ನವದೆಹಲಿ: ಮೊದಲನೇ ಕೊರೊನಾ ಅಲೆಯಲ್ಲಿ ದಿನವೊಂದರಲ್ಲಿ ವರದಿಯಾಗುತ್ತಿದ್ದ ಪ್ರಕರಣಗಳಿಗಿಂತಲೂ ಈಗ ಉಲ್ಬಣಗೊಂಡಿರುವ ಎರಡನೇ ಅಲೆಯಲ್ಲಿ ದುಪ್ಪಟ್ಟು ಕೇಸ್ಗಳು ಪತ್ತೆಯಾಗುತ್ತಿವೆ. ದಿನದಿನಕ್ಕೂ ದಾಖಲೆ ಮಟ್ಟದಲ್ಲಿ ಜನರಿಗೆ ವೈರಸ್ ಅಂಟುತ್ತಿದೆ.
ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1,68,912 ಸೋಂಕಿತರು ಪತ್ತೆಯಾಗಿದ್ದಾರೆ. ಹಲವು ತಿಂಗಳ ಬಳಿಕ 904 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದೀಗ ದೇಶದಲ್ಲಿ ಕೋವಿಡ್ ಕೇಸ್ಗಳ ಸಂಖ್ಯೆ 1,35,27,717 ಹಾಗೂ ಮೃತರ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ. ಭಾನುವಾರ 75,086 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 1,21,56,529 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಮತ್ತೆ ಲಾಕ್ಡೌನ್ ಸಾಧ್ಯತೆ
ಆ್ಯಕ್ಟಿವ್ ಕೇಸ್ಗಳು ಕೂಡ ದಿಢೀರನೇ 1 ಲಕ್ಷದಿಂದ 12,01,009ಕ್ಕೆ ಹೆಚ್ಚಳವಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್ಗಢ, ಉತ್ತರ ಪ್ರದೇಶ ಹಾಗೂ ಕೇರಳ - ಈ 5 ರಾಜ್ಯಗಳಲ್ಲಿ ಶೇ.70ರಷ್ಟು ಕೇಸ್ಗಳು ಸಕ್ರಿಯವಾಗಿದ್ದು, ಜನರು ಕೋವಿಡ್ ನಿಯಮಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಯಾವುದೇ ಸಮಯದಲ್ಲೂ ಲಾಕ್ಡೌನ್ ಜಾರಿಯಾಗುವ ಸಾಧ್ಯತೆಯಿದೆ.
-
#LargestVaccineDrive#Unite2FightCorona#TikaUtsav
— Ministry of Health (@MoHFW_INDIA) April 12, 2021 " class="align-text-top noRightClick twitterSection" data="
India took 85 days to administer 100 million #COVIDVaccine doses. @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva @ICMRDELHI @DDNewslive @airnewsalerts pic.twitter.com/4m7b16TumL
">#LargestVaccineDrive#Unite2FightCorona#TikaUtsav
— Ministry of Health (@MoHFW_INDIA) April 12, 2021
India took 85 days to administer 100 million #COVIDVaccine doses. @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva @ICMRDELHI @DDNewslive @airnewsalerts pic.twitter.com/4m7b16TumL#LargestVaccineDrive#Unite2FightCorona#TikaUtsav
— Ministry of Health (@MoHFW_INDIA) April 12, 2021
India took 85 days to administer 100 million #COVIDVaccine doses. @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva @ICMRDELHI @DDNewslive @airnewsalerts pic.twitter.com/4m7b16TumL
10.45 ಕೋಟಿ ಮಂದಿಗೆ ವ್ಯಾಕ್ಸಿನ್
2021ರ ಜನವರಿ 16ರಿಂದ ದೇಶಾದ್ಯಂತ ಕೋವಿಡ್ ಲಸಿಕೆ ಹಾಕಲು ಆರೋಗ್ಯ ಇಲಾಖೆ ಆರಂಭಿಸಿದ್ದು, ಈವರೆಗೆ 10,45,28,565 ವ್ಯಾಕ್ಸಿನ್ ಪಡೆದಿದ್ದಾರೆ. 85 ದಿನಗಳಲ್ಲಿ 100 ಮಿಲಿಯನ್ ವ್ಯಾಕ್ಸಿನ್ ಡೋಸ್ಗಳನ್ನು ನೀಡಿರುವುದು ದೊಡ್ಡ ಸಾಧನೆ ಎಂದು ಸಚಿವಾಲಯ ತಿಳಿಸಿದೆ. ಆದರೆ ಅನೇಕ ರಾಜ್ಯಗಳು ಲಸಿಕೆಯ ಅಭಾವ ಎದುರಿಸುತ್ತಿವೆ.