ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದ್ದು, ಭಾರತದಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ಕಾಲಿಟ್ಟು ಇಂದಿಗೆ ಒಂದು ವರ್ಷ ತುಂಬಿದೆ. 2020ರ ಜ. 30ರಂದು ಕೇರಳದ ತ್ರಿಶ್ಯೂರ್ನಲ್ಲಿ ಪ್ರಥಮ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ತಾಯಿಯ ಕೊಂದು ಮನೆ ಮುಂದೆ ಸುಟ್ಟು: ಚಿತೆಯಲ್ಲಿ ಕೋಳಿ ಬೇಯಿಸಿ ತಿಂದ ಮಗ!
ಚೀನಾದ ವುಹಾನ್ನಿಂದ ಭಾರತಕ್ಕೆ ಮರಳಿದ್ದ ವಿದ್ಯಾರ್ಥಿಯೋರ್ವನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್ಡೌನ್ ಮಾಡಿ ಮಹತ್ವದ ಘೋಷಣೆ ಮಾಡಿದ್ದರು. ಹೀಗಾಗಿ ಶಾಲಾ-ಕಾಲೇಜು, ಚಿತ್ರಮಂದಿರ, ಪಾರ್ಕ್, ದೇವಸ್ಥಾನ ಸೇರಿದಂತೆ ಎಲ್ಲವೂ ಬಂದ್ ಆಗಿದ್ದವು.
ಏಪ್ರಿಲ್ ತಿಂಗಳವರೆಗೆ ಅತಿ ಕಡಿಮೆ ಕೇಸ್ಗಳು ಭಾರತದಲ್ಲಿ ದಾಖಲಾಗಿದ್ದವು. ಆದರೆ ಮೇ ನಂತರ ಪ್ರತಿದಿನ ಲಕ್ಷಾಂತರ ಕೇಸ್ಗಳು ಭಾರತದಲ್ಲಿ ದೃಢಪಟ್ಟಿವೆ. ಭಾರತದಲ್ಲಿ ಸದ್ಯ 1,69,824 ಕೋವಿಡ್ ಆ್ಯಕ್ಟೀವ್ ಕೇಸ್ಗಳಿವೆ.
ಭಾರತದಲ್ಲಿ ಇಲ್ಲಿಯವರೆಗೆ ಬರೋಬ್ಬರಿ 1,07,33,131 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದರಲ್ಲಿ 1,54,147 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಅಮೆರಿಕ ಹಾಗೂ ಬ್ರೆಜಿಲ್ ಹೊರತುಪಡಿಸಿದ್ರೆ ಅತಿ ಹೆಚ್ಚು ಕೋವಿಡ್ ಕೇಸ್ ದಾಖಲಾಗಿದ್ದು ಭಾರತದಲ್ಲಿ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಸದ್ಯ ಕೋವಿಡ್ ವಿರುದ್ಧ ಹೋರಾಡಲು ಭಾರತದಲ್ಲಿ ಎರಡು ಲಸಿಕೆ ಅಭಿವೃದ್ಧಿಗೊಂಡಿದ್ದು, ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ನೀಡಲಾಗುತ್ತಿದೆ.