ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,579 ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 543 ದಿನಗಳ ಬಳಿಕ ಇಷ್ಟು ಕಡಿಮೆ ಕೇಸ್ಗಳು ವರದಿಯಾಗಿವೆ (India reports lowest covid cases in 543 days). ಹೊಸ ಕೇಸ್ಗಳ ಸಂಖ್ಯೆಯಲ್ಲೇನೋ ಇಳಿಕೆ ಕಾಣುತ್ತಿದೆ. ಆದರೆ, ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂಬುದೇ ಇಲ್ಲಿ ಆತಂಕಕಾರಿ ವಿಚಾರವಾಗಿದೆ.
ಸೋಮವಾರ ಒಂದೇ ದಿನ 236 ಜನರು ಸೋಂಕಿಗೆ ಬಲಿಯಾಗಿದ್ದು, ಕೋವಿಡ್ ಮೃತರ ಸಂಖ್ಯೆ 4,66,147 (India Covid Death Toll) ಹೆಚ್ಚಳವಾಗಿದೆ. ಇಲ್ಲಿಯವರೆಗೆ ಒಟ್ಟು 3,45,26,480 ಜನರಿಗೆ ವೈರಸ್ ಅಂಟಿದೆ (India Corona Cases). ಇವರಲ್ಲಿ 3,39,46,749 ಮಂದಿ ಸೋಂಕಿತರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.98.32ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.
ಇದನ್ನೂ ಓದಿ: ಅತೀ ವೇಗ ತಂದ ಆಪತ್ತು: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು
536 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ ಪ್ರಮಾಣ ಶೇ.0.33ಕ್ಕೆ ಇಳಿಕೆಯಾಗಿದ್ದು, ಪ್ರಸ್ತುತ 1,13,584 ಪ್ರಕರಣಗಳು ಸಕ್ರಿಯವಾಗಿವೆ. ನಿನ್ನೆ ಪತ್ತೆಯಾದ 7,579 ಕೋವಿಡ್ ಸೋಂಕಿತರು ಮತ್ತು 236 ಮಂದಿ ಸಾವಿನ ಪೈಕಿ ಕೇರಳ ರಾಜ್ಯವೊಂದರಲ್ಲೇ 3,698 ಪ್ರಕರಣಗಳು ಹಾಗೂ 75 ಸಾವು ವರದಿಯಾಗಿದೆ.
ದಾಖಲೆಯ 117 ಕೋಟಿ ಡೋಸ್ ವ್ಯಾಕ್ಸಿನೇಷನ್ (India covid vaccination)
ಜನವರಿ 16 ರಿಂದ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 116.87 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ನಿನ್ನೆ ಒಂದೇ ದಿನ 63 ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.