ನವದೆಹಲಿ: ಕಳೆದ 24 ಗಂಟೆಯಲ್ಲಿ 2,34,692 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 1,341 ಸೋಂಕಿನಿಂದ ಮಂದಿ ಸಾವನ್ನಪ್ಪಿದ್ದಾರೆ. 1,23,354 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈವರೆಗಿನ ಅಂಕಿಅಂಶ:
ದೇಶದಲ್ಲಿ ಈವರೆಗೆ ಒಟ್ಟು 1,45,26,609 ಕೊರೊನಾ ಪ್ರಕರಣಗಳು ದಾಖಲಾಗಿವೆ. 1,26,71,220 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ ಸುಮಾರು 1,75,649 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 16,79,740 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಇದನ್ನೂ ಓದಿ: ಕೋವಿಡ್ ಸಾವು : ವಾಸ್ತವ ಪ್ರಕರಣ ಮತ್ತು ಸರ್ಕಾರದ ಅಂಕಿ ಅಂಶದಲ್ಲಿ ಭಾರಿ ವ್ಯತ್ಯಾಸ!
ಕೋವಿಡ್ ಪರೀಕ್ಷೆ:
ಏಪ್ರಿಲ್ 16 ರ ವರೆಗೆ 26,49,72,022 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 14,95,397 ಸ್ಯಾಂಪಲ್ಸ್ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ICMR ತಿಳಿಸಿದೆ.
ಲಸಿಕೆ ವಿತರಣೆ:
ದೇಶಾದ್ಯಂತ ಇಲ್ಲಿಯವರೆಗೆ 11,99,37,641 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 2,714,132 ಪ್ರಮಾಣದ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಏಳು ವಾರಗಳಿಂದ ಕೊರೊನಾ ಅಬ್ಬರ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ