ETV Bharat / bharat

ದೇಶದಲ್ಲಿ 18,132 ಹೊಸ ಸೋಂಕಿತರು ಪತ್ತೆ; ಕಳೆದ 7 ತಿಂಗಳಲ್ಲೇ ಗರಿಷ್ಠ ಚೇತರಿಕೆ ಪ್ರಮಾಣ ದಾಖಲು - today covid cases

ದೇಶದಲ್ಲಿ ಮಹಾಮಾರಿ ಕೋವಿಡ್​ ಸೋಂಕಿಗೆ ನಿನ್ನೆ 193 ಮಂದಿ ಸಾವನ್ನಪ್ಪಿದ್ದು, 2,27,347 ಸಕ್ರಿಯ ಪ್ರಕರಣಗಳಿವೆ.

COVID
COVID
author img

By

Published : Oct 11, 2021, 10:33 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 18,132 ಹೊಸ ಕೋವಿಡ್-19 (COVID-19) ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಮಹಾಮಾರಿ ಸೋಂಕಿಗೆ ನಿನ್ನೆ 193 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 4,50,782 ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ 2,27,347 ಸಕ್ರಿಯ ಪ್ರಕರಣಗಳಿವೆ.

ನಿನ್ನೆ 21,563 ಮಂದಿ ಕೋವಿಡ್​ನಿಂದ ಗುಣಮುಖರಾಗಿದ್ದು, ಇದು ಕಳೆದ 7 ತಿಂಗಳಲ್ಲಿ ಒಂದೇ ದಿನ ದಾಖಲಾದ ಗರಿಷ್ಠ ಚೇತರಿಕೆ ಪ್ರಮಾಣವಾಗಿದೆ. ಇನ್ನು, ಈವರೆಗೆ ಒಟ್ಟು 3,32,93,478 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ಚೇತರಿಕೆ ಪ್ರಮಾಣ 97.99% ಇದೆ.

ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಸಹ ಭರದಿಂದ ಸಾಗುತ್ತಿದ್ದು, ಈವರೆಗೆ ಒಟ್ಟು 95,19,84,373 ಮಂದಿ ಲಸಿಕೆ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಕಳೆದ 24 ಗಂಟೆಯಲ್ಲಿ 1,329 ಹೊಸ COVID-19 ಪ್ರಕರಣಗಳು ಪತ್ತೆಯಾಗಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.