ನವದೆಹಲಿ: ಕಳೆದೆರಡು ದಿನಗಳಿಂದ ಹೊಸದಾಗಿ ನಾಲ್ಕು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣ ಹಾಗೂ ನಾಲ್ಕು ಸಾವಿರಕ್ಕೂ ಅಧಿಕ ಸಾವು ದಾಖಲಾಗಿದ್ದ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಕೇಸ್ ಮತ್ತು 3,754 ಸಾವು ವರದಿಯಾಗಿದೆ.
ದೇಶದಲ್ಲೀಗ ಸೋಂಕಿತರ ಸಂಖ್ಯೆ 2,26,62,575 ಹಾಗೂ ಮೃತರ ಸಂಖ್ಯೆ 2,46,116ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 3,53,818 ಮಂದಿ ಗುಣಮುಖರಾಗಿದ್ದು, ಈವರೆಗ ಒಟ್ಟು 1,86,71,222 ಸೋಂಕಿತರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 37,45,237ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಗುಡ್ ನ್ಯೂಸ್: ಮೂರು ವಾರಗಳ ಬಳಿಕ ದೆಹಲಿಯ ಕೋವಿಡ್ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆ
17 ಕೋಟಿ ಮಂದಿಗೆ ವ್ಯಾಕ್ಸಿನ್
ಜನವರಿ 16ರಿಂದ ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 17,01,76,603 ಮಂದಿಗೆ ಲಸಿಕೆ ನೀಡಲಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರೂ, ಲಸಿಕೆಗ ಅಭಾವದಿಂದಾಗಿ ಅನೇಕ ರಾಜ್ಯಗಳಲ್ಲಿ 18 ರಿಂದ 44 ವರ್ಷದ ವಯಸ್ಕರಿಗೆ ವ್ಯಾಕ್ಸಿನೇಷನ್ ಆರಂಭಿಸಿಲ್ಲ.