ETV Bharat / bharat

ದೇಶದಲ್ಲಿ ಕೋವಿಡ್​​ ಉಲ್ಬಣ : 2,593 ಹೊಸ ಪ್ರಕರಣ ಪತ್ತೆ, 44 ಮಂದಿ ಸಾವು

India covid update: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,593 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 44 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ..

India covid report
ಭಾರತದ ಕೋವಿಡ್​​ ವರದಿ
author img

By

Published : Apr 24, 2022, 1:11 PM IST

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,593 ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿವೆ. ಇದು ಹಿಂದಿನ ದಿನ ದಾಖಲಾದ (2,527) ಪ್ರಕರಣಗಳಿಗಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ತಿಳಿಸಿದೆ.

ಅದೇ ಅವಧಿಯಲ್ಲಿ 44 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 5,22,193ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 15,873 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 1,755 ಮಂದಿ ಚೇತರಿಸಿಕೊಂಡಿದ್ದು, ಒಟ್ಟು 4,25,19,479 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಭಾರತದ ಚೇತರಿಕೆಯ ಪ್ರಮಾಣ ಶೇ.98.75 ರಷ್ಟಿದೆ. ಅದೇ ಅವಧಿಯಲ್ಲಿ ದೇಶಾದ್ಯಂತ ಒಟ್ಟು 4,36,532 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈವರೆಗೆ 83.47 ಕೋಟಿ ಪರೀಕ್ಷೆಗಳನ್ನು ಮಾಡಲಾಗಿದೆ. ಸಾಪ್ತಾಹಿಕ ಪಾಸಿಟಿವಿ ದರ ಶೇ. 0.54ರಷ್ಟಿದ್ದು, ದೈನಂದಿನ ಪಾಸಿಟಿವಿ ದರ ಶೇ. 0.59ರಷ್ಟಿದೆ.

ಮತ್ತೊಂದೆಡೆ ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಮುಂದುವರೆದಿದೆ. ರಾಷ್ಟ್ರವ್ಯಾಪಿ ಇದುವರೆಗೆ ಒಟ್ಟು 187.67 ಕೋಟಿ ಡೋಸ್​ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 139 ಮಂದಿಗೆ ಕೊರೊನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.