ETV Bharat / bharat

ಭಾರತದಲ್ಲಿ ಕೋವಿಡ್​ ರಣಕೇಕೆ: ಒಂದೇ ದಿನ 3.79 ಲಕ್ಷ ಕೇಸ್​ ಪತ್ತೆ, 3,645 ಜನರು ಬಲಿ

author img

By

Published : Apr 29, 2021, 9:42 AM IST

Updated : Apr 29, 2021, 10:20 AM IST

Total number of corona cases, deaths, Vaccination in India
ಭಾರತದಲ್ಲಿ ಕೋವಿಡ್​ ರಣಕೇಕೆ

09:38 April 29

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,79,257 ಹೊಸ ಕೋವಿಡ್​ ಕೇಸ್​ಗಳು ವರದಿಯಾಗಿದ್ದು, 3,645 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.

ನವದೆಹಲಿ: ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಲಖನೌನಂತಹ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಉಲ್ಬಣಗೊಂಡಿದ್ದ ಕೊರೊನಾ ಎರಡನೇ ಅಲೆಯ ಪ್ರಭಾವ ಇದೀಗ ಪ್ರತಿ ಸಣ್ಣ ಪಟ್ಟಣಗಳು, ಹಳ್ಳಿಗಳ ಮೇಲೂ ಬೀರಿದೆ. ಆರಂಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅನೇಕ ಸೋಂಕಿತರು ಮೃತಪಡುತ್ತಿದ್ದರು. ಆದರೀಗ ಲಕ್ಷ ಲಕ್ಷ ಕೇಸ್​ಗಳು ಪ್ರತಿನಿತ್ಯ ಪತ್ತೆಯಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್​ ಸಿಗದೇ ತಮ್ಮ ಕುಟುಂಬಸ್ಥರು, ಪ್ರೀತಿಪಾತ್ರರ ಮುಂದೆಯೇ ಅಸುನೀಗುತ್ತಿದ್ದಾರೆ.  

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,79,257 ಹೊಸ ಕೋವಿಡ್​ ಕೇಸ್​ಗಳು ವರದಿಯಾಗಿವೆ. 3,645 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೀಗ ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ ಈಗಾಗಲೇ ಎರಡು ಲಕ್ಷ (2,04,832) ಗಡಿ ದಾಟಿದೆ.

ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 30 ಲಕ್ಷಕ್ಕೆ ಹೆಚ್ಚಳ

ಅತೀ ವೇಗವಾಗಿ ದಾಖಲೆಯ ಸಂಖ್ಯೆಯಲ್ಲಿ ಜನರಿಗೆ ವೈರಸ್​ ಅಂಟುತ್ತಿರುವ ಕಾರಣ ಕಳೆದ ತಿಂಗಳು 1 ಲಕ್ಷಕ್ಕೆ ಇಳಿದಿದ್ದ ಕೊರೊನಾ ಸಕ್ರಿಯ ಪ್ರಕರಣಗಳು ಇದೀಗ 30,84,814ಕ್ಕೆ ಹೆಚ್ಚಳವಾಗಿದೆ.  

ಒಂದೂವರೆ ಕೋಟಿ ಸೋಂಕಿತರು ಗುಣಮುಖ

ಇನ್ನು ದಿನವೊಂದರಲ್ಲಿ ಅತೀ ಹೆಚ್ಚು ಸೋಂಕಿತರು ಗುಣಮುಖರಾಗುತ್ತಿದ್ದು, ಗುರುವಾರ ಒಂದೇ ದಿನ 2,69,507 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇಲ್ಲಿಯವರೆಗೆ ಒಟ್ಟು ಒಂದೂವರೆ ಕೋಟಿ (1,50,86,878) ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. 

15 ಕೋಟಿ ಮಂದಿಗೆ ಲಸಿಕೆ

ಜನವರಿ 16ರಿಂದ ಭಾರತದಲ್ಲಿ ಕೊರೊನಾ ಲಸಿಕಾಭಿಯಾನ ಪ್ರಾರಂಭವಾಗಿದ್ದು, ಈವರೆಗೆ 15,00,20,648 ಮಂದಿ ವ್ಯಾಕ್ಸಿನ್​ ಹಾಕಿಸಿಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಮೇ 1ರಿಂದ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. 

Last Updated : Apr 29, 2021, 10:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.