ನವದೆಹಲಿ: 2020ರ ಜನವರಿ 31 ರಂದು ಭಾರತದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾಗಿದ್ದು, ಅಂದಿನಿಂದ ಇಂದಿನವರೆಗೆ ಮೂರು ಕೋಟಿಗೂ ಅಧಿಕ ಜನರಿಗೆ (3,00,82,778) ವೈರಸ್ ಅಂಟಿದೆ. ಆದರೆ ದೇಶದಲ್ಲಿ ಕೊರೊನಾ ಎರಡನೇ ಉಲ್ಬಣವಾದ ಬಳಿಕ ಕಳೆದ 50 ದಿನಗಳಲ್ಲಿ ಒಂದು ಕೋಟಿ ಜನರು ಸೋಂಕಿಗೆ ಒಳಗಾಗಿದ್ದಾರೆ.
-
#LargestVaccineDrive #Unite2FightCorona pic.twitter.com/jexrEL47x6
— Ministry of Health (@MoHFW_INDIA) June 23, 2021 " class="align-text-top noRightClick twitterSection" data="
">#LargestVaccineDrive #Unite2FightCorona pic.twitter.com/jexrEL47x6
— Ministry of Health (@MoHFW_INDIA) June 23, 2021#LargestVaccineDrive #Unite2FightCorona pic.twitter.com/jexrEL47x6
— Ministry of Health (@MoHFW_INDIA) June 23, 2021
ಆದರೆ 3 ಕೋಟಿ ಸೋಂಕಿತರ ಪೈಕಿ 2,90,63,740 ಮಂದಿ ಕೋವಿಡ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಉಳಿದಂತೆ 6,27,057 ಕೇಸ್ಗಳೂ ಸಕ್ರಿಯವಾಗಿವೆ. ಬುಧವಾರ ಒಂದೇ ದಿನ 54,069 ಪ್ರಕರಣಗಳು ವರದಿಯಾಗಿದ್ದು, 1,321 ಜನರು ಸೋಂಕಿಗೆ ಬಲಿಯಾಗಿದ್ದಾರೆ ಹಾಗೂ 24 ಗಂಟೆಗಳಲ್ಲಿ 68,885 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ದೇಶದಲ್ಲೀಗ ಕೊರೊನಾ ಮೃತರ ಸಂಖ್ಯೆ 3,91,981ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
30 ಕೋಟಿ ಡೋಸ್ ವ್ಯಾಕ್ಸಿನೇಷನ್
ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನದಡಿ ದೇಶಾದ್ಯಂತ ಈವರೆಗೆ ಲಸಿಕೆಯ 30,16,26,028 ಡೋಸ್ಗಳನ್ನು ನೀಡಲಾಗಿದೆ. ಈ ಪೈಕಿ 24.76 ಕೋಟಿಗೂ ಅಧಿಕ ಮಂದಿ ಮೊದಲ ಡೋಸ್ ಹಾಗೂ 5.33 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್ಗಳನ್ನು ಪಡೆದಿದ್ದಾರೆ.