ನವದೆಹಲಿ: ಪ್ರತಿನಿತ್ಯ ಭಾರತದಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದು, ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಒಂದೇ ದಿನದಲ್ಲಿ 3,86,452 ಪ್ರಕರಣಗಳು ವರದಿಯಾಗಿದ್ದು, 3,498 ಮಂದಿ ಮಾರಕ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ದೇಶದಲ್ಲಿ ಸೋಂಕಿತರ ಸಂಖ್ಯೆ 1,87,62,976, ಮೃತರ ಸಂಖ್ಯೆ 2,08,330ಕ್ಕೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 31,70,228ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಒಂದೇ ದಿನ 3 ಲಕ್ಷ ಸನಿಹ ಸೋಂಕಿತರು ಗುಣಮುಖ
ಇನ್ನು 24 ಗಂಟೆಗಳಲ್ಲಿ ಮೂರು ಲಕ್ಷ ಸನಿಹ ಸೋಂಕಿತರು (2,97,540) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 1,53,84,418 ಮಂದಿ ವೈರಸ್ನಿಂದ ಚೇತರಿಸಿಕೊಂಡಿದ್ದಾರೆ.
15.22 ಕೋಟಿ ಮಂದಿಗೆ ವ್ಯಾಕ್ಸಿನ್
ದೇಶಾದ್ಯಂತ ಕೊರೊನಾ ಲಸಿಕಾಭಿಯಾನದಡಿ ಜನವರಿ 16ರಿಂದ ಈವರೆಗೆ 15,22,45,179 ಮಂದಿಗೆ ಲಸಿಕೆ ಹಾಕಲಾಗಿದೆ. ನಾಳೆಯಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಲಸಿಕೆ ನೀಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.