ನವದೆಹಲಿ: ಕಳೆದ 43 ದಿನಗಳಿಂದ ಭಾರತದಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಸೋಂಕಿತರಿಗಿಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರುತ್ತಿರುವವರ ಸಂಖ್ಯೆಯೇ ಹೆಚ್ಚಿದ್ದು, ಚೇತರಿಕೆ ಪ್ರಮಾಣ ಶೇ. 96.66ಕ್ಕೆ ಹೆಚ್ಚಳವಾಗಿದೆ. ನಿನ್ನೆ ಒಂದೇ ದಿನ 51,667 ಕೇಸ್ಗಳು ವರದಿಯಾಗಿದ್ದು, 64,527 ರೋಗಿಗಳು ಗುಣಮುಖರಾಗಿದ್ದಾರೆ.
-
#LargestVaccineDrive #Unite2FightCorona pic.twitter.com/XLhyFSzjHZ
— Ministry of Health (@MoHFW_INDIA) June 24, 2021 " class="align-text-top noRightClick twitterSection" data="
">#LargestVaccineDrive #Unite2FightCorona pic.twitter.com/XLhyFSzjHZ
— Ministry of Health (@MoHFW_INDIA) June 24, 2021#LargestVaccineDrive #Unite2FightCorona pic.twitter.com/XLhyFSzjHZ
— Ministry of Health (@MoHFW_INDIA) June 24, 2021
ಕಳೆದ 24 ಗಂಟೆಗಳ ಅವಧಿಯಲ್ಲಿ 1,329 ಜನರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲೀಗ ಒಟ್ಟು ಸೋಂಕಿತರ ಸಂಖ್ಯೆ 3,01,34,445 ಹಾಗೂ ಮೃತರ ಸಂಖ್ಯೆ 3,93,310ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 2,91,28,267 ಮಂದಿ ವೈರಸ್ನಿಂದ ಚೇತರಿಸಿಕೊಂಡಿದ್ದು, ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 6,12,868ಕ್ಕೆ ಇಳಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
30.79 ಕೋಟಿ ಡೋಸ್ ವ್ಯಾಕ್ಸಿನೇಷನ್
ದೇಶಾದ್ಯಂತ ಈವರೆಗೆ ಕೊರೊನಾ ಲಸಿಕೆಯ 30,79,48,744 ಡೋಸ್ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ ಸುಮಾರು 25.30 ಕೋಟಿ ಜನರು ಮೊದಲ ಡೋಸ್ ಮಾತ್ರ ಪಡೆದಿದ್ದಾರೆ. 5.41 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್ಗಳನ್ನು ಹಾಕಿಸಿಕೊಂಡಿದ್ದಾರೆ. ದೇಶದ ವ್ಯಾಕ್ಸಿನೇಷನ್ ನೀತಿ ಕುರಿತು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದ 72 ಗಂಟೆಗಳಲ್ಲೇ ಎರಡು ಕೋಟಿ ಜನರು ವ್ಯಾಕ್ಸಿನ್ ಪಡೆದಿದ್ದಾರೆ.