟರ್ ಸೀಮೆಎಣ್ಣೆಯನ್ನು ನೆರವಿನ ರೂಪದಲ್ಲಿ ಭಾರತ ಪೂರೈಸಿದೆ. ವಿದ್ಯುತ್ ಚಾಲಿತ ದೋಣಿಗಳಿಗೂ ಇದು ಅನುಕೂಲವಾಗಲಿದೆ ಎಂದು ಜಾಫ್ನಾದಲ್ಲಿರುವ ಭಾರತದ ಕಾನ್ಸುಲೆಟ್ ಜನರಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳದ ವಿಮಾನ ನಾಪತ್ತೆ