ETV Bharat / bharat

ದೇಶದಲ್ಲಿ ಒಂದೇ ದಿನ 4 ಸಾವಿರ ಮಂದಿ ಕೋವಿಡ್​ಗೆ ಬಲಿ.. 4 ಲಕ್ಷ ಸೋಂಕಿತರು ಪತ್ತೆ - ಕೊರೊನಾ ಲಸಿಕೆ

India covid
ದೇಶದಲ್ಲಿ ಕೊರೊನಾ ಅಟ್ಟಹಾಸ
author img

By

Published : May 8, 2021, 9:34 AM IST

Updated : May 8, 2021, 9:54 AM IST

09:32 May 08

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,01,078 ಹೊಸ ಸೋಂಕಿತರು ಪತ್ತೆಯಾಗಿದ್ದು, 4,187 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ನವದೆಹಲಿ: ಇದೇ ಮೊದಲ ಬಾರಿಗೆ ದೇಶದಲ್ಲಿ ದಿನವೊಂದರಲ್ಲಿ ವರದಿಯಾದ ಕೋವಿಡ್​ ಮೃತರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 4,01,078 ಹೊಸ ಸೋಂಕಿತರು ಪತ್ತೆಯಾಗಿದ್ದು, 4,187 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ವಿಶ್ವದ ಯಾವ ರಾಷ್ಟ್ರಗಳಲ್ಲಿಯೂ ಕೂಡ ಒಂದೇ ದಿನದಲ್ಲಿ ಇಷ್ಟೊಂದು ಸಾವು-ನೋವು ದಾಖಲಾಗಿರಲಿಲ್ಲ.  

ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ  2,18,92,676 ಹಾಗೂ ಸಾವಿನ ಸಂಖ್ಯೆ 2,38,270ಕ್ಕೆ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ 1 ಲಕ್ಷಕ್ಕೆ ಇಳಿಕೆಯಾಗಿದ್ದ ದೇಶದ ಕೊರೊನಾ ಸಕ್ರಿಯ ಪ್ರಕರಣಗಳು ಇದೀಗ 37,23,446ಕ್ಕೆ ಜಿಗಿದಿದೆ.  

ಶುಕ್ರವಾರ ಒಂದೇ ದಿನ 3,18,609 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದು, ಇಲ್ಲಿಯವರೆಗೆ 1,79,30,960 ಸೋಂಕಿತರು ವೈರಸ್​​ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

16.73 ಮಂದಿಗೆ ಲಸಿಕೆ

ಒಂದೆಡೆ ದೇಶದಲ್ಲಿ ಕೋವಿಡ್​ ಉಲ್ಬಣಿಸುತ್ತಲೇ ಇದ್ದು, ಇತ್ತ ಲಸಿಕೆಗಳು ಖಾಲಿಯಾಗುತ್ತಿವೆ. ಆರಂಭದಲ್ಲಿ ವೇಗವಾಗಿ ದಾಖಲೆಯ ಮಟ್ಟದಲ್ಲಿ ಲಸಿಕಾಭಿಯಾನ ನಡೆಯುತ್ತಿತ್ತು. ಆದರೆ ಈಗ ಲಸಿಕೆಯ ಅಭಾವದಿಂದಾಗಿ ವ್ಯಾಕ್ಸಿನೇಷನ್​​ ಪ್ರಮಾಣವೂ ಕಡಿಮೆಯಾಗಿದೆ. ಜನವರಿ 16 ರಿಂದ ಇಲ್ಲಿಯವರೆಗೆ ಒಟ್ಟು 16,73,46,544 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ. 

Last Updated : May 8, 2021, 9:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.