ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕಳೆದೊಂದು ದಿನದಲ್ಲಿ 18,166 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಕಳೆದ ಏಳು ತಿಂಗಳಲ್ಲೇ ಇದು ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ವರದಿಯಾಗಿದೆ.
ದೇಶದಲ್ಲಿ ಕೊರೊನಾ, ಕೊರೊನಾ ಸಂಬಂಧಿ ವಿಚಾರಗಳ ಅಪ್ಡೇಟ್ ಹೀಗಿದೆ:
- ಕಳೆದ 24 ಗಂಟೆಯಲ್ಲಿ 214 ಮಂದಿ ಸಾವನ್ನಪ್ಪಿದ್ದಾರೆ. 23,624 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
- ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4,50,589ಕ್ಕೆ ಏರಿಕೆಯಾಗಿದೆ.
- ಕೊರೊನಾದಿಂದ ಒಟ್ಟು ಗುಣಮುಖರಾದವರು ಸಂಖ್ಯೆ ಶೇಕಡಾ 97.99ರಷ್ಟು ಅಥವಾ 3,32,71,915 ತಲುಪಿದೆ.
- ಒಟ್ಟು ಸಕ್ರಿಯ ಪ್ರಕರಣಗಳು ದೇಶದಲ್ಲಿ ಶೇಕಡಾ 0.68ರಷ್ಟಿದೆ.
- ಸದ್ಯ ದಿನಕ್ಕೆ ಶೇಕಡಾ 1.42ರಷ್ಟು ಮಂದಿ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ.
- ಈವರೆಗೆ ದೇಶದಲ್ಲಿ 94,70,10,175 (94 ಕೋಟಿ) ಮಂದಿಗೆ ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗಿದೆ.
- ಶನಿವಾರದ ಅಂತ್ಯದವರೆಗೆ ದೇಶದಲ್ಲಿ 58,25,95,693 (58 ಕೋಟಿ) ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ
- ಶನಿವಾರ ಒಂದೇ ದಿನ 12,83,212 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ.