ETV Bharat / bharat

200 ದಿನಗಳ ಬಳಿಕ ದೇಶದಲ್ಲಿ ಶೇ 1ಕ್ಕಿಂತ ಕೆಳಗಿಳಿದ ಕೋವಿಡ್‌ ಸಕ್ರಿಯ ಪ್ರಕರಣ - ದೇಶದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 20,799 ಹೊಸ ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, 180 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 200 ದಿನಗಳ ಬಳಿಕ ಆ್ಯಕ್ಟಿವ್​ ಕೇಸ್​ಗಳ ಪ್ರಮಾಣ ಶೇ.1ರ ಗಡಿಯಿಂದ ಕೆಳಗಿಳಿದಿದೆ.

ಭಾರತದ ಕೋವಿಡ್ ವರದಿ
ಭಾರತದ ಕೋವಿಡ್ ವರದಿ
author img

By

Published : Oct 4, 2021, 10:40 AM IST

ನವದೆಹಲಿ: ಭಾರತದ ಕೋವಿಡ್​ ಸಾವು-ನೋವಿನ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 20,799 ಹೊಸ ಕೋವಿಡ್​ ಕೇಸ್​ಗಳು ಪತ್ತೆಯಾಗಿದೆ. 180 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಇಲ್ಲಿಯವರೆಗೆ 4,48,997 ಮಂದಿ ಮೃತಪಟ್ಟಿದ್ದಾರೆ. ಶೇ.97.89 ರಷ್ಟು ಅಂದರೆ 3,31,21,247 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. 200 ದಿನಗಳ ಬಳಿಕ ಆ್ಯಕ್ಟಿವ್​ ಕೇಸ್​ಗಳ ಪ್ರಮಾಣ ಶೇ.1ರ ಗಡಿಯಿಂದ ಕೆಳಗಿಳಿದಿದೆ. ಇದೀಗ 2,64,458 (ಶೇ.0.78) ಕೇಸ್​ಗಳು ಮಾತ್ರ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಕೋವಿಡ್ ಮಧ್ಯೆ ಕೇರಳದಲ್ಲಿ ಅ.25ರಿಂದ ಚಿತ್ರಮಂದಿರ ಒಪನ್, ನ.1ರಿಂದ ಶಾಲೆ ಆರಂಭ..

90.79 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಜನವರಿ 16ರಿಂದ ದೇಶಾದ್ಯಂತ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ ಒಟ್ಟು 90.79 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 65,77,50,687 ಮಂದಿ ಮೊದಲ ಡೋಸ್​ ಮಾತ್ರ ಪಡೆದಿದ್ದು, 24,65,09,123 ಜನರು ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.