ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಯಲ್ಲಿ 2,58,089 ಸೋಂಕಿತರು ಪತ್ತೆಯಾಗಿದ್ದು, ಸುಮಾರು ನಿನ್ನೆ ಪ್ರಕರಣಗಳಿಂದ 13 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಮಾಹಿತಿ ನೀಡಿದೆ.
-
India reports 2,58,089 COVID cases (13,113 less than yesterday), 385 deaths, and 1,51,740 recoveries in the last 24 hours.
— ANI (@ANI) January 17, 2022 " class="align-text-top noRightClick twitterSection" data="
Active case: 16,56,341
Daily positivity rate: 119.65%
Confirmed cases of Omicron: 8,209 pic.twitter.com/Fi345RsMuw
">India reports 2,58,089 COVID cases (13,113 less than yesterday), 385 deaths, and 1,51,740 recoveries in the last 24 hours.
— ANI (@ANI) January 17, 2022
Active case: 16,56,341
Daily positivity rate: 119.65%
Confirmed cases of Omicron: 8,209 pic.twitter.com/Fi345RsMuwIndia reports 2,58,089 COVID cases (13,113 less than yesterday), 385 deaths, and 1,51,740 recoveries in the last 24 hours.
— ANI (@ANI) January 17, 2022
Active case: 16,56,341
Daily positivity rate: 119.65%
Confirmed cases of Omicron: 8,209 pic.twitter.com/Fi345RsMuw
ಒಂದು ದಿನದಲ್ಲಿ 1,51,740 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆಯೂ ಗಣನೀಯವಾಗಿ (352,37,461) ಹೆಚ್ಚಾಗಿರುವುದು ಸಂತಸದ ಸಂಗತಿಯಾಗಿದೆ. ದೇಶದಲ್ಲಿ ಒಟ್ಟು 16,56,341 ಸಕ್ರಿಯ ಪ್ರಕರಣಗಳು ಇವೆ. ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 119.65ರಷ್ಟಿದೆ.
ಕಳೆದ 24 ಗಂಟೆಯಲ್ಲಿ 385 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಸುಮಾರು 4,86,451 ಮಂದಿ ಮೃತಪಟ್ಟಿದ್ದಾರೆ. ಇನ್ನು 8,209 ಒಮಿಕ್ರಾನ್ ಕೇಸ್ಗಳು ದೃಢಪಟ್ಟಿವೆ. ಒಟ್ಟು ಇಲ್ಲಿಯವರೆಗೆ 158.12 ಕೋಟಿಗಳ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದಲ್ಲಿ ಒಟ್ಟು ಒಮಿಕ್ರಾನ್ ಸಂಖ್ಯೆ: 8,209
ಒಮಿಕ್ರಾನ್ನಿಂದ ಗುಣಮುಖರಾಗಿ ಬಿಡುಗಡೆಗೊಂಡವರು: 3,109
ಮಹಾರಾಷ್ಟ್ರ - 1738
ಪಶ್ಚಿಮ ಬಂಗಾಳ - 1672
ರಾಜಸ್ಥಾನ - 1276
ದೆಹಲಿ - 549
ಕರ್ನಾಟಕ - 548