ನವದೆಹಲಿ: ದೇಶದಲ್ಲಿ ಕಳೆದ 2 ತಿಂಗಳಿಂದ ಹೊಸ ಕೋವಿಡ್ ಪ್ರಕರಣಗಳು (India Covid Cases) ಕಡಿಮೆಯಾಗುತ್ತಿದ್ದು, ನಿನ್ನೆ 10,229 ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ನಿನ್ನೆ ವೈರಸ್ಗೆ ಬಲಿಯಾದವರ ಸಂಖ್ಯೆಯಲ್ಲಿಯೂ (India Covid Deaths) ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 125 ಮಂದಿ ಮೃತಪಟ್ಟಿದ್ದಾರೆ.
ಇದೀಗ ದೇಶದ ಒಟ್ಟು ಕೇಸ್ಗಳ ಸಂಖ್ಯೆ 3,44,47,536 ಹಾಗೂ ಮೃತರ ಸಂಖ್ಯೆ 4,63,655ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 11,926 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದು, ಇಲ್ಲಿಯವರೆಗೆ ಶೇ.98.26 ಅಂದರೆ ಒಟ್ಟು 3,38,49,785 ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ: Women With Long COVID Infection : ದೀರ್ಘಕಾಲ ಕೋವಿಡ್ಗೆ ಒಳಗಾದ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ-ಕಾಳಜಿ ಅಗತ್ಯ
ಇನ್ನು 1,35,918 ಪ್ರಕರಣಗಳು ಸಕ್ರಿಯವಾಗಿದ್ದು, ಆ್ಯಕ್ಟಿವ್ ಕೇಸ್ಗಳ ಪ್ರಮಾಣ ಶೇ.0.39ಕ್ಕೆ ಇಳಿಕೆಯಾಗಿದೆ ಎಂದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Ministry of Health and Family Welfare) ಮಾಹಿತಿ ನೀಡಿದೆ.
112.34 ಕೋಟಿ ಡೋಸ್ ವ್ಯಾಕ್ಸಿನೇಷನ್
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ (Covid Vaccination) ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ 1,12,34,30,478 ಡೋಸ್ ನೀಡಲಾಗಿದೆ. ನಿನ್ನೆ ಒಂದೇ ದಿನ 30.20 ಲಕ್ಷಕ್ಕೂ ಅಧಿಕ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.