ETV Bharat / bharat

187 ದಿನಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ Covid ಸಕ್ರಿಯ ಪ್ರಕರಣ ದಾಖಲು - ಕೊರೊನಾ ಅಪ್​ಡೇಟ್

ಭಾರತದಲ್ಲಿ ಕಳೆದ 187 ದಿನಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಕೋವಿಡ್​ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Covid Active Cases
Covid Active Cases
author img

By

Published : Sep 23, 2021, 10:24 AM IST

ನವದೆಹಲಿ: ಭಾರತದಲ್ಲಿ ಹೊಸದಾಗಿ 31,923 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 3.35 ಕೋಟಿಗೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 31,990 ಮಂದಿ ಗುಣಮುಖರಾಗಿದ್ದು, ಈವರೆಗೆ 3,28,15,731 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಸದ್ಯ ದೇಶದಲ್ಲಿ 3,01,604 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಕಳೆದ 187 ದಿನಗಳಿಂದ ಇದೇ ಮೊದಲ ಬಾರಿಗೆ ಕೋವಿಡ್​ ಆ್ಯಕ್ಟಿವ್​ ಕೇಸ್​ಗಳು ಇಳಿಕೆಯಾಗಿವೆ. ನಿನ್ನೆ 282 ಮಂದಿ ವೈರಸ್​ಗೆ ಬಲಿಯಾಗಿದ್ದು, ಒಟ್ಟಾರೆ 4,46,050 ಮಂದಿ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್​​ 22 ರಂದು 71,38,205 ವ್ಯಾಕ್ಸಿನ್ ಡೋಸ್​ಗಳನ್ನು ಹಾಕಲಾಗಿದ್ದು, ಈವರೆಗೆ 83,39,90,049 ಲಸಿಕಾ ಡೋಸ್​ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕೋವಿಡ್​ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ : ಸುಪ್ರೀಂಕೋರ್ಟ್​ಗೆ ಕೇಂದ್ರದ ಮಾಹಿತಿ

ಕಳೆದ 24 ಗಂಟೆಗಳಲ್ಲಿ 15,27,443 ಸ್ಯಾಂಪಲ್​ಗಳನ್ನು ಟೆಸ್ಟ್ ಮಾಡಲಾಗಿದ್ದು, ನಿನ್ನೆವರೆಗೆ 55,83,67,013 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.