ನವದೆಹಲಿ: ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಖುಷಿಪಡುತ್ತಿರುವಾಗಲೇ ಹೊಸ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟದ ಏರಿಕೆ ಕಂಡುಬಂದಿದೆ. ದೇಶದಲ್ಲಿ 62,224 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ 60,471 ಸೋಂಕಿತರು ಪತ್ತೆಯಾಗಿದ್ದು ವರದಿಯಾಗಿತ್ತು.
ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 2,96,33,105 ಕೋವಿಡ್ ಕೇಸ್ಗಳು ಪತ್ತೆಯಾಗಿವೆ. ಮೃತರ ಸಂಖ್ಯೆ 3,79,573ಕ್ಕೆ ಹೆಚ್ಚಳವಾಗಿದೆ. 2.96 ಕೋಟಿ ಸೋಂಕಿತರಲ್ಲಿ 2,83,88,100 ಮಂದಿ ವೈರಸ್ನಿಂದ ಚೇತರಿಸಿಕೊಂಡಿದ್ದು 8,65,432 ಕೇಸ್ಗಳು ಸಕ್ರಿಯವಾಗಿವೆ.
ಚೇತರಿಕೆ ಪ್ರಮಾಣದಲ್ಲಿ ಏರಿಕೆ
ಕೋವಿಡ್ನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ 95.80ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ಪ್ರಮಾಣ ಶೇಕಡಾ 5ಕ್ಕಿಂತ ಕಡಿಮೆಯಿದ್ದು, ಪ್ರಸ್ತುತ ಶೇ 4.17ರಷ್ಟಿದೆ. ದೈನಂದಿನ ಪಾಸಿಟಿವಿಟ ಪ್ರಮಾಣ ಶೇ 3.22ರಷ್ಟಿದೆ. ಕಳೆದ 9 ದಿನಗಳಿಂದ ಶೇಕಡಾ 5ರಷ್ಟರಲ್ಲೇ ಪಾಸಿಟಿವಿಟಿ ಪ್ರಮಾಣ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಇದನ್ನೂ ಓದಿ: ಡಿಜಿಪಿ ಹೆಸರಲ್ಲೇ ವಂಚನೆಗೆ ಹುನ್ನಾರ: ಇನ್ನು ಜನಸಾಮಾನ್ಯರ ಪಾಡೇನು?
26 ಕೋಟಿ ಮಂದಿಗೆ ವ್ಯಾಕ್ಸಿನ್
ಜನವರಿ 16ರಿಂದ ಈವರೆಗೆ ದೇಶಾದ್ಯಂತ ಕೊರೊನಾ ಲಸಿಕೆಯ 26,19,72,014 ಡೋಸ್ಗಳನ್ನು ಜನರಿಗೆ ನೀಡಲಾಗಿದೆ. ಕಳೆದ 24 ಗಂಟೆಯಲ್ಲಿ 28,00,458 ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ.