ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,841 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,31,16,254ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಇದು ಗುರುವಾರ ದಾಖಲಾದ ಪ್ರಕರಣಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.
-
India logs 2,841 new COVID-19 cases
— ANI Digital (@ani_digital) May 13, 2022 " class="align-text-top noRightClick twitterSection" data="
Read @ANI Story | https://t.co/Jt0ar4KAok#Covid_19 #COVID pic.twitter.com/1Uf0jLvUfm
">India logs 2,841 new COVID-19 cases
— ANI Digital (@ani_digital) May 13, 2022
Read @ANI Story | https://t.co/Jt0ar4KAok#Covid_19 #COVID pic.twitter.com/1Uf0jLvUfmIndia logs 2,841 new COVID-19 cases
— ANI Digital (@ani_digital) May 13, 2022
Read @ANI Story | https://t.co/Jt0ar4KAok#Covid_19 #COVID pic.twitter.com/1Uf0jLvUfm
ದೇಶದಾದ್ಯಂತ ನಿನ್ನೆ(ಗುರುವಾರ) 9 ಮಂದಿ ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 5,24,190 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣ ಶೇ. 1.22 ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.58ರಷ್ಟಿದ್ದು, ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 0.69 ರಷ್ಟಿದೆ. ಚೇತರಿಕೆಯ ಪ್ರಮಾಣ ಶೇ.98.74. ಸದ್ಯ ದೇಶದಲ್ಲಿ 18,604 ಸಕ್ರಿಯ ಪ್ರಕರಣಗಳಿವೆ. ಕಳೆದೊಂದು ದಿನದಲ್ಲಿ 3,295 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 4,25,73,460 ಮಂದಿ ಗುಣಮುಖರಾಗಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಕಳೆದ 24 ಗಂಟೆಗಳಲ್ಲಿ 4,86,628 ಮಾದರಿಗಳನ್ನು ಕೋವಿಡ್-19ಗಾಗಿ ಪರೀಕ್ಷಿಸಲಾಗಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದೇಶಾದ್ಯಂತ ಒಟ್ಟು 84,29,44,795 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಷ್ಟ್ರವ್ಯಾಪಿ ಕೋವಿಡ್ 19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ 190.99 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಉ.ಕೊರಿಯಾದಲ್ಲಿ ಮೊದಲ ಒಮಿಕ್ರಾನ್ ಸೋಂಕು ಪತ್ತೆ: 6 ಮಂದಿ ಸಾವು