ನವದೆಹಲಿ: ಕಳೆದ 24 ಗಂಟೆಗಳಲ್ಲಿ ಹೊಸದಾಗಿ 53,480 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,21,49,335(1.21ಕೋಟಿ)ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸುಮಾರು 354 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,62,468 ಕ್ಕೆ ತಲುಪಿದೆ. ಈ ವರ್ಷ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಕಳೆದ ವರ್ಷ ಡಿ. 17 ರಂದು 355 ಮಂದಿ ಸಾವನ್ನಪ್ಪಿದ್ದರು.
ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 1,14,34,301(1.14ಕೋಟಿ)ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣವು ಶೇಕಡಾ 1.34 ರಷ್ಟಿದ್ದು, ಚೇತರಿಕೆಯ ಪ್ರಮಾಣವು ಇನ್ನೂ 94.11 ಕ್ಕೆ ಇಳಿದಿದೆ.
ಇನ್ನೂ ದೇಶದಲ್ಲಿ ಸುಮಾರು 5,52,566 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರಲ್ಲಿ ಶೇಕಡಾ 4.55 ರಷ್ಟಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಓದಿ: ಎಲ್‌ಡಿಎಫ್ - ಯುಡಿಎಫ್ ನಡುವಿನ 'ಅಪವಿತ್ರ ಮೈತ್ರಿ'ಯಿಂದ ಕೇರಳ ಹೊರಬರಬೇಕು: ಕೇಂದ್ರ ಸಚಿವ ವಿ.ಮುರಳೀಧರನ್
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಮಾರ್ಚ್ 30 ರವರೆಗೆ 24,36,72,940 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಮಂಗಳವಾರ10,22,915 ಪರೀಕ್ಷಿಸಲಾಗಿದೆ.